Ad Widget .

ಯುಗಾದಿ ವರ್ಷ ಭವಿಷ್ಯ| ಕ್ರೋಧಿ ಸಂವತ್ಸರದಲ್ಲಿ ಯಾರಿಗೆಲ್ಲಾ ಶುಭ?

ಸಮಗ್ರ ನ್ಯೂಸ್: ಹಿಂದೂಗಳಿಗೆ ನೂತನ ಸಂವತ್ಸರದ ಆರಂಭ ದಿನ. ಕ್ಯಾಲೆಂಡರ್ ಗಳಲ್ಲಿ ಜನವರಿ 1 ಅನ್ನು ಹೊಸ ವರ್ಷ ಎಂದು ಆಚರಿಸಿದರೂ ಹಿಂದೂ ಸಂಪ್ರದಾಯದಂತೆ ಯುಗಾದಿ ದಿನವೇ ಹೊಸ ವರ್ಷ. 2024ರ ಯುಗಾದಿ ಏಪ್ರಿಲ್ 9, ಮಂಗಳವಾರದಂದು ಬಂದಿದೆ. ಕ್ಯಾಲೆಂಡರ್ ಗಳಲ್ಲಿ ಯುಗಾದಿಯು ಹೊಸ ವರ್ಷದ ಆರಂಭವನ್ನು ಸೂಚಿಸುತ್ತದೆ. ಯುಗಾದಿಯಂದು ಪಂಚಾಂಗ ಶ್ರವಣ ಮಾಡುವುದು ಶ್ರೇಯಸ್ಕರ. ಈ ಹೊಸ ಸಂವತ್ಸರದಲ್ಲಿ ಯಾವ ರಾಶಿಯವರಿಗೆ ಶುಭ? ಯಾರಿಗೆ ಲಾಭ? ತಿಳಿಯೋಣ ಬನ್ನಿ…

Ad Widget . Ad Widget .

ಮೇಷ ರಾಶಿ: ಉದ್ಯೋಗದಲ್ಲಿ ಮಿಶ್ರಫಲ, ಕೆಲಸದಲ್ಲಿ ಬದಲಾವಣೆ ಮಾಡುವ ಮುನ್ನ ಒಂದು ಕೆಲಸ ಇಸಕ್ಕ ಬಳಿಕವಷ್ಟೇ ಆ ಬಗ್ಗೆ ಯೋಚಿಸಬೇಕು. ವ್ಯಾಪಾರಿಗಳಿಗೆ ಈ ಅವಧಿ ಉತ್ತಮವಾಗಿದೆ, ನಿಮ್ಮ ಆರ್ಥಿಕ ಸ್ಥಿತಿ ಉತ್ತಮವಾಗಿರಲಿದೆ. ಆದರೆ ವ್ಯಾಪಾರದ ಕಡೆಗೆ ತುಂಬಾನೇ ಗಮನಹರಿಸಬೇಕು. ಕೌಟುಂಬಿಕ ಜೀವನ ಚೆನ್ನಾಗಿರಲಿದೆ. ಈ ವರ್ಷ ನೀವು ದೈಹಿಕ ಆರೋಗ್ಯಕ್ಕಿಂತ ಮಾನಸಿಕ ಆರೋಗ್ಯಕ್ಕೆ ಹೆಚ್ಚು ಗಮನನೀಡಬೇಕು. ವಿದ್ಯಾರ್ಥಿಗಳಿಗೆ, ಉದ್ಯೋಂಗಾಕಾಂಕ್ಷಿಗಳಿಗೆ ಈ ಅವಧಿ ತುಂಬಾ ಒಳ್ಳೆಯದು.

Ad Widget . Ad Widget .

