Ad Widget .

ಉಡುಪಿ: ಎಸ್ ಡಿಪಿಐ ಮತ್ತು ಕಾಂಗ್ರೆಸ್ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ- ಶಾಸಕ ಯಶ್ ಪಾಲ್

ಸಮಗ್ರ ನ್ಯೂಸ್‌ : ರಾಜ್ಯಾದ್ಯಂತ ಹತ್ತಕ್ಕೂ ಹೆಚ್ಚು ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧಿಸುವುದಾಗಿ ಹೇಳಿದ್ದ ಸೋಷಿಯಲ್ ಡೆಮೊಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ ನಾಮಪತ್ರವನ್ನು ಸಲ್ಲಿಕೆ ಮಾಡದೆ ತಟಸ್ಥವಾಗಿದೆ.

Ad Widget . Ad Widget .

ರಾಜ್ಯ ಲೋಕಸಭಾ ಚುನಾವಣೆಯ ಮೊದಲ ಹಂತದ ನಾಮಪತ್ರ ಪ್ರಕ್ರಿಯೆ ಪೂರ್ಣಗೊಂಡಿದ್ದು, ಈವರೆಗೆ ಯಾರೂ ಆ ಪಕ್ಷದಿಂದ ಉಮೇದುವಾರಿಕೆ ಸಲ್ಲಿಸಿಲ್ಲ. ಮೋದಿ ಸರ್ಕಾರದ ವಿರುದ್ಧ ಕಾಂಗ್ರೆಸ್‌ ಗಿಂತ ಹೆಚ್ಚು ಪ್ರಭಾವಶಾಲಿಯಾಗಿ ಸ್ಪರ್ಧೆ ಕೊಡುತ್ತೇವೆ ಎಂದು ಈ ಹಿಂದೆ ಎಸ್ ಡಿಪಿಐ ಹೇಳಿತ್ತು.

Ad Widget . Ad Widget .

ಈ ಕುರಿತು ಪ್ರತಿಕ್ರಿಯೆ ನೀಡಿದ ಉಡುಪಿ ಶಾಸಕ ಯಶ್ ಪಾಲ್ ಸುವರ್ಣ ಅವರು, ಎಸ್ ಡಿಪಿಐ ಮತ್ತು ಕಾಂಗ್ರೆಸ್ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಈ ಹಿಂದೆ ಸಿದ್ದರಾಮಯ್ಯ ಎಸ್ ಡಿಪಿಐ ಕಾರ್ಯಕರ್ತರ ಮೇಲಿದ್ದ ಕೇಸ್ ಗಳನ್ನು ವಾಪಾಸ್ ಪಡೆದಿದ್ದರು. ಈಗ ಎಸ್ ಡಿಪಿಐ ಕಾಂಗ್ರೆಸ್ ಗೆ ಬೆಂಬಲ ನೀಡುವ ಮೂಲಕ ಅವರ ಋಣ ತೀರಿಸಿದೆ ಎಂದರು.

Leave a Comment

Your email address will not be published. Required fields are marked *