Ad Widget .

ದಾಖಲೆಯ ಏರಿಕೆ ಕಂಡ ಬಂಗಾರದ ಬೆಲೆ/ 71 ಸಾವಿರ ದಾಟಿದ 10 ಗ್ರಾಂ ಚಿನ್ನದ ಬೆಲೆ

ಸಮಗ್ರ ನ್ಯೂಸ್: ಬಂಗಾರದ ಬೆಲೆ ದಾಖಲೆ ಪ್ರಮಾಣದಲ್ಲಿ ಏರಿಕೆಯಾಗಿ ಮೊದಲ ಬಾರಿ 10 ಗ್ರಾಂ ಚಿನ್ನದ (24 ಕ್ಯಾರೆಟ್ ಗೋಲ್ಡ್) ದರ 71 ಸಾವಿರ ದಾಟಿದ್ದು, ಯುಗಾದಿಗೆ ಹಬ್ಬಕ್ಕೆ ಒಂದೆರಡು ದಿನ ಬಾಕಿ ಇರುವಾಗ ಬಂಗಾರ ದರ ಜನತೆಯ ತಲೆ ತಿರುಗಿಸುತ್ತಿದೆ. ಮದುವೆಗಾಗಿ ಜ್ಯುವೆಲ್ಲರಿ ಖರೀದಿಗೆ ಹೋದವರು ಹೌಹಾರುತ್ತಿದ್ದಾರೆ. ಹೀಗಾಗಿ ಖರೀದಿ ಪ್ರಮಾಣವನ್ನು ಕಡಿಮೆಗೊಳಿಸುವ ಅನಿವಾರ್ಯತೆ ಗ್ರಾಹಕರಿಗೆ ಎದುರಾಗಿದೆ.

Ad Widget . Ad Widget .

ಕಳೆದ ಹತ್ತು ದಿನಗಳಲ್ಲಿ ಬಂಗಾರದ ಬೆಲೆ 3500 – 4000 ರೂ. ನಷ್ಟು ಹೆಚ್ಚಳವಾಗಿದ್ದು, ಈ ನಡುವೆ ಎರಡು ಬಾರಿ ಮಾತ್ರ ಅಲ್ಪ ಇಳಿಕೆ ಕಂಡಿತ್ತು. ಬೆಂಗಳೂರಲ್ಲಿ ಶುಕ್ರವಾರ 22 ಕ್ಯಾರೆಟ್‍ನ 10 ಗ್ರಾಂ ಚಿನ್ನದ ಬೆಲೆ 64,150 ಇತ್ತು. ಶನಿವಾರ 65,350 ತಲುಪಿದೆ. ಅದೇ ರೀತಿ 24 ಕ್ಯಾರೆಟ್ ನ 10 ಗ್ರಾಂ ಬಂಗಾರದ ಬೆಲೆ ಶುಕ್ರವಾರ 69,980 ಇತ್ತು. ಶನಿವಾರ 71,290 ದಾಟಿತು. ಶುಕ್ರವಾರ ಒಂದು ಕೇಜಿಗೆ 80300 ಇದ್ದ ಬೆಳ್ಳಿ ಶನಿವಾರ 82,400 ಗೆ ಏರಿಕೆಯಾಗಿದೆ. ಅಲ್ಲದೆ, ಚಿನ್ನ ಹಾಗೂ ಬೆಳ್ಳಿ ಆಭರಣದ ಬೆಲೆ ಮುಂದಿನ ದಿನಗಳಲ್ಲಿ ಗಣನೀಯ ಪ್ರಮಾಣದಲ್ಲಿ ಏರಿಕೆಯಾದರೂ ಅಚ್ಚರಿಯಿಲ್ಲ ಎಂದು ಕರ್ನಾಟಕ ರಾಜ್ಯ ಜ್ಯುವೆಲ್ಲರ್ಸ್ ಫೆಡರೇಷನ್ ಅಭಿಪ್ರಾಯ ತಿಳಿಸಿದೆ.

Ad Widget . Ad Widget .

ವರ್ಷದ ಆರಂಭದಲ್ಲಿ 22 ಕ್ಯಾರೆಟ್ ಚಿನ್ನದ ದರವು ಪ್ರತಿ 10 ಗ್ರಾಂಗೆ ? 58,000 ಇತ್ತು. ಪ್ರಸ್ತುತ 65 ಸಾವಿರ ರು. ದಾಟಿದೆ. ? 7 ಸಾವಿರ ಏರಿಕೆಯಾಗಿದೆ. ಇನ್ನು, 24 ಕ್ಯಾರೆಟ್ ಚಿನ್ನ 10 ಗ್ರಾಂಗೆ ? 63,270 ಇತ್ತು. ಸದ್ಯ 71 ರು. ಮೀರಿದೆ ಅಂದರೆ, 7 ಸಾವಿರ ರುಪಾಯಿ ಏರಿಕೆಯಾಗಿದೆ. ಇದು ಹೂಡಿಕೆ ಮಾಡಿದವರಿಗೆ ಉತ್ತಮ ಲಾಭ ತಂದುಕೊಟ್ಟಿದೆ ಎಂದು ಆರ್ಥಿಕ ತಜ್ಞರು ಹೇಳಿದ್ದಾರೆ.

Leave a Comment

Your email address will not be published. Required fields are marked *