ಡಾ. ಹೆಡಗೆವಾರ್ ಅವರು ಮಾನವೀಯತೆ, ಶಿಸ್ತಿನ ಮೂಲಕ ಭಾರತೀಯರಲ್ಲಿ ರಾಷ್ಟ್ರೀಯತೆಯನ್ನು ಬೆಳೆಸುವ ಕೆಲಸ ಮಾಡಿದರು ಎಂದು ಸ್ವರಾಜ್ಯ ಪತ್ರಿಕೆಯ ಸಂಪಾದಕೀಯ ನಿರ್ದೇಶಕ ಆರ್. ಜಗನ್ನಾಥನ್ ಬರೆದಿರುವ ‘ಮ್ಯಾನ್ ಆಫ್ ದಿ ಮಿಲೇನಿಯಾ ಡಾ. ಹೆಡಗೆವಾರ್’ ಎಂಬ ಪುಸ್ತಕವನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದರು.
ಬಸವನಗುಡಿಯ ಬಿಎಂಎಸ್ ಇಂಜಿನಿಯರಿಂಗ್ ಕಾಲೇಜು ಸಭಾಂಗಣದಲ್ಲಿ ಮಂಥನ (ಬೆಂಗಳೂರು) ವತಿಯಿಂದ ಕಾರ್ಯಕ್ರಮ ನಡೆಯಿತು. ಬ್ಲಾಕ್ ಅಂಡ್ ವೈಟ್ ಪರಿಕಲ್ಪನೆ ದೃಷ್ಟಿಕೋನದಲ್ಲಿ ಪಾಶ್ಚಾತ್ಯರಂತೆ ಎಲ್ಲವನ್ನೂ ನೋಡುವುದನ್ನು ರೂಢಿಸಿಕೊಂಡಿದ್ದೇವೆ. ಆದರೆ, ರಾಷ್ಟ್ರೀಯ ಸ್ವಯಂ ಸೇವಕ ಸಂಘವನ್ನು ಆ ರೀತಿ ನೋಡಲು ಸಾಧ್ಯವಿಲ್ಲ. ದೇವರನ್ನು ಮೊದಲು ನಂಬಬೇಕು. ನಂಬದಿರುವರು ಪ್ರೇತದ ಆರಾಧಕರು. ನನ್ನದು ಸರಿ, ನಿನ್ನದು ತಪ್ಪು ಎಂಬ ಪಾಶ್ಚಾತ್ಯರ ದೃಷ್ಟಿ ಸರಿಯಲ್ಲ. ಹೆಡಗೆವಾರ್ ಅವರ ಜನಾಂಗವಾದ, ಇನ್ನಿತರ ಸಿದ್ಧಾಂತಗಳನ್ನು ಕೂಡ ಇದೇ ರೀತಿ ನೋಡಿ ಪ್ರತಿಕ್ರಿಯಿಸಿದ್ದಾರೆ ಎಂದು ತಿಳಿಸಿದರು.
ದೇವರನ್ನು ಮೊದಲು ನಂಬಬೇಕು. ನಂಬದಿರುವರು ಪ್ರೇತದ ಆರಾಧಕರು. ನನ್ನದು ಸರಿ, ನಿನ್ನದು ತಪ್ಪು ಎಂಬ ಪಾಶ್ಚಾತ್ಯರ ದೃಷ್ಟಿ ಸರಿಯಲ್ಲ. ಹೆಡಗೆವಾರ್ ಅವರ ಜನಾಂಗವಾದ, ಇನ್ನಿತರ ಸಿದ್ಧಾಂತಗಳನ್ನು ಕೂಡ ಇದೇ ರೀತಿ ನೋಡಿ ಪ್ರತಿಕ್ರಿಯಿಸಿದ್ದಾರೆ. ಅದಕ್ಕೆ ಹಲವು ಆಯಾಮಗಳು ಇರುವುದನ್ನು ಗಮನಿಸಿಲ್ಲ ಎಂದು ತಿಳಿಸಿದರು.
ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸಹ ಸರಕಾರ್ಯವಾಹ ಮುಕುಂದ ಸಿ.ಆರ್. ಅವರು ಮಾತನಾಡಿ, ಸಂಘ ಕಟ್ಟುವುದಕ್ಕೂ ಮುನ್ನ ಡಾ. ಹೆಡಗೆವಾರ್ ರಾಜಕಾರಣಿಯಾಗಿದ್ದರು. ರಾಜಕೀಯೇತರವಾಗಿ ಆರ್‍ಎಸ್‍ಎಸ್ ಹುಟ್ಟು ಹಾಕಿದ ಅವರು, ಅದಕ್ಕೂ ಮೊದಲು ಕಾಂಗ್ರೆಸ್ಸಿನ ಕೇಂದ್ರ ಪ್ರಾವಿಡೆನ್ಸಿನ ಪ್ರಧಾನ ಕಾರ್ಯದರ್ಶಿ ಮತ್ತು ಕ್ರಾಂತಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದರು. ಅವರು ಯಾವುದೇ ನಿರೀಕ್ಷೆ ಇಲ್ಲದೆ ಮತ್ತು ನಿಸ್ವಾರ್ಥ ಮನೋಭಾವದಿಂದ ದೇಶ ಸೇವೆಗೆ ಮುಂದಾಗಿದ್ದರು. ರಾಷ್ಟ್ರಕ್ಕೆ ಉಳಿಗಾಲವಿಲ್ಲ ಎಂಬುದನ್ನು ಅರಿತ ಅವರು, ಭಾಷೆ, ಸಮುದಾಯ, ಕೌಂಟುಬಿಕ ಸೇರಿ ಅನೇಕ ವಿಷಯಾಧಾರಿತವಾಗಿ ಆಲೋಚಿಸಿ, ಕೇಡರ್ ಆಧಾರದಲ್ಲಿ ತಳಮಟ್ಟದಿಂದ ಸ್ವಯ ಸೇವಕ ತಂಡವನ್ನು ಕಟ್ಟಿದರು. ಈ ಪುಸ್ತಕದಲ್ಲಿರುವ ಅವರ ಬಗ್ಗೆ ಮತ್ತು ಅವರ ಚಿಂತನೆ, ಕಾರ್ಯ ಚಟುವಟಿಕೆಗಳು ಇಂದಿಗೂ ಗುರುತಿಸಬಹುದಾಗಿದೆ ಎಂದು ನುಡಿದರು.