Ad Widget .

ಪೊಳಲಿ ರಾಜರಾಜೇಶ್ವರಿ ದೇವಿಯ ವಾರ್ಷಿಕ ಜಾತ್ರೆಯಲ್ಲಿ ಚೆಂಡು ವಿಶೇಷ

ಸಮಗ್ರ ನ್ಯೂಸ್‌ : ಇತಿಹಾಸ ಪ್ರಸಿದ್ಧ ಸಾವಿರ ಸೀಮೆ ಪೊಳಲಿ ರಾಜರಾಜೇಶ್ವರಿ ದೇವಿಯ ವಾರ್ಷಿಕ ಜಾತ್ರೆ ಈಗಾಗಲೇ ಆರಂಭಗೊಂಡಿದ್ದು, ನಿನ್ನೆಯಿಂದ ಐದು ದಿನಗಳ ಚೆಂಡು ನಡೆಯಲಿದೆ.

Ad Widget . Ad Widget .

ಈ ಪೊಳಲಿ ಚೆಂಡನ್ನು ಮೂಡಬಿದ್ರೆಯಲ್ಲಿ ತಯಾರಿಸಿ ಪುತ್ತಿಗೆಯಿಂದ ಮಳಲಿ(ಮಣೇಲ್) ಮೂಲಕ ಪೊಳಲಿ ದೇಗುಲಕ್ಕೆ ಶನಿವಾರ ತರಲಾಯಿತು.

Ad Widget . Ad Widget .

ಪುತ್ತಿಗೆಯಿಂದ ಪೊಳಲಿಗೆ ಚೆಂಡನ್ನು ತರುವ ಜವಾಬ್ದಾರಿ ಮಳಲಿ ಕಡಪುಕರಿಯ ಗಾಣಿಕ ಸಮಾಜದವರದ್ದು. ಈ ಚೆಂಡನ್ನು ತರುವ ಪ್ರಕ್ರಿಯೆ ಅನೇಕ ರೀತಿ- ರಿವಾಜುಗಳನ್ನು ಒಳಗೊಂಡಿದೆ. ಪೊಳಲಿ ದೇವಸ್ಥಾನವವು ಮೂಡಬಿದ್ರೆ ಪುತ್ತಿಗೆ ಚೌಟ ಅರಸರ ಆಡಳಿತಕ್ಕೆ ಒಳಪಟ್ಟ ಕಾಲದಲ್ಲಿ ಪುತ್ತಿಗೆ ಚೌಟ ಅರಸರ ಸೋಮನಾಥ ದೇವಾಲಯದಿಂದ ಹೊರಡುವ ಚರ್ಮದ ಚೆಂಡಿನ ಮೆರವಣಿಗೆ ರಾಣಿ ಅಬ್ಬಕ್ಕನ ಊರಾದ ಮಣೇಲ್(ಈಗಿನ ಮಳಲಿ)ಗೆ ಬಂದು ಚೌಟ ವಶಂಸ್ಥ ಅಬ್ಬಕ್ಕನ ಮಣೇಲ್ ಅರಮನೆಯಲ್ಲಿ ರಾಣಿಯ ಸಮ್ಮುಖದಲ್ಲಿ ಚೆಂಡನ್ನು ಇಟ್ಟು, ಪ್ರದರ್ಶಿಸಲಾಗುತ್ತದೆ.

ನೆರೆದ ಊರಿನ ಜನರ ಸಂಭ್ರಮಾಚರಣೆಯ ಬಳಿಕ ಚೆಂಡಿಗೆ ಸಲ್ಲಬೇಕಾದ ಗೌರವಯುತವಾದ ರಾಜಮರ್ಯಾದೆ ಸಲ್ಲಿಕೆಯಾದ ನಂತರ ಮಣೇಲ್‌ನಿಂದ ಪೊಳಲಿಗೆ ಚೆಂಡನ್ನು ಹೋಗುವ ಪದ್ಧತಿ ನಡೆಯುತ್ತಿತ್ತು ಎಂದು ಇತಿಹಾಸಗಳಿಂದ ತಿಳಿದುಬರುತ್ತದೆ.

ಅಬ್ಬಕ್ಕನ ಕಾಲಾನಂತರ ಈ ಪದ್ಧತಿಯನ್ನು ಕಟ್ಟೆಮಾರ್ ಮನೆತನದವರು ಮುಂದುವರಿಸುತ್ತಾ ಬರುತ್ತಿದ್ದಾರೆ. ಈಗಲೂ ಚೆಂಡಿನ ಮೆರವಣಿಗೆ ಮಳಲಿ ಕಟ್ಟೆಮಾರು ಮನೆಗೆ ಬರುವ ಸಂಪ್ರದಾಯ ಸಾಂಕೇತಿಕವಾಗಿ ಮುಂದುವರಿದಿದೆ.ಆ ದಿನ ಮನೆಯ ಅಂಗಳವನ್ನು ಸಾರಿಸಿ, ರಂಗೋಲಿ ಹಾಕಿ ತಳಿರು ತೋರಣಗಳಿಂದ ಸಿಂಗರಿಸಲಾಗುತ್ತದೆ. ಪುತ್ತಿಗೆಯಿಂದ ತಂದ ಚೆಂಡನ್ನು ಮನೆಯಂಗಳದಲ್ಲಿಟ್ಟು ಪ್ರದರ್ಶಿಸಲಾಗುತ್ತದೆ. ಸುತ್ತಮುತ್ತಲಿನ ಜನರು ಸೇರಿ ಚೆಂಡಿಗೆ ಗೌರವ ಸಲ್ಲಿಸಿದ ಬಳಿಕ ಬಳಿಕವೇ ಚೆಂಡಿನ ಪ್ರಯಾಣ ಸಂಪ್ರದಾಯವಿದೆ.
ಅದನ್ನು ಈಗಲೂ ಕಟ್ಟೆಮಾರ್ ಮನೆಯವರು ಮುಂದುವರಿಸಿಕೊಂಡು ಬಂದಿದ್ದು, ಪ್ರಶಾಂತ್ ಜೈನ್ ಮತ್ತು ಮನೆಯವರು ನಿನ್ನೆ ಚೆಂಡಿಗೆ ರಾಜಮರ್ಯಾದೆ ಸಲ್ಲಿಕೆಯ ಸಂಪ್ರದಾಯವನ್ನು ನಡೆಸಿದರು.

Leave a Comment

Your email address will not be published. Required fields are marked *