Ad Widget .

2 PUC Result ನೋಡುವಾಗ ಎರರ್ ಬಂದ್ರೆ ಹೀಗೆ ಮಾಡಿ, ಟೆನ್ಷನ್ ಆಗ್ಬೇಡಿ

Karnataka Second PUC Results 2024: ಬೆಂಗಳೂರು: ಕಳೆದ ಮಾರ್ಚ್‌ 1ರಿಂದ ಮಾರ್ಚ್ 22ರವರೆಗೆ ನಡೆದಿದ್ದ ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ಇಂದು ಪ್ರಕಟಗೊಳ್ಳಲಿದೆ. ಕರ್ನಾಟಕ ಪದವಿ ಪೂರ್ವ ಶಿಕ್ಷಣ ಇಲಾಖೆ ಇಂದು ಬೆಳಗ್ಗೆ 10 ಗಂಟೆಗೆ ಸುದ್ದಿಗೋಷ್ಠಿ ನಡೆಸಿ ಫಲಿತಾಂಶ ಪ್ರಕಟಿಸಲಿದ್ದು, ವಿದ್ಯಾರ್ಥಿಗಳ ಎದೆ ಈಗಿಂದಲೇ ಲಬ್‌ಡಬ್‌ ಹೊಡೆಯಲು ಆರಂಭಿಸಿದೆ.

Ad Widget . Ad Widget .

ಸಾಮಾನ್ಯವಾಗಿ ಪಿಯುಸಿ ಸೇರಿದಂತೆ ಯಾವುದೇ ಪರೀಕ್ಷೆಯ ಫಲಿತಾಂಶ ಚೆಕ್ ಮಾಡೋವಾಗ ಅನೇಕರು ಎಡವುತ್ತಾರೆ. ಎಷ್ಟೇ ಬಾರಿ ರಿಸಲ್ಟ್ ಚೆಕ್ ಮಾಡಿದರೂ ಎರರ್‌ ಬಂದು ಅತ್ತ ಫಲಿತಾಂಶವೂ ಸಿಗದೆ, ಇತ್ತ ಅದಕ್ಕೆ ಪರಿಹಾರವೂ ಸಿಗದೆ ಒದ್ದಾಡುತ್ತಾರೆ. ಅಂತವರಿಗೆಂದೇ ಈ ಸುದ್ದಿಯಲ್ಲಿ ಟಿಪ್ಸ್ ಕೊಡಲಾಗಿದೆ. ವಿದ್ಯಾರ್ಥಿಗಳ ಜೀವನದಲ್ಲಿ ಬಹುಮುಖ್ಯದ ಹಂತವಾದ ದ್ವಿತೀಯ ಪಿಯುಸಿ ಫಲಿತಾಂಶ ಪರಿಶೀಲನೆ ಮಾಡೊವಾಗ ಎರರ್ ಬಂದ್ರೆ ತಲೆಕೆಡಿಸಿಕೊಳ್ಳಬೇಡಿ ಇಷ್ಟು ಮಾಡಿ ಸಾಕು.

Ad Widget . Ad Widget .

ನೀವು ಮೊದಲು ನಿಮ್ಮ ಮೊಬೈಲ್‌ನಲ್ಲಿ ಕರ್ನಾಟಕ ಶಾಲಾ ಪರೀಕ್ಷೆಯ ಅಧಿಕೃತ ವೆಬ್‌ಸೈಟ್‌ karresults.nic.in ಅಂತಾ ಟೈಪ್ ಮಾಡಿ ಗೂಗಲ್‌ನಲ್ಲಿ ಸರ್ಚ್‌ ಮಾಡಿ. ನಂತರ ಕರ್ನಾಟಕ ದ್ವಿತೀಯ ಪಿಯುಸಿ ಫಲಿತಾಂಶ ಲಿಂಕ್ ಅನ್ನು ಕ್ಲಿಕ್ ಮಾಡಿ. ಅಲ್ಲಿ ನಿಮ್ಮ ವಿವರಗಳನ್ನು ಹಾಕಿ ಕ್ಲಿಕ್ ಮಾಡಿದರೆ ನಿಮ್ಮ ಫಲಿತಾಂಶ ಸಾಮಾನ್ಯವಾಗಿ ಕಾಣಬೇಕು. ಆದರೆ ಕೆಲವೊಬ್ಬರಿಗೆ ರಿಸಲ್ಟ್ ಕಾಣದೇ ಎರರ್, ಮತ್ತೊಮ್ಮೆ ಪ್ರಯತ್ನಿಸಿ ಅಥವಾ ಇನ್ಯಾವುದಾದರೂ ಸಂದೇಶ ಕಾಣಿಸುತ್ತದೆ. ಆಗ ನೀವು ಧೃತಿಗೆಡಬಾರದು.

