Ad Widget .

‘ದಿ ಕೇರಳ ಸ್ಟೋರಿ ದೂರದರ್ಶನದಲ್ಲಿ ಪ್ರಸಾರ/ ಪ್ರಸಾರ ಮಾಡದಂತೆ ಪಿಣರಾಯಿ ವಿಜಯನ್ ಸೂಚನೆ

ಸಮಗ್ರ ನ್ಯೂಸ್: ‘ದಿ ಕೇರಳ ಸ್ಟೋರಿ’ ಸಿನಿಮಾವನ್ನು ಏಪ್ರಿಲ್ 5 ರಂದು ಪ್ರಸಾರ ಮಾಡುವುದಾಗಿ ದೂರದರ್ಶನ ಪ್ರಕಟಿಸಿದ್ದು, ದೂರದರ್ಶನದ ಈ ನಿರ್ಧಾರವನ್ನು ಕೇರಳದ ಆಡಳಿತಾರೂಢ ಸಿಪಿಐ(ಎಂ) ಮತ್ತು ವಿರೋಧ ಪಕ್ಷವಾದ ಕಾಂಗ್ರೆಸ್ ತೀವ್ರವಾಗಿ ವಿರೋಧಿಸಿದೆ.

Ad Widget . Ad Widget .

ಲೋಕಸಭೆ ಚುನಾವಣೆ ಸನ್ನಿಹಿತವಾಗಿರುವ ಕಾರಣ ‘ದಿ ಕೇರಳ ಸ್ಟೋರಿ’ ಸಿನಿಮಾವನ್ನು ದೂರದರ್ಶನದಲ್ಲಿ ಪ್ರಸಾರ ಮಾಡದಂತೆ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಸೂಚಿಸಿದ್ದಾರೆ.

Ad Widget . Ad Widget .

‘ಜನರ ಮನಸ್ಸಿನಲ್ಲಿ ದ್ವೇಷ ತುಂಬುವ ಇಂತಹ ಚಲನಚಿತ್ರಗಳ ಪ್ರದರ್ಶನ ಖಂಡನೀಯ. ‘ದಿ ಕೇರಳ ಸ್ಟೋರಿ’ ಸಿನಿಮಾ ಪ್ರಸಾರದ ನಿರ್ಧಾರದಿಂದ ಹಿಂದೆ ಸರಿಯಿರಿ. ದ್ವೇಷ ಬಿತ್ತುವ ಇಂತಹ ದುರುದ್ದೇಶಪೂರಿತ ಪ್ರಯತ್ನಗಳನ್ನು ವಿರೋಧಿಸುವಲ್ಲಿ ಕೇರಳ ದೃಢವಾಗಿ ನಿಲ್ಲುತ್ತದೆ’ ಎಂದು ಪಿಣರಾಯಿ ವಿಜಯನ್ ಟ್ವೀಟ್ ಮಾಡಿದ್ದಾರೆ.

‘ದಿ ಕೇರಳ ಸ್ಟೋರಿ’ ಸಿನಿಮಾ ಪ್ರಸಾರದಿಂದ ಜನರಲ್ಲಿ ಕೋಮು ಉದ್ವಿಗ್ನತೆ ಉಲ್ಬಣಗೊಳ್ಳಬಹುದು, ಅಲ್ಲದೆ ಬಿಜೆಪಿ ಮತ್ತು ಆ‌ರ್ ಎಸ್ ಎಸ್ ಗೆ ಪ್ರಚಾರ ಯಂತ್ರ ಆಗಬೇಡಿ, ಈ ಸಿನಿಮಾ ಪ್ರಸಾರ ಮಾಡುವ ನಿರ್ಧಾರವನ್ನು ಹಿಂತೆಗೆದುಕೊಳ್ಳಿ’ ಎಂದು ಡಿಡಿ ನ್ಯಾಷನಲ್ ಪಿಣರಾಯಿ ವಿಜಯನ್ ಬಳಿ ಕೇಳಿದ್ದಾರೆ.

‘ದಿ ಕೇರಳ ಸ್ಟೋರಿ’ಯನ್ನು ದೂರದರ್ಶನದಲ್ಲಿ ಪ್ರಸಾರ ಮಾಡದಂತೆ ತಡೆ ನೀಡಬೇಕು ಎಂದು ಕಾಂಗ್ರೆಸ್ ಪಕ್ಷ ಸಹ ಚುನಾವಣಾ ಆಯೋಗಕ್ಕೆ ದೂರು ನೀಡಿದೆ. ಈ ನಿರ್ಧಾರದಿಂದ ಹಿಂದಕ್ಕೆ ಸರಿಯದಿದ್ದರೆ ಬೃಹತ್ ಪ್ರತಿಭಟನೆ ಆಯೋಜಿಸುವುದಾಗಿ ಹೇಳಿದೆ.

Leave a Comment

Your email address will not be published. Required fields are marked *