ಕಾಶೀ ವಿಶ್ವನಾಥ ಮಂದಿರದ ಫೇಸ್‌ಬುಕ್ ಪೇಜ್ ಹ್ಯಾಕ್/ ಅಶ್ಲೀಲ ಚಿತ್ರ ಪೋಸ್ಟ್

ಸಮಗ್ರ ನ್ಯೂಸ್: ಕಿಡಿಕೇಡಿಗಳು, ಕಾಶೀ ವಿಶ್ವನಾಥ ಮಂದಿರದ ಫೇಸ್‌ಬುಕ್ ಪೇಜ್ ಅನ್ನು ಹ್ಯಾಕ್ ಮಾಡಿದ್ದು, ಅಶ್ಲೀಲ ಚಿತ್ರಗಳನ್ನು ಪೋಸ್ಟ್ ಮಾಡಿದ್ದಾರೆ.

Ad Widget ... ..

ದೇವಸ್ಥಾನದ ಆಡಳಿತ ಸಮಿತಿ ನಿರ್ವಹಣೆ ಮಾಡುತ್ತಿದ್ದ ವಿಶ್ವ ವಿಶ್ವನಾಥ ಟೆಂಪಲ್ ಟ್ರಸ್ಟ್ ಫೇಸ್‌ಬುಕ್ ಪೇಜ್ ಹ್ಯಾಕ್ ಮಾಡಲಾಗಿದೆ. ಭಕ್ತರು ದೇವಸ್ಥಾನ ಸಮಿತಿಗೆ ಕರೆ ಮಾಡಿ ಫೇಸ್‌ಬುಕ್ ಪೇಜ್ ಹ್ಯಾಕ್ ಆಗಿರುವ ಕುರಿತು ಮಾಹಿತಿ ನೀಡಿದ್ದಾರೆ.

Ad Widget

ಪೇಜ್‌ನಲ್ಲಿ ಅಶ್ಲೀಲ ಫೋಟೋಗಳು ಪೋಸ್ಟ್ ಆಗಿದೆ. ಅಸಂಬದ್ಧ ಪೋಸ್ಟ್‌ಗಳನ್ನು ಹಾಕಲಾಗಿದೆ. ಈ ಕುರಿತು ಮಾಹಿತಿ ತಿಳಿದ ತಕ್ಷಣ ದೇವಸ್ಥಾನ ಆಡಳಿತ ಸಮಿತಿಯ ತಾಂತ್ರಿಕ ತಂಡ ಈ ಕುರಿತು ಕಾರ್ಯನಿರ್ವಹಿಸುತ್ತಿದೆ ಎಂದು ವಿಶ್ವನಾಥ ಮಂದಿರದ ಆಡಳಿತ ಸಮಿತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವಿಶ್ವ ಭೂಷಣ್‌ ಮಿಶ್ರಾ ಹೇಳಿದ್ದಾರೆ.

ದೇವಸ್ಥಾನದ ಆಡಳಿತ ಸಮಿತಿ ಈ ಕುರಿತು ಸೈಬರ್ ಪೊಲೀಸರಿಗೆ ದೂರು ನೀಡಿದ್ದು, ಇತ್ತ ದೇವಸ್ಥಾನದ ತಾಂತ್ರಿಕ ತಂಡ, ಸೈಬರ್ ಪೊಲೀಸ್ ಹಾಗೂ ಇತರ ತಾಂತ್ರಿಕ ಸಿಬ್ಬಂದಿಗಳು ಹ್ಯಾಕ್ ಆಗಿರುವ ಫೇಸ್‌ಬುಕ್‌ ಪೇಜ್ ರಿಸ್ಟೋರ್ ಮಾಡುವ ಪ್ರಯತ್ನದಲ್ಲಿದೆ. ಫೇಸ್‌ಬುಕ್ ತಂಡದ ಜೊತೆ ಸಂಪರ್ಕ ಸಾಧಿಸಿ ಈ ಕುರಿತು ಮಾಹಿತಿ ನೀಡಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಸೈಬ‌ರ್ ಪೊಲೀಸರು ತನಿಖೆ ಆರಂಭಿಸಿದ್ದಾರೆ.

Leave a Comment

Your email address will not be published. Required fields are marked *