Ad Widget .

2023-24ರಲ್ಲಿ 146.01 ಕೋಟಿ ಆದಾಯ/ ಮೊದಲನೇ ಸ್ಥಾನ ಉಳಿಸಿಕೊಂಡ ಕುಕ್ಕೆ ದೇವಾಲಯ

ಸಮಗ್ರ ನ್ಯೂಸ್: 2023-24ರ ಆರ್ಥಿಕ ವರ್ಷದಲ್ಲಿ ಅತಿಹೆಚ್ಚು ಗಳಿಕೆ ಕಂಡ ಮುಜರಾಯಿ ಇಲಾಖೆಯ ದೇವಾಲಯಗಳ ಮಾಹಿತಿಯನ್ನು ಇಲಾಖೆಯ ಆಯುಕ್ತರು ಬಿಡುಗಡೆಗೊಳಿಸಿದ್ದು, ಕುಕ್ಕೆ ಸುಬ್ರಮಣ್ಯ ದೇವಾಲಯವು ಮೊದಲನೇ ಸ್ಥಾನವನ್ನು ಉಳಿಸಿಕೊಂಡಿದೆ.

Ad Widget . Ad Widget .

ಸತತವಾಗಿ ಹದಿಮೂರು ವರ್ಷವೂ ದಕ್ಷಿಣ ಕನ್ನಡ ಜಿಲ್ಲೆ, ಸುಳ್ಯ ತಾಲೂಕಿನ ಪ್ರಸಿದ್ದ ನಾಗರಾಧಾನೆಯ ಸನ್ನಿಧಿ ಕುಕ್ಕೆ ಸುಬ್ರಮಣ್ಯ ದೇವಾಲಯವು ಮೊದಲನೇ ಸ್ಥಾನವನ್ನು ಉಳಿಸಿಕೊಂಡಿದೆ. ಎರಡನೇ ಸ್ಥಾನದಲ್ಲಿ ಉಡುಪಿ ಜಿಲ್ಲೆಯ ಕೊಲ್ಲೂರು ಮೂಕಾಂಬಿಕೆ ದೇವಾಲಯವಿದೆ.

Ad Widget . Ad Widget .

2022-23ಕ್ಕೆ ಹೋಲಿಸಿದರೆ ಕುಕ್ಕೆ ದೇವಾಲಯದ ಆದಾಯವು 26 ಕೋಟಿ ಹೆಚ್ಚಾಗಿದೆ. ಕುಕ್ಕೆ ದೇವಾಲಯಕ್ಕೆ ಗುತ್ತಿಗೆ ಆಧಾರದ, ತೋಟದ ಉತ್ಪನ್ನಗಳು, ಕಟ್ಟಡಗಳ ಬಾಡಿಗೆ, ಅನುದಾನ, ವಸತಿಗೃಹ ಮುಂತಾದವುಗಳಿಂದಲೂ ಆದಾಯ ಬರುತ್ತಿದೆ.

ಕುಕ್ಕೆ ಸುಬ್ರಮಣ್ಯ ದೇವಾಲಯದಲ್ಲಿ ಸರ್ಪ ಸಂಸ್ಕಾರ ಮತ್ತು ಆಶ್ಲೇಷ ಬಲಿ ಪೂಜೆ ನೆರವೇರಿಸಲು ದೇಶದೆಲ್ಲಡೆಯಿಂದ ಭಕ್ತರು ಬರುತ್ತಾರೆ. ಎರಡು ಅಥವಾ ಮೂರು ಪಾಳಿಯಲ್ಲಿ ಈ ಪೂಜೆಯನ್ನು ದೇವಸ್ಥಾನ ನಡೆಸುತ್ತದೆ. ಕಳೆದ ಆರ್ಥಿಕ ವರ್ಷದಲ್ಲಿ ರಜಾದಿನಗಳು, ವಾರಂತ್ಯಕ್ಕೆ ಹೊಂದಿಕೊಂಡು ಬಂದಿದ್ದರಿಂದ, ಕುಕ್ಕೆ ಸೇರಿದಂತೆ ದೇವಾಲಯಗಳಲ್ಲಿ ವಿಪರೀತ ಜನದಟ್ಟಣಿ ಇದ್ದವು.

2006-07ರಲ್ಲಿ 19.76 ಕೋಟಿ ರೂಪಾಯಿ ಆದಾಯವಿದ್ದ ಕುಕ್ಕೆ ದೇವಾಲಯದ ಆದಾಯವು 2023-24ರಲ್ಲಿ 146.01 ಕೋಟಿ ರೂಪಾಯಿ ಆಗಿದೆ. ಕಳೆದ ಆರ್ಥಿಕ ವರ್ಷದಲ್ಲಿ ದೇವಾಲಯವು 123ಕೋಟಿ ಆದಾಯವನ್ನು ಗಳಿಸಿತ್ತು.

Leave a Comment

Your email address will not be published. Required fields are marked *