Ad Widget .

ಉಡುಪಿ:ನೇಜಾರು ತಾಯಿ ಮತ್ತು ಮಕ್ಕಳ ಕಗ್ಗೊಲೆ ಪ್ರಕರಣ|ಆರೋಪಿ ಪ್ರವೀಣ್ ಚೌಗುಲೆ ನ್ಯಾಯಾಲಯಕ್ಕೆ ಹಾಜರು

ಸಮಗ್ರ ನ್ಯೂಸ್‌ : ನೇಜಾರಿನಲ್ಲಿ ನಡೆದ ತಾಯಿ ಮತ್ತು ಮೂವರು ಮಕ್ಕಳ ಕೊಲೆ ಪ್ರಕರಣಕ್ಕೆ ಸಂಬಂಧಿಸಿದ ಆರೋಪಿ ಪ್ರವೀಣ್‌ ಚೌಗುಲೆಯನ್ನು ವೀಡಿಯೋ ಕಾನ್ಸರೆನ್ಸ್ ಮೂಲಕ ನ್ಯಾಯಾಧೀಶರ ಎದುರು ಹಾಜರುಪಡಿಸಲಾಯಿತು.

Ad Widget . Ad Widget .

ಈ ಪ್ರಕರಣದ ತನಿಖಾಧಿಕಾರಿ ಮಂಜುನಾಥ ಗೌಡ, ಆರೋಪಿ ಪರ ವಕೀಲರು ಈ ವೇಳೆ ಉಪಸ್ಥಿತರಿದ್ದರು.
ವಿಶೇಷ ಸರಕಾರಿ ಅಭಿಯೋಜಕರು ಮುಂದಿನ ವಿಚಾರಣೆ ಸಂದರ್ಭದಲ್ಲಿ ಪ್ರಕರಣಕ್ಕೆ ಪೂರಕವಾದ ಸಾಕ್ಷಿದಾರರ ಹೆಸರು ಸಹಿತವಾದ ಮೆಮೊ ಸಲ್ಲಿಸಬೇಕು. ಆ ಮೂಲಕ ಸಾಕ್ಷಿದಾರರಿಗೆ ಕೋರ್ಟ್ ಸಮನ್ಸ್ ನೀಡಲು ಸಾಧ್ಯವಾಗುತ್ತದೆ ಎಂದು ನ್ಯಾಯಾಧೀಶರು ವಿಚಾರಣೆ ವೇಳೆ ತಿಳಿಸಿದ್ದಾರೆ.

Ad Widget . Ad Widget .

ಪ್ರಕರಣದ ಶೀಘ್ರ ವಿಲೇವಾರಿಗೆ ಅನುಕೂಲವಾಗುವಂತೆ ಎರಡೂ ಕಡೆಯಿಂದ ಪೂರ್ಣ ಸಹಕಾರ ನೀಡಲು ಕೋರ್ಟ್ ತಿಳಿಸಿದೆ. ಮುಂದಿನ ವಿಚಾರಣೆ ಎ. 10ರಂದು ನಡೆಯಲಿದೆ. ಆ ದಿನ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಮುಂದಿನ ಮೂರು ದಿನಗಳ ಕಾಲ ವಿಚಾರಣೆಗೆ ಕರೆಯಬೇಕಾದ ಸಾಕ್ಷಿಗಳ ಕುರಿತು ಜ್ಞಾಪನಪತ್ರವನ್ನು ನ್ಯಾಯಾಲಯಕ್ಕೆ ಸಲ್ಲಿಸಲಿದ್ದಾರೆ. ಅದರಂತೆ ನ್ಯಾಯಾಲಯ ಸಾಕ್ಷಿಗಳಿಗೆ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ಜಾರಿ ಮಾಡುತ್ತದೆ. ಅಂದಿನಿಂದ ಪ್ರಕರಣದ ವಿಚಾರಣೆ ಆರಂಭಗೊಳ್ಳುತ್ತದೆ ಎಂದು ಮೂಲಗಳು ತಿಳಿಸಿವೆ.

Leave a Comment

Your email address will not be published. Required fields are marked *