Ad Widget .

ಡಾಲಿಯ ಹೊಸ ಸಿನಿಮಾದ ಫಸ್ಟ್ ಲುಕ್ ರಿಲೀಸ್! ಏನು ಕಥೆ ಹೇಳುತ್ತೆ ಈ ಕೋಟಿ?

ಸಮಗ್ರ ನ್ಯೂಸ್: ಡಾಲಿ ಧನಂಜಯ್ ಹೊಸ ಸಿನಿಮಾದ ಸುದ್ದಿ ಮೊನ್ನೆಯಿಂದಲೇ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಹಾಗಾಗಿಯೇ ಈ ಸಿನಿಮಾ ಬಗ್ಗೆ ಸಾಕಷ್ಟು ಕುತೂಹಲ ಕ್ರಿಯೇಟ್ ಆಗಿದೆ. ಯಾವ ರೀತಿಯ ಚಿತ್ರವನ್ನಈ ಸಲ ಡಾಲಿ ಧನಂಜಯ್ ಮಾಡ್ತಾರೆ ಅನ್ನುವ ಪ್ರಶ್ನೆ ಕೂಡ ಇತ್ತು. ಅದರ ಬೆನ್ನಲ್ಲಿಯೇ ಸಿನಿಮಾದ ಮೊದಲ ಪೋಸ್ಟರ್ ಯುಗಾದಿ ಹಬ್ಬಕ್ಕೆ ಬರುತ್ತದೆ ಅನ್ನೋ ಸುದ್ದಿ ಕೂಡ ಇತ್ತು. ಆ ಪ್ರಕಾರ ಹಬ್ಬಕ್ಕೆ ಸಿನಿಮಾದ ಮೊದಲ ಪೋಸ್ಟರ್ ಬಂದಿದೆ. ಕೋಟಿ ಅನ್ನುವ ಟೈಟಲ್ ಕೂಡ ರಿವೀಲ್ ಆಗಿದೆ. ಇದರೊಟ್ಟಿಗೆ ಒಂದಷ್ಟು ಅಧಿಕೃತ ಮಾಹಿತಿ ಕೂಡ ಹೊರ ಬಂದಿದೆ. ಇದನ್ನ ಕುರಿತು ಒಂದು ಸ್ಟೋರಿ ಇಲ್ಲಿದೆ ಓದಿ.

Ad Widget . Ad Widget .

ಕೋಟಿ ಸಿನಿಮಾದ ಪೋಸ್ಟರ್ ಇಂಟ್ರಸ್ಟಿಂಗ್ ಆಗಿದೆ. ಕೋಟಿ ಅಂದ್ರೆ ಇಲ್ಲಿ ಕೋಟಿ ಕೋಟಿ ಲೆಕ್ಕದ ವಿಚಾರವೇ ಇದ್ದಂತೆ ಕಾಣುತ್ತಿದೆ. ದುಡ್ಡಿನಲ್ಲಿಯೇ ನಾಯಕ ನಟ ಧನಂಜಯ್ ಪೋಸ್ಟರ್ ಡಿಸೈನ್ ಮಾಡಲಾಗಿದೆ. ಇದರೊಟ್ಟಿಗೆ ಧನಂಜಯ್ ಕಣ್ಣುಗಳು ಮಾತ್ರ ಇಲ್ಲಿಹೆಚ್ಚು ಗಮನ ಸೆಳೆಯುತ್ತಿವೆ.

Ad Widget . Ad Widget .

ಕೋಟಿ ಚಿತ್ರದ ಇನ್ನೂ ಒಂದು ವಿಶೇಷ ಅಂದ್ರೆ, ಪರಮೇಶ್ ಗುಂಡ್ಕಲ್ ಈ ಚಿತ್ರವನ್ನಡೈರೆಕ್ಷನ್ ಮಾಡುತ್ತಿದ್ದಾರೆ. ಈ ಚಿತ್ರದ ಮೂಲಕವೇ ತಮ್ಮ ಡೈರೆಕ್ಷನ್ ಜರ್ನಿ ಆರಂಭಿಸಿದ್ದಾರೆ. ಬೆಳ್ಳಿಪರದೆ ಮೇಲೆ ಹೊಸ ಹೊಸ ಕಥೆಗಳನ್ನ ಹೇಳಬೇಕು ಅಂತಲೇ ಕನಸು ಇಟ್ಟುಕೊಮಡೇ ಪರಮ್ ಇದೀಗ ಡೈರೆಕ್ಷನ್‌ಗೆ ಬಂದಿದ್ದಾರೆ.