ವೃಷಭ ರಾಶಿ:
ಉದ್ಯೋಗಿಗಳಿಗೆ ಈ ಅವಧಿ ಹೆಚ್ಚು ಅನುಕೂಲಕರವಾಗಿದೆ, ವೃತ್ತಿ ಬದುಕಿನಲ್ಲಿ ಬೆಳವಣಿಗೆ ಕಾಣಬಹುದು. ಮೇ.1ರ ಬಳಿಕ ವ್ಯಾಪಾರಿಗಳು ಹೆಚ್ಚಿನ ಲಾಭ ಗಳಿಸಲು ಸಾಧ್ಯವಾಗುವುದು. ಆರ್ಥಿಕ ಪರಿಸ್ಥಿತಿಯಲ್ಲಿ ಸುಧಾರಣೆ ಕಂಡು ಬರುವುದು. ಸಾಲವನ್ನು ತೀರಿಸಲು ಸಾಧ್ಯವಾಗುವುದು, ಆದರೆ ಹಣವನ್ನು ನೋಡಿಕೊಂಡು ಖರ್ಚು ಮಾಡಿದರೆ ಒಳ್ಳೆಯದು. ಕುಟುಂಬ ಜೀವನ ಚೆನ್ನಾಗಿರಲಿದೆ. ಆರೋಗ್ಯ ಜೀವನದ ಬಗ್ಗೆ ಹೇಳುವುದಾದರೆ ದೊಡ್ಡ ಸಮಸ್ಯೆಗಳಿರಲ್ಲ. ವಿದ್ಯಾರ್ಥಿಗಳಿಗೆ ಅನುಕೂಲಕರವಾಗಿದೆ.

ಮಿಥುನ ರಾಶಿ:
ವ್ಯಾಪಾರಿಗಳು ಹೂಡಿಕೆಯಿಂದ ಉತ್ತಮ ಲಾಭ ಗಳಿಸಬಹುದು. ವ್ಯಾಪಾರಿಗಳು ತಮ್ಮ ವ್ಯವಹಾರದಲ್ಲಿ ಲಾಭ ಗಳಿಸಲು ಸಾಧ್ಯವಾಗುವುದು. ವೃತ್ತಿ ಬದುಕಿನ ದೃಷ್ಟಿಯಿಂದ ಈ ಅವಧಿ ಅನುಕೂಲಕರವಾಗಿದೆ. ಉದ್ಯೋಗದ ದೃಷ್ಟಿಯಿಂದ ಈ ಅವಧಿ ಅನುಕೂಲಕರವಾಗಿದೆ ವರ್ಗಾವಣೆಗೆ ಪ್ರಯತ್ನಿಸಿದವರಿಗೆ ಫಲ ಸಿಗಲಿದೆ. ಕುಟುಂಬ ಜೀವನದಲ್ಲಿ ಸಂತೋಷ ಇರಲಿದೆ. ಈ ವರ್ಷ ನೀವು ಆರೋಗ್ಯದ ಬಗ್ಗೆ ಜಾಗ್ರತೆವಹಿಸಿ. ಸ್ಮರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸುತ್ತಿರುವವರೆಗೆ ವರ್ಷದ ಮೊದಲಾರ್ಧ ಹೆಚ್ಚು ಅನುಕೂಲಕರವಾಗಿದೆ.

ಕರ್ಕ ರಾಶಿ:
ಈ ರಾಶಿಯ ವ್ಯಾಪಾರಿಗಳಿಗೆ ಈ ಅವಧಿ ಅನುಕೂಲಕರವಾಗಿದೆ. ನಿಮ್ಮ ಆದಾಯ ಹೆಚ್ಚಾಗಲಿದೆ. ಮಾಡಿರುವ ಸಾಲವನ್ನು ತೀರಿಸಲು ಸಾಧ್ಯವಾಗುವುದು. ಉದ್ಯೋಗಿಗಳಿಗೆ ಅನುಕೂಲಕರವಾಗಿದೆ. ಇನ್ನು ವಿದೇಶದಲ್ಲಿ ಕೆಲಸಕ್ಕಾಗಿ ಪ್ರಯತ್ನಿಸುತ್ತಿದ್ದಾರೆ ಒಳ್ಳೆಯ ಅವಕಾಶ ಸಿಗಲಿದೆ. ಹೂಡಿಕೆಗೆ ಒಳ್ಳೆಯ ಸಮಯ, ಆಸ್ತಿ, ವಾಹನ ಖರೀದಿಸಲು ಬಯಸುವುದಾದರೆ ಅದು ಸಾಧ್ಯವಾಗುವುದು. ಕುಟುಂಬ ಜೀವನದ ಬಗ್ಗೆ ಹೇಳುವುದಾದರೆ ನಿಮ್ಮ ಮಾತು ಸಮಸ್ಯೆ ಹೆಚ್ಚಿಸದಂತೆ ನೋಡಿಕೊಳ್ಳಿ. ಮದುವೆಯಾಗಲು ಬಯಸುವವರೆಗೆ ಸಂಬಂಧ ಚೆನ್ನಾಗಿಲಿದೆ. ಆರೋಗ್ಯದ ಬಗ್ಗೆ ಹೇಳುವುದಾದರೆ ಮೇ ನಂತರ ಆರೋಗ್ಯ ಚೆನ್ನಾಗಿರಲಿದೆ. ಉದ್ಯೋಗ ಹುಡುಕುತ್ತಿರುವವರೆಗೆ ಅನುಕೂಲಕರವಾಗಿದೆ.

