Ad Widget .

ಹೆಣ್ಣು ಮಗುವಿಗೆ ಜನ್ಮ ನೀಡಿದ ಅದಿತಿ ಪ್ರಭುದೇವ| ಮಗುವಿನೊಂದಿಗೆ ಪೋಟೋ ಹಂಚಿಕೊಂಡ ನಟಿ

ಸಮಗ್ರ ನ್ಯೂಸ್: ಕನ್ನಡ ಚಿತ್ರರಂಗದ ನಟಿ ಅದಿತಿ ಪ್ರಭುದೇವ ಅವರು ತಾಯಿಯಾಗುತ್ತಿರುವ ವಿಷಯ ಎಲ್ಲರಿಗೂ ತಿಳಿದಿರುವಂತಹದು. ಆದ್ರೆ ಇದೀಗ ಹೆಣ್ಣು ಮಗುವಿಗೆ ಅವರು ಜನ್ಮ ನೀಡಿದ್ದಾರೆ ಎಂಬ ವಿಚಾರವನ್ನು ಸ್ವತಃ ಅದಿತಿ ಪ್ರಭುದೇವ ಅವರು ಸೋಶಿಯಲ್​ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಅವರು ಇನ್ಸ್ಟಾಗ್ರಾಮ್ ನಲ್ಲಿ ಹಾಕಿದ ಪೋಟೋಗೆ ಎಲ್ಲರೂ ಅಭಿನಂದನೆ ಸಲ್ಲಿಸುತ್ತಿದ್ದಾರೆ. ಆ ಪೋಸ್ಟ್ ನಲ್ಲಿ ಹೆಣ್ಣು ಮಗುವಿನ ಪುಟ್ಟ ಕೈಯನ್ನು ಅದಿತಿ ಅವರು ಶೇರ್​ ಮಾಡಿಕೊಂಡಿದ್ದಾರೆ. ಈಗ ಎಲ್ಲರಿಂದ ಶುಭಾಶಯದ ಮಹಾಪೂರವೆ ಹರಿದು ಬರುತ್ತಿದೆ.

Ad Widget . Ad Widget .

ಆದ್ರೆ ಅದಿತಿ ಪ್ರಭುದೇವ ಅವರಿಗೆ ಏಪ್ರಿಲ್​ 4ರಂದು ಹೆಣ್ಣು ಮಗು ಜನಿಸಿದೆ. ‘4.4.2024 ನಮ್ಮನೆ ಮಹಾಲಕ್ಷ್ಮಿ. ಎಲ್ಲರಿಗೂ ಯುಗಾದಿ ಹಬ್ಬದ ಶುಭಾಶಯಗಳು’ ಎಂಬ ಕ್ಯಾಪ್ಷನ್​ನೊಂದಿಗೆ ಅದಿತಿ ಪ್ರಭುದೇವ ಅವರು ಖುಷಿಯ ಸಮಾಚಾರ ತಿಳಿಸಿದ್ದಾರೆ. ‘ನನ್ನ ಜೀವದ ಗೆಳತಿ ಅದಿತಿ. ನಿನ್ನ ಹಾಗೆಯೇ ನಮ್ಮ ಮಗಳು’ ಎಂದು ಯಶಸ್​ ಪಾಟ್ಲಾ ಅವರು ಈ ಪೋಸ್ಟ್​ಗೆ ಕಮೆಂಟ್​ ಮಾಡಿದ್ದಾರೆ.

Ad Widget . Ad Widget .

ಅದಿತಿ ಪ್ರಭುದೇವ ಅವರು 2022ರ ನವೆಂಬರ್​ನಲ್ಲಿ ಯಶಸ್​ ಪಾಟ್ಲಾ ಅವರನ್ನು ವಿವಾಹವಾದರು. 2024ರ ಜನವರಿ 1ರಂದು ಅದಿತಿ ಪ್ರಭುದೇವ ಅವರು ತಾವು ತಾಯಿ ಆಗುತ್ತಿರುವ ವಿಷಯವನ್ನು ಬಹಿರಂಗ ಪಡಿಸಿದ್ದರು. ಇದೀಗ ಈ ವಿಚಾರ ಅಭಿಮಾನಿಗಳಿಗೆ ಇನ್ನೂ ಸಂತಸ ತಂದಿದೆ.

Leave a Comment

Your email address will not be published. Required fields are marked *