ಕೋಟಿ ಸಿನಿಮಾವನ್ನ ಜಿಯೋ ಸ್ಟುಡಿಯೋ ನಿರ್ಮಿಸುತ್ತಿದೆ. ಜ್ಯೋತಿ ದೇಶಪಾಂಡೆ ಈ ಮೂಲಕ ಕನ್ನಡಕ್ಕೂ ಬಂದಿದ್ದಾರೆ. ಸಿನಿಮಾದ ಮೊದಲ ಪೋಸ್ಟರ್ ಇದೀಗ ಗಮನ ಸೆಳೆಯುತ್ತಿದೆ. ಇದರ ಬೆನ್ನಲ್ಲಿಯೇ ಈ ಸಿನಿಮಾದ ಮೊದಲ ಟೀಸರ್ ಕೂಡ ರಿಲೀಸ್ ಆಗುತ್ತಿದೆ.

ಕೋಟಿ ಸಿನಿಮಾದಲ್ಲಿ ಕೋಟಿ ಕನಸಿನ ಸಾಮಾನ್ಯ ವ್ಯಕ್ತಿಯ ಕಥೆ ಇದೆ ಅನ್ನೋ ಸುದ್ದಿ ಇದೆ. ಆದರೆ ಸಿನಿಮಾ ತಂಡ ಇದರ ಬಗ್ಗೆ ಹೆಚ್ಚು ಏನೂ ಹೇಳಿಕೊಂಡಿಲ್ಲ. ಹಾಗಂತ ಈಗಲೇ ಏನೂ ಹೇಳಲ್ಲ ಅನ್ಕೋಬೇಡಿ. ಇದೇ ತಿಂಗಳು ಚಿತ್ರದ ಮೊದಲ ಟೀಸರ್ ರಿಲೀಸ್ ಕೂಡ ಆಗುತ್ತಿದೆ. ಕೋಟಿ ಸಿನಿಮದ ಮೊದಲ ಟೀಸರ್ ಇದೇ ತಿಂಗಳು ರಿಲೀಸ್ ಆಗುತ್ತಿದೆ. ಏಪ್ರಿಲ್ -13 ರಂದು ಈ ಚಿತ್ರದ ಟೀಸರ್ ಹೊರ ಬರುತ್ತಿದೆ. ಸಂಜೆ 5 ಗಂಟೆ ಹೊತ್ತಿಗೆ ರಿಲೀಸ್ ಆಗ್ತಿರೋ ಈ ಟೀಸರ್ ಅಲ್ಲಿ ಏನೆಲ್ಲ ಇರುತ್ತದೆ ಅನ್ನುವ ಕುತೂಹಲ ಜಾಸ್ತಿ ಆಗಿದೆ.

ಕೋಟಿ ಸಿನಿಮಾದ ಎಲ್ಲ ಮಾಹಿತಿ ಇನ್ನು ಹೊರ ಬಂದಿಲ್ಲ. ಸಿನಿಮಾ ತಂಡವೇ ಒಂದೊಂದಾಗಿಯೇ ಇದೀಗ ಬಿಟ್ಟುಕೊಡುತ್ತಿದೆ. ಸದ್ಯ ಪೋಸ್ಟರ್ ರಿಲೀಸ್ ಮಾಡಿದೆ. ಇನ್ನು ಕೆಲವು ದಿನದ ಬಳಿಕ ಚಿತ್ರದ ಮೊದಲ ಟೀಸರ್ ಬರುತ್ತದೆ. ಆ ದಿನವೇ ಬಹುಶಃಸಿನಿಮಾ ಇತರ ಮಾಹಿತಿ ಹೊರಗೆ ಬರಬಹುದು ಅನಿಸುತ್ತದೆ.

Leave a Comment

Your email address will not be published. Required fields are marked *