ಸಿಂಹ ರಾಶಿ:
ವ್ಯಾಪಾರದಲ್ಲಿ ನಿಧಾನ ಪ್ರಗತಿ ಇರಲಿದೆ. ವ್ಯಾಪಾರದಲ್ಲಿ ಮಾಡುವ ಬದಲಾವಣೆ ತೊಂದರೆ ಉಂಟು ಮಾಡಬಹುದು, ಆದ್ದರಿಂದ ಈ ಬಗ್ಗೆ ಜಾಗ್ರತೆವಹಿಸಿ. ಮೇ ನಂತರ ವೃತ್ತಿ ಬದುಕಿನಲ್ಲಿ ಒತ್ತಡ ಇರಲಿದೆ. ನಿಮ್ಮ ಕೆಲಸದಲ್ಲಿ ಯಾರನ್ನೂ ಕುರುಡಾಗಿ ನಂಬಬೇಡಿ. ಈ ವರ್ಷ ಖರ್ಚು ಅಧಿಕವಿರಲಿದೆ, ಆದ್ದರಿಂದ ಹಣವನ್ನು ಮಿತಿಯಲ್ಲಿ ಖರ್ಚು ಮಾಡಿದರೆ ಒಳ್ಳೆಯದು. ಕುಟುಂಬ ಜೀವನದಲ್ಲಿ ಸಾಮರಸ್ಯ ಕಾಪಾಡಿಕೊಳ್ಳಲು ಪ್ರಯತ್ನ ಹಾಕಬೇಕು. ವಿದ್ಯಾರ್ಥಿಗಳು ತಮ್ಮ ಪ್ರಯತ್ನಕ್ಕೆ ತಕ್ಕ ಫಲ ಪಡೆಯುತ್ತೀರಿ. ಆರೋಗ್ಯದ ಬಗ್ಗೆ ಜಾಗ್ರತೆವಹಿಸಿ.

ಕನ್ಯಾ ರಾಶಿ:
ವ್ಯಾಪಾರಿಗಳಿಗೆ ಮಿಶ್ರ ಫಲಿತಾಂಶ. ವ್ಯಾಪಾರದಲ್ಲಿ ಬೆಳವಣಿಗೆ ಕಾಣುತ್ತೀರಿ, ಆದರೆ ಕೆಲ ಸಮಸ್ಯೆಗಳೂ ಎದುರಾಗಬಹುದು. ಉದ್ಯೋಗಿಗಳಿಗೆ ಈ ಹೊಸ ವರ್ಷ ಅನುಕೂಲಕರವಾಗಿದೆ. ಆರ್ಥಿಕ ದೃಷ್ಟಿಯಿಂದ ಈ ಅವಧಿ ಅನುಕೂಲಕರವಾಗಿದೆ. ಕುಟುಂಬ ಜೀವನದಲ್ಲಿ ಕೆಲ ಭಿನ್ನಾಭಿಪ್ರಾಯ ಉಂಟಾಗಬಹುದು. ತಾಳ್ಮೆಯಿಂದ ಸಮಸ್ಯೆ ಬಗೆಹರಿಸಲು ಪ್ರಯತ್ನಿಸಿ. ವಿದೇಶದಲ್ಲಿ ಉನ್ನತ ಶಿಕ್ಷಣಕ್ಕೆ ಪ್ರಯತ್ನಿಸುತ್ತಿದ್ದರೆ ಉತ್ತಮ ಅವಕಾಶ ಸಿಗಲಿದೆ.

