ಲಡಾಖ್‌: ಹಿಮಪಾತದಲ್ಲಿ ಸಿಲುಕಿದ್ದ 80 ಜನರನ್ನು ರಕ್ಷಿಸಿದ ಭಾರತೀಯ ಸೇನೆ

ಸಮಗ್ರ ನ್ಯೂಸ್‌ : ಕೇಂದ್ರಾಡಳಿತ ಪ್ರದೇಶ ಲಡಾಖ್‌ನ ಲೇಹ್ ಮತ್ತು ಶ್ಯೋಕ್ ನದಿ ಕಣಿವೆಯ ನಡುವಿನ 17,688 ಅಡಿ ಎತ್ತರದ ಚಾಂಗ್ ಲಾ ಪಾಸ್‌ನಲ್ಲಿ ಹಿಮಪಾತದಲ್ಲಿ ಸಿಲುಕಿದ್ದ ಕನಿಷ್ಠ 80 ಜನರನ್ನು ರಕ್ಷಿಸಲಾಗಿದೆ ಎಂದು ಸೇನೆ ಭಾನುವಾರ ಮಾಹಿತಿ ನೀಡಿದೆ.

Ad Widget ... ..

ತ್ರಿಶೂಲ್ ವಿಭಾಗದ ಸೈನಿಕರು ತಡರಾತ್ರಿ ಕಾರ್ಯಾಚರಣೆ ನಡೆಸಿದ್ದಾರೆ ಎಂದು ಭಾರತೀಯ ಸೇನೆಯ ಲೇಹ್ ಮೂಲದ 14 ಕಾರ್ಪ್ಸ್‌ ತಿಳಿಸಿದೆ.

Ad Widget

ಚಾಂಗ್ ಲಾದ ಹಿಮಾವೃತ ಪ್ರದೇಶದಲ್ಲಿ ಭಾರಿ ಹಿಮಪಾತ ಸಂಭವಿತ್ತು. ಮಾಹಿತಿ ತಿಳಿದ ತ್ರಿಶೂಲ್ ವಿಭಾಗದ ಸೈನಿಕರು ಘಟನಾ ಸ್ಥಳಕ್ಕೆ ಧಾವಿಸಿದ್ದಾರೆ. ತಡರಾತ್ರಿ 2 ಗಂಟೆಗಳ ನಿರಂತರ ಕಾರ್ಯಾಚರಣೆ ನಡೆಸಿ ಹಿಮದಲ್ಲಿ ಸಿಲುಕಿದ್ದ ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಸುಮಾರು 80 ಜನರನ್ನು ರಕ್ಷಿಸಿದ್ದಾರೆ ಎಂದು ಕಾರ್ಪ್ಸ್ ತನ್ನ ಅಧಿಕೃತ ಖಾತೆ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿದ್ದಾರೆ.

Leave a Comment

Your email address will not be published. Required fields are marked *