ಕಡಬ: ಬಿಳಿನೆಲೆ ವಲಯ ಕಾಂಗ್ರೆಸ್ ಸಭೆ| ಬಿಜೆಪಿ – ಜೆಡಿ(ಎಸ್)ನಿಂದ ಹಲವರು ಕಾಂಗ್ರೆಸ್ ಸೇರ್ಪಡೆ

ಸಮಗ್ರ ನ್ಯೂಸ್: ಕಡಬ ತಾಲೂಕಿನ ಬಿಳಿನೆಲೆ ವಲಯ ಕಾಂಗ್ರೆಸ್ ಸಭೆ ಶನಿವಾರ(ಎ.6) ದಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುಧೀರ್ ಕುಮಾರ್ ಶೆಟ್ಟಿ ಅವರ ನೇತ್ರತ್ವದಲ್ಲಿ ನಡೆಯಿತು.

Ad Widget ... ..

ಲೋಕಸಭಾ ಚುನಾವಣೆಯ ಅವಶ್ಯಕ ಕಾರ್ಯತಂತ್ರಗಳ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು.
ಈ ಸಂದರ್ಭದಲ್ಲಿ ಬಿಜೆಪಿ ಯುವ ಮೋರ್ಚಾ ಮುಖಂಡ ನಿತಿನ್ ಗೌಡ ಮೂಜೂರು, ಜೆಡಿಎಸ್ ಸಂಘಟನಾ ಕಾರ್ಯದರ್ಶಿ ಪ್ರಶಾಂತ್ ಕಳಿಗೆ ಸೇರಿದಂತೆ ಹಲವಾರು ಬಿಜೆಪಿ, ಜೆಡಿಎಸ್ ಕಾರ್ಯಕರ್ತರು ಕಾಂಗ್ರೆಸ್ ಪಕ್ಷ ಸೇರ್ಪಡೆಗೊಂಡರು.

Ad Widget

ಸಭೆಯಲ್ಲಿ ಡಿಸಿಸಿ ವೀಕ್ಷಕರಾದ ಕಿರಣ್ ಬುಡ್ಲೆಗುತ್ತು, ಜಿಲ್ಲಾ ಪ್ರಚಾರ ಸಮಿತಿ ಸಹ ಉಸ್ತುವಾರಿ ಕೆ ಪಿ ತೋಮಸ್ , ಕಡಬ ಬ್ಲಾಕ್ ಸಂಯೋಜಕ ಪಿ ಪಿ ವರ್ಗೀಸ್ ಕಡಬ ಬ್ಲಾಕ್ ಸಹ ಉಸ್ತುವಾರಿ ಉಷಾ ಅಂಚನ್ ಕಡಬ, ಬ್ಲಾಕ್ ಉಪಾಧ್ಯಕ್ಷ ಸತೀಶ್ ಭೂಮಿಕ , ಜೆಪಿಎಂ ಚೆರಿಯನ್, ಶಾರದ ಬಿಳಿನೆಲೆ, ಪ್ರದೀಪ್ ಕಳಿಗೆ ನಾಗೇಶ್ ಬೈಲ್ ಸತೀಶ್ ಕಳಿಗೆ, ನೀಲಪ್ಪ ಗೌಡ ಕಳಿಗೆ ಸೇರಿದಂತೆ ಹಲವು ಮುಖಂಡರು ಕಾರ್ಯಕರ್ತರು ಸಭೆಯಲ್ಲಿ ಉಪಸ್ಥಿತರಿದ್ದರು.

Leave a Comment

Your email address will not be published. Required fields are marked *