Ad Widget .

14 ಕ್ಷೇತ್ರಗಳಲ್ಲಿ 247 ಅಭ್ಯರ್ಥಿಗಳು ಫೈನಲ್/ 53 ನಾಮ ಪತ್ರ ವಾಪಸ್

ಸಮಗ್ರ ನ್ಯೂಸ್: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ನಡೆಯಲಿರುವ ಮೊದಲ ಹಂತದ ಚುನಾವಣೆಯಲ್ಲಿ ಒಟ್ಟು 247 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ನಾಮಪತ್ರ ಹಿಂಪಡೆಯಲು ಕೊನೆಯ ದಿನವಾದ ಸೋಮವಾರ 52 ಮಂದಿ ಹಾಗೂ ಏ.6 ರಂದು ಒಬ್ಬರು ಸೇರಿದಂತೆ 53 ಮಂದಿ ಉಮೇದುವಾರಿಕೆ ಹಿಂಪಡೆದಿದ್ದಾರೆ.

Ad Widget . Ad Widget .

ಒಟ್ಟು 270 ಪುರುಷ 21 ಮಹಿಳೆಯರು ಸೇರಿದಂತೆ 300 ಅಭ್ಯರ್ಥಿಗಳು ಉಮೇದುವಾರಿಕೆ ಸಲ್ಲಿಸಿದ್ದರು. ಈ ಪೈಕಿ 53 ಮಂದಿ ನಾಮಪತ್ರ ವಾಪಸ್ ಪಡೆದಿದ್ದು, 247 ಮಂದಿ ಕಣದಲ್ಲಿ ಉಳಿದಿದ್ದಾರೆ. ಈ ಪೈಕಿ 226 ಪುರುಷ ಹಾಗೂ 21 ಮಹಿಳಾ ಅಭ್ಯರ್ಥಿಗಳು ಅಂತಿಮವಾಗಿ ಕಣದಲ್ಲಿದ್ದಾರೆ.

Ad Widget . Ad Widget .

ಉಡುಪಿ-ಚಿಕ್ಕಮಗಳೂರು 10, ಹಾಸನ 15. ದಕ್ಷಿಣ ಕನ್ನಡ 9. ಚಿತ್ರದುರ್ಗ 20, ತುಮಕೂರು 18, ಮಂಡ್ಯ 14, ಮೈಸೂರು 18, ಚಾಮರಾಜನಗರ 14, ಬೆಂಗಳೂರು ಗ್ರಾಮಾಂತರ 15, ಬೆಂಗಳೂರು ಉತ್ತರ 21, ಬೆಂಗಳೂರು ಕೇಂದ್ರ 24, ಬೆಂಗಳೂರು ದಕ್ಷಿಣ 22, ಚಿಕ್ಕಬಳ್ಳಾಪುರ 29 ಹಾಗೂ ಕೋಲಾರದಲ್ಲಿ 18 ಅಭ್ಯರ್ಥಿಗಳು ಅಂತಿಮವಾಗಿ ಕಣದಲ್ಲಿ ಇದ್ದಾರೆ.

Leave a Comment

Your email address will not be published. Required fields are marked *