ತುಲಾ ರಾಶಿ:
ವ್ಯಾಪಾರಿಗಳು ಆರ್ಥಿಕ ಬದಲಾವಣೆಯನ್ನು ಕಾಣಬಹುದು. ಹೊಸ ವ್ಯವಹಾರ ಮಾಡುವುದಾದರೆ ಮೇ.1ರ ಒಳಗೆ ಪ್ರಯತ್ನಿಸಿದರೆ ಒಳ್ಳೆಯದು. ಉದ್ಯೋಗಿಗಳಿಗೆ ಮಿಶ್ರಫಲ, ಕೆಲಸದಲ್ಲಿ ಜಾಗ್ರತೆವಹಿಸಬೇಕು. ಈ ಅವಧಿಯಲ್ಲಿ ಹೂಡಿಕೆ ಮಾಡುವಾಗ ಜಾಗ್ರತೆವಹಿಸಿ. ಕುಟುಂಬ ಜೀವನದ ಬಗ್ಗೆ ಹೇಳುವುದಾದರೆ ತಾಳ್ಮೆಯಿಂದ ವ್ಯವಹರಿಸಲು ಸಲಹೆ ನೀಡಲಾಗುವುದು. ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ಮಾಡುತ್ತಿರುವವರೆಗೆ ಅನುಕೂಲಕರವಾಗಿದೆ.

ವೃಶ್ಚಿಕ ರಾಶಿ:
ವ್ಯಾಪಾರಿಗಳಿಗೆ ಆರ್ಥಿಕವಾಗಿ ಒಳ್ಳೆಯದು. ನಿಮ್ಮ ವ್ಯಾಪಾರದಲ್ಲಿ ಬೆಳವಣಿಗೆ ಕಾಣುವಿರಿ. ಆದರೆ ವ್ಯವಹಾರದಲ್ಲಿ ಆತುರದ ನಿರ್ಧಾರ ತೆಗೆದುಕೊಳ್ಳಬೇಡಿ. ವೃತ್ತಿ ಜೀವನದ ದೃಷ್ಟಿಯಿಂದ ಈ ಅವಧಿ ಉತ್ತಮವಾಗಿದೆ, ಇನ್ನು ನೀವು ಕೆಲಸ ಬದಲಾಯಿಸಲು ಪ್ರಯತ್ನಿಸುತ್ತಿದ್ದರೆ ಈ ಅವಧಿ ಉತ್ತಮವಾಗಿದೆ. ಕುಟುಂಬ ಜೀವನದಲ್ಲಿ ಸಾಮರಸ್ಯ ಇರಲಿದೆ. ವಿದ್ಯಾರ್ಥಿಗಳಿಗೆ ಅತಿಯಾದ ಆತ್ಮವಿಶ್ವಾಸ ಒಳ್ಳೆಯದಲ್ಲ.

ಧನು ರಾಶಿ:
ಧನು ರಾಶಿಯವರಿಗೆ ಆರ್ಥಿಕವಾಗಿ ಒಳ್ಳೆಯದು. ಉದ್ಯೋಗಿಗಳು ತಮ್ಮ ಕೆಲಸ ಕಾರ್ಯದಲ್ಲಿ ಯಶಸ್ಸು ಪಡೆಯುತ್ತಾರೆ. ಆದರೆ ಉದ್ಯೋಗದ ಬಗ್ಗೆ ಹೇಳುವುದಾದರೆ ಚಕ್ಕ ಅಭದ್ರತೆ ಕಾಡುವುದು. ಇನ್ನು ನೀವು ಹೂಡಿಕೆ ಮಾಡುವುದಾದರೆ ಅದರ ಬಗ್ಗೆ ಚೆನ್ನಾಗಿ ವಿಚಾರಿಸಿದ ಬಳಿಕವಷ್ಟೇ ಮಾಡಿ. ವಿದ್ಯಾರ್ಥಿಗಳು ಹೆಚ್ಚಿನ ಗಮನಕೊಟ್ಟು ಓದಬೇಕು. ಆರೋಗ್ಯ ಸಮಸ್ಯೆ ನಿರ್ಲಕ್ಷ್ಯ ಮಾಡಲು ಹೋಗಬೇಡಿ.

