Ad Widget .

ಕರ್ನಾಟಕದಲ್ಲಿ ಮೊದಲ ಹಂತದ ಚುನಾವಣೆ/ ನಾಮಪತ್ರ ಹಿಂತೆಗೆಯಲು ಇಂದು‌ ಕಡೆಯ ದಿನ

ಸಮಗ್ರ ನ್ಯೂಸ್: ಕರ್ನಾಟಕದ ಮೊದಲ ಹಂತದ 14 ಲೋಕಸಭಾ ಕ್ಷೇತ್ರಗಳ ಚುನಾವಣೆಯಲ್ಲಿ ಅಭ್ಯರ್ಥಿಗಳು ಸಲ್ಲಿಸಿರುವ ನಾಮಪತ್ರ ಹಿಂಪಡೆಯಲು ಇಂದು ಕೊನೆಯ ದಿನವಾಗಿದೆ. ರಾಜ್ಯದಲ್ಲಿ 358 ಅಭ್ಯರ್ಥಿಗಳು ಒಟ್ಟು 492 ನಾಮಪತ್ರ ಸಲ್ಲಿಸಿದ್ದಾರೆ. ಈ ಪೈಕಿ 300 ನಾಮಪತ್ರಗಳು ಕ್ರಮಬದ್ಧವಾಗಿದ್ದು ಉಳಿದವು ಅಮಾನ್ಯವಾಗಿವೆ.

Ad Widget . Ad Widget .

ಸಂಜೆಯ ವೇಳೆಗೆ 14 ಜಿಲ್ಲೆಗಳಲ್ಲಿ ಯಾವ ಅಭ್ಯರ್ಥಿಗಳು ಕಣದಲ್ಲಿ ಉಳಿಯುತ್ತಾರೆ ಎಂಬುದು ಸ್ಪಷ್ಟವಾಗಲಿದೆ. ಚುನಾವಣಾ ಪ್ರಚಾರ, ರೋಡ್‌ಶೋ ಇತ್ಯಾದಿ ಈಗಾಗಲೇ ಆರಂಭವಾಗಿದ್ದು, ಮಂಗಳವಾರದಿಂದ ಚುನಾವಣಾ ಪ್ರಚಾರ ಇನ್ನಷ್ಟು ಬಿರುಸಾಗಲಿದೆ. ವಿವಿಧ ಪಕ್ಷಗಳ ರಾಷ್ಟ್ರೀಯ ನಾಯಕರು ಪ್ರಮುಖ ಕಾರ್ಯಕರ್ತರ ಸಭೆಗಳನ್ನು ಆಯೋಜಿಸಲು ಸಿದ್ಧತೆ ನಡೆಸಿದ್ದಾರೆ.

Ad Widget . Ad Widget .

24 ಅಭ್ಯರ್ಥಿಗಳ ನಾಮಪತ್ರ ಮಾನ್ಯ, 14 ತಿರಸ್ಕೃತ ರಾಜ್ಯದ ಮೊದಲ ಹಂತದ 14 ಲೋಕಸಭಾ ಕ್ಷೇತ್ರಗಳ ನಾಮಪತ್ರ ಪರಿಶೀಲನೆ ವೇಳೆ ಬೆಂಗಳೂರು ದಕ್ಷಿಣ ಕ್ಷೇತ್ರದಿಂದ ಬಾಕಿ ಉಳಿದಿರುವ ನಾಮಪತ್ರಗಳ ಪರಿಶೀಲನೆ ಪೂರ್ಣಗೊಂಡಿದ್ದು, 24 ಅಭ್ಯರ್ಥಿಗಳ ನಾಮಪತ್ರ ಮಾನ್ಯವಾಗಿದೆ. ಅಲ್ಲದೆ ರಾಜ್ಯದ 358 ಅಭ್ಯರ್ಥಿಗಳ ಪೈಕಿ 300 ಅಭ್ಯರ್ಥಿಗಳ ನಾಮಪತ್ರಗಳು ಕ್ರಮಬದ್ಧವಾಗಿವೆ. ಇತರ ಅಭ್ಯರ್ಥಿಗಳ ನಾಮನಿರ್ದೇಶನ ದಾಖಲೆಗಳು ಅಮಾನ್ಯವಾಗಿವೆ.

Leave a Comment

Your email address will not be published. Required fields are marked *