ಸಮಗ್ರ ನ್ಯೂಸ್: ಎಪ್ರಿಲ್ 8, 2024 ರಂದು ಅಂದರೆ ಸೋಮವಾರ ಖಗೋಳ ವಿಜ್ಞಾನವು ವಿಸ್ಮಯಕಾರಿ ವಿದ್ಯಮಾನಕ್ಕೆ ಸಾಕ್ಷಿಯಾಗುತ್ತಿದೆ. ವರ್ಷದ ಮೊದಲ ಸೂರ್ಯಗ್ರಹಣ ಗೋಚರವಾಗುತ್ತಿದ್ದು, ಅದರ ಫಲಾಫಲಗಳ ಬಗ್ಗೆ ಭಾರೀ ಚರ್ಚೆ ಆಗುತ್ತಿದೆ. ಯುಗಾದಿಗೆ ಮೊದಲು ಸಂಭವಿಸುತ್ತಿರುವ ಈ ಗ್ರಹಣ ಧಾರ್ಮಿಕವಾಗಿ ಹಲವು ಚರ್ಚೆಗೆ ಎಡೆಮಾಡಿಕೊಟ್ಟಿದೆ.
ಅಪರೂಪದ ವಿದ್ಯಮಾನವು ಭಾರತದಲ್ಲಿ ಗೋಚರವಾಗದಿದ್ದರೂ, ಇತರೆ ದೇಶಗಳಲ್ಲಿ ಸೂರ್ಯಗ್ರಹಣವನ್ನು ನೋಡಬಹುದಾಗಿದೆ. ಮ್ಯಾಕ್ಸಿಕೋ, ಯುನೈಟೆಡ್ ಸ್ಟೇಟ್, ಕೆನಾಡದಲ್ಲಿ ವರ್ಷದ ಮೊದಲ ಸೂರ್ಯಗ್ರಹಣ ಗೋಚರಿಸುತ್ತದೆ.
ಗ್ರಹಣದ ನೆರಳು ಮೊದಲ ಬಾರಿಗೆ ದಕ್ಷಿಣ ಪೆಸಿಫಿಕ್ ಸಮುದ್ರದ ಮೇಲೆ ಬೀಳಲಿದೆ. ಉತ್ತರ ಅಮೆರಿಕದ ಮ್ಯಾಕ್ಸಿಕೋ ಪೆಸಿಫಿಕ್ ಕರಾವಳಿ ಪ್ರದೇಶದಲ್ಲಿ ಅಲ್ಲಿನ ಕಾಲಮಾನ ಬೆಳಗ್ಗೆ 11:07ಕ್ಕೆ ಗೋಚರ ಆಗಲಿದೆ. ಭಾರತೀಯ ಕಾಲಮಾದಲ್ಲಿದ್ದ 10.37ಕ್ಕೆ ಅಮೆರಿಕದಲ್ಲಿ ಸೂರ್ಯಗ್ರಹಣದ ನೆರಳು ಭೂಮಿಗೆ ಬೀಳಲಿದೆ.
ಬರೋಬ್ಬರಿ 50 ವರ್ಷಗಳ ನಂತರ ಗೋಚರವಾಗುತ್ತಿರುವ ಅತ್ಯಂತ ದೀರ್ಘಾವಧಿಯ ಗ್ರಹಣ ಇದಾಗಿದೆ. ಈ ಸೂರ್ಯಗ್ರಹಣದ ಅವಧಿ 4 ಗಂಟೆ 25 ನಿಮಿಷಗಳಾಗಿದೆ. ಈ ಸೂರ್ಯಗ್ರಹಣದ ಮರುದಿನವೇ ಭಾರತದಲ್ಲಿ ಹಿಂದೂ ಹೊಸ ವರ್ಷ ಯುಗಾದಿ ಬಳಿಕ ರಾಮನವಮಿ ಆಚರಿಸಲಾಗುತ್ತದೆ