Ad Widget .

ಬೀದರ್ : ಬಿಜೆಪಿ, ಜೆಡಿಎಸ್ ಮೈತ್ರಿ ಹಾಲು ಜೇನು ತರಹ ಆಗಿದೆ: ಆರ್. ಅಶೋಕ

ಸಮಗ್ರ ನ್ಯೂಸ್ : ಅಮಿತ ಶಾ ಸೂಚನೆ ಮೇರೆಗೆ ಜಿಲ್ಲಾ ಮತ್ತು ತಾಲೂಕಾ ಮಟ್ಟದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ಸಮನ್ವಯ ಸಭೆ ಕರೆಯಲಾಗಿದೆ. ಹಾಗಾಗಿ ಬೀದರ್ ನಲ್ಲಿ ಜಿಲ್ಲಾ ಮಟ್ಟದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳ ಸಮನ್ವಯ ಸಭೆ ನಡೆಸಲಾಗಿದೆ ಎಂದು ವಿಪಕ್ಷ ನಾಯಕ ಆರ್. ಅಶೋಕ ಹೇಳಿದರು.

Ad Widget . Ad Widget .

ಈಗಾಗಲೇ ದೇವಗೌಡರು ಕೆಳಮಟ್ಟದಿಂದ ಬಿಜೆಪಿ ಪರ‌ ಕೆಲಸ ಮಾಡುತ್ತಾ ಇದ್ದಾರೆ. ಬಿಜೆಪಿ ಜೆಡಿಎಸ್ ಮೈತ್ರಿ ಹಾಲು ಜೇನು ತರಹ ಆಗಿದೆ ಎಂದು ಬೀದರ್‌ ನಲ್ಲಿ ವಿಪಕ್ಷ ನಾಯಕ ಆರ್. ಅಶೋಕ ಹೇಳಿದರು.

Ad Widget . Ad Widget .

ದೇವೆಗೌಡರ ಕುರಿತು ಕೆ.ರಾಜಣ್ಣ ಹೇಳಿಕೆ ವಿಚಾರವಾಗಿ ಮಾತನಾಡಿ, ಕಾಂಗ್ರೆಸ್‌ನವರಿಗೆ ಭ್ರಮ ನಿರಸಣವಾಗಿದೆ. ಸಿದ್ದರಾಮಯ್ಯ ವರುಣಾದಲ್ಲಿ ಮತ ಕೊಟ್ಟಿಲ್ಲ ಅಂದರೆ ಅತಂತ್ರ ಆಗುತ್ತೇನೆ ಎಂದಿದ್ದಾರೆ.

ಮಂಡ್ಯದಲ್ಲಿ ಡಿಕೆಶಿ ಸಹ ಅತಂತ್ರ ಆಗ್ತಿನಿ ಅಂತಾ ಹೇಳಿದ್ದಾರೆ. ದೇವೆಗೌಡರ ಕುರಿತಾಗಿ ಕೆ.ರಾಜಣ್ಣನಿಗೆ ಕೀಳಾಗಿ‌ ಮಾತಾಡೋ ಚಾಳಿ‌ ಇದೆ. ಯಾವ ವ್ಯಕ್ತಿಗೂ ನಾವು ಸಾವನ್ನ ಬಯಸಬಾರದು. ರಾಜಕಾರಣ ಅನ್ನೋದು, ಸಿದ್ದಾಂತದ ವಿರೋಧ ಹೊರತು ವಯಕ್ತಿಕ ಆಗಬಾರದು. ಇಷ್ಟು ಕೀಳು ಮಟ್ಟಕ್ಕೆ ಹೊಗೊದು ಸರಿಯಲ್ಲಾ. ಕೆ.ರಾಜಣ್ಣಾ ವಿರುದ್ದ ಆರ್. ಅಶೋಕ ಕಿಡಿಕಾರಿದ್ದಾರೆ.

ಪ್ರಧಾನಿಗೆ, ರಾಷ್ಟ್ರಪತಿಗೆ ಏಕವಚನದಲ್ಲಿ ಮಾತನಾಡೋದು ಸರಿಯಲ್ಲಾ. ಇದನ್ನೆಲ್ಲಾ ನೋಡಿದ್ರೆ, ಕಾಂಗ್ರೆಸ್ ಯುದ್ದಕ್ಕ ಮುಂಚೆನೆ ಸೋಲು ಒಪ್ಪಿಕೊಂಡಿದ್ದೆ ಎಂದರು.

Leave a Comment

Your email address will not be published. Required fields are marked *