ಸಾಮಾನ್ಯವಾಗಿ ರಿಸಲ್ಟ್ ಚೆಕ್ ಮಾಡುವ ಆತುರದಿಂದ ತಪ್ಪಾದ ಸಂಖ್ಯೆಗಳು ಅಥವಾ ವಿವರಗಳನ್ನು ಹಾಕಿರುವ ಸಾಧ್ಯತೆ ಇರುತ್ತದೆ. ಹೀಗಾಗಿ ನೀವು ನಿಮ್ಮ ರಿಜಿಸ್ಟರ್ ನಂಬರ್‌ ಅನ್ನು ಸರಿಯಾಗಿ ಹಾಕಿದ್ದೀರಾ ಎಂದು ಕ್ರಾಸ್ ಚೆಕ್ ಮಾಡಿ. ನಂತರ ನೀವು ನಿಮ್ಮ ಇತರ ವಿವರಗಳನ್ನು ಸರಿಯಾಗಿ ಹಾಕಿದ್ದೀರಾ ಎಂದು ಪರಿಶೀಲನೆ ಮಾಡಿ ಪುನಃ ಫಲಿತಾಂಶ ಚೆಕ್ ಮಾಡಿ. ಆಗಲೂ ನಿಮಗೆ ಇದೇ ರೀತಿ ಎರರ್‌ ಕಾಣಿಸಿಕೊಂಡರೆ ನೀವು ಹೊಸದಾಗಿ ಗೂಗಲ್ ಪುಟ ಓಪನ್ ಮಾಡಿ ಶುರುವಿನಿಂದ ಸರ್ಚ್ ಮಾಡಿ. ಆಗ ಖಂಡಿತವಾಗಿಯೂ ನಿಮಗೆ ಫಲಿತಾಂಶ ಕಾಣಸಿಗುತ್ತದೆ.

ರಿಸಲ್ಟ್ ಚೆಕ್‌ ಮಾಡೋದು ಹೇಗೆ?

ಹಂತ 1: ನೀವುkarresults.nic.in ಅಥವಾ pue.kar.nic ಅಂತಾ ಗೂಗಲ್‌ನಲ್ಲಿ ಸರ್ಚ್‌ ಮಾಡಿ ಪಿಯುಸಿಯ ಸಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ.
ಹಂತ 2: ಕರ್ನಾಟಕ ದ್ವಿತೀಯ ಪಿಯುಸಿ ಫಲಿತಾಂಶ ಲಿಂಕ್ ಅನ್ನು ಕ್ಲಿಕ್ ಮಾಡಿ.
ಹಂತ 3: ಲಾಗಿನ್ ಪುಟದಲ್ಲಿ ನಿಮ್ಮ ನೋಂದಣಿ ಸಂಖ್ಯೆಯೊಂದಿಗೆ ಯಾವ ವಿಭಾಗವೆಂದು ಕ್ಲಿಕ್ ಮಾಡ್ಬೇಕು (ವಿಜ್ಞಾನ, ವಾಣಿಜ್ಯ ಮತ್ತು ಕಲೆ ಆಯ್ಕೆ ಮಾಡಿಕೊಳ್ಳಿ)
ಹಂತ 4: ಕ್ಲಿಕ್ ಮಾಡಿದಾಗ ನಿಮಗೆ ಫಲಿತಾಂಶವು ಸ್ಕ್ರೀನ್ ಮೇಲೆ ಕಾಣಿಸುತ್ತದೆ.
ಹಂತ 5: ಈಗ ನೀವು ನಿಮ್ಮ ಫಲಿತಾಂಶವನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು.

ಫಲಿತಾಂಶದಲ್ಲಿ ಯಾವುದೇ ದೋಷಗಳಿಲ್ಲ ಎಂದು ಖಚಿತಪಡಿಸಿಕೊಳ್ಳಲು ಅಭ್ಯರ್ಥಿಗಳು ತಮ್ಮ ವೈಯಕ್ತಿಕ ವಿವರಗಳು ಮತ್ತು ಅಂಕಗಳನ್ನು ಪರಿಶೀಲಿಸಲು ವಿನಂತಿಸಲಾಗಿದೆ. ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಇಂದು ಬೆಳಗ್ಗೆ 10 ಗಂಟೆಗೆ ಸುದ್ದಿಗೋಷ್ಠಿ ನಡೆಸಿ ಫಲಿತಾಂಶ ಪ್ರಕಟಿಸಲಿದ್ದು, ಬಳಿಕ ಬೆಳಗ್ಗೆ 11 ಗಂಟೆಗೆ ಪದವಿ ಪೂರ್ವ ಶಿಕ್ಷಣ ಇಲಾಖೆಯ ಅಧಿಕೃತ ವೆಬ್​​ಸೈಟ್​ನಲ್ಲಿ ಫಲಿತಾಂಶ ಪ್ರಕಟವಾಗಲಿದೆ. ಈ ಬಾರಿ ರಾಜ್ಯದಾದ್ಯಂತ ಸುಮಾರು 1,124 ಕೇಂದ್ರಗಳಲ್ಲಿ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆದಿತ್ತು. ಸುಮಾರು 6.98 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಭಾಗಿಯಾಗಿದ್ದರು.

Leave a Comment

Your email address will not be published. Required fields are marked *