ಮಕರ ರಾಶಿ:
ಮಕರ ರಾಶಿಯವರು ವ್ಯವಹಾರದಲ್ಕಿ ಮೇ 1ರ ನಂತರ ಅನುಕೂಲಕರ ಪ್ರಯೋಜನ ಪಡೆಯಲು ಸಾಧ್ಯವಾಗುವುದು. ವ್ಯವಹಾರದಲ್ಲಿ ಅನುಕೂಲಕರ ಪ್ರಯೋಜನ ಪಡೆಯಲು ಸಾಧ್ಯವಾಗುವುದು. ಉದ್ಯೋಗಿಗಳು ಧನಾತ್ಮಕ ಬದಲಾವಣೆಯನ್ನು ಕಾಣಬಹುದು. ಆರ್ಥಿಕ ಸ್ಥಿತಿ ಬಗ್ಗೆ ಹೇಳುವುದಾದರೆ ಈ ವರ್ಷ ನಿಮಗೆ ಉತ್ತಮವಾಗಿರಲಿದೆ. ಕುಟುಂಬ ಜೀವನದ ಬಗ್ಗೆ ಹೇಳುವುದಾದರೆ ಕೆಲ ಸಮಸ್ಯೆಗಳು ಇರಬಹುದು. ಆರೋಗ್ಯ ಸಮಸ್ಯೆಯಿದ್ದರೆ ನಿರ್ಲಕ್ಷ್ಯ ಬೇಡ.

ಕುಂಭ ರಾಶಿ:
ಪಾಲುದಾರಿಕೆಯಲ್ಲಿ ವ್ಯವಹಾರ ಮಾಡುತ್ತಿದ್ದರೆ ನಿಮ್ಮ ಪಾಲುದಾರರ ಬಗ್ಗೆ ಜಾಗ್ರತೆವಹಿಸಿ. ಈ ವರ್ಷ ಲಾಭ ನಷ್ಟದ ಪರಿಸ್ಥಿತಿ ಇರಬಹುದು, ಆದ್ದರಿಂದ ಜಾಗ್ರತೆಯಿಂದ ವ್ಯವಹಾರ ಮಾಡದಿದ್ದರೆ ಜಾಗ್ರತೆವಹಿಸಿ. ಈ ವರ್ಷ ಕೆಲಸ ಬದಲಾಯಿಸು ಪ್ರಯತ್ನಿಸುತ್ತಿದ್ದರೆ ನಿಮ್ಮ ಪ್ರಯತ್ನವನ್ನು ಮತ್ತಷ್ಟು ಚುರುಕುಗೊಳಿಸಿ. ಆರ್ಥಿಕ ಸ್ಥಿತಿ ಬಗ್ಗೆ ಹೇಳುವುದಾದರೆ ನೋಡಿಕೊಂಡು ಹಣ ಖರ್ಚು ಮಾಡಬೇಕು. ಕುಟುಂಬದೊಂದಿಗೆ ಬಾಂಧವ್ಯ ಚೆನ್ನಾಗಿರಲಿದೆ.ನ ಆರೋಗ್ಯ ಸಮಸ್ಯೆಗಳನ್ನು ನಿರ್ಲಕ್ಷ್ಯ ಮಾಡಬಾರದು.

ಮೀನ ರಾಶಿ:
ವ್ಯವಹಾರವನ್ನು ವಿಸ್ತರಿಸಲು ಬಯಸುವವರೆಗೆ ಈ ಅವಧಿ ಅನುಕೂಲಕರವಾಗಿರಲಿದೆ. ಆದರೆ ಕೇತುವಿನ ಸ್ಥಾನ ನಿಮ್ಮ ವ್ಯವಹಾರದಲ್ಲಿ ಕೆಲ ಅಡೆತಡೆ ಉಂಟು ಮಾಡಬಹುದು, ನೀವು ನಿಮ್ಮ ವ್ಯವಹಾರದ ಕಡೆಗೆ ಹೆಚ್ಚು ಗಮನಹರಿಸಿ. ಉದ್ಯೋಗಿಗಳು ತಮ್ಮ ಕೆಲಸವನ್ನು ಹೆಚ್ಚು ಶ್ರದ್ಧೆಯಿಂದ ಮಾಡಬೇಕು, ಆರೋಗ್ಯದ ಕಡೆಗೆ ಗಮನಹರಿಸಬೇಕು. ವಿದ್ಯಾರ್ಥಿಗಳಿಗೆ ಮೊದಲಾರ್ಧ ಅನುಕೂಲಕರವಾಗಿದೆ.

Leave a Comment

Your email address will not be published. Required fields are marked *