ಕೆಎಸ್​ಆರ್​ಟಿಸಿ ಬಸ್ ಅಡ್ಡಗಟ್ಟಿ ವ್ಯಕ್ತಿಯೋರ್ವನಿಂದ ಹಲ್ಲೆ, ಬಸ್ ಚಾಲಕನಿಗೆ ಗಂಭೀರ ಗಾಯ

ಸಮಗ್ರ ನ್ಯೂಸ್: ವ್ಯಕ್ತಿಯೊಬ್ಬ ಕೆಎಸ್​ಆರ್​ಟಿಸಿ ಬಸ್ ಅಡ್ಡಗಟ್ಟಿ ಚಾಲಕ, ನಿರ್ವಾಹಕ ಮತ್ತು ಪ್ರಯಾಣಿಕರ ಮೇಲೆ ಹಲ್ಲೆ ನಡೆಸಿರುವ ಘಟನೆ ಉತ್ತರಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಶಿರವಾಡ ಜಾಂಬಾ ಕ್ರಾಸ್ ಬಳಿ ನಡೆದಿದೆ.

Ad Widget ... ..

ಶಿರವಾಡದ ಸುಭಾಷ್ ಬಾಡಕರ್ ಈ ರೀತಿಯ ವರ್ತನೆ ತೋರಿದು. ಈ ಬಸ್​ ಕಾರವಾರದಿಂದ ಸಿದ್ದರಗೆ ತೆರಳುತ್ತಿತ್ತು. ಈ ವೇಳೆ ಸುಭಾಷ್ ಬಾಡಕರ್ ಶಿರವಾಡ ಜಾಂಬಾ ಕ್ರಾಸ್ ಬಳಿ ಬಸ್​ ಮುಂದೆ ಬೈಕ್​ ನಿಲ್ಲಿಸಿದ್ದಾನೆ. ದಾರಿ ಬಿಡುವಂತೆ ಪ್ರಯಾಣಿಕ ಹೇಳಿದ್ದಕ್ಕೆ ಆತನ ಮೇಲೆ ಹಲ್ಲೆ ಮಾಡಿದ್ದಾನೆ. ಅಲ್ಲದೆ, ವಿಚಾರಿಸಲು ಹೋದ ಚಾಲಕ, ನಿರ್ವಾಹಕನ ಶರ್ಟ್ ಹಿಡಿದು ಅವರ ಮೇಲೂ ಹಲ್ಲೆ ಮಾಡಿದ್ದಾನೆ.

Ad Widget

ಇದರಿಂದ ಹಲ್ಲೆಗೊಳಗಾದ ಬಸ್ ಚಾಲಕ ಮಹಮ್ಮದ್ ಇಸಾಕ್ (28) ತಲೆಗೆ ಗಂಭೀರ ಗಾಯವಾಗಿದೆ. ಗಾಯಗೊಂಡ ಬಸ್ ಚಾಲಕನನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದು, ಕಾರವಾರ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Comment

Your email address will not be published. Required fields are marked *