ಸಮಗ್ರ ನ್ಯೂಸ್: ಸಿನಿಮಾ ಅಂದ ಮೇಲೆ ಸ್ಟಾರ್ ವಾರ್ ಗಳು ನಡೆಯುತ್ತಿರುತ್ತದೆ. ಅದರಲ್ಲೂ ಅಭಿಮಾನಿಗಳ ನಡುವೆಯು ಇತ್ತೀಚೆಗೆ ವಾರ್ ಗಳು ನಡೆಯುತ್ತಿದೆ. ಹೌದು ಈ ಹಿಂದೆ ದರ್ಶನ್ ಮತ್ತು ಪುನೀತ್ ಒಳ್ಳೆಯ ಸ್ನೇಹಿತರಾಗಿದ್ದರು. ಯಾವುದೋ ವಿಚಾರವಾಗಿ ಇಬ್ಬರ ನಡುವೆ ವೈಮನಸ್ಸು ಮೂಡಿತ್ತು. ಆದ್ರೆ ಅಪ್ಪು ಅಗಲಿದ ಬಳಿಕ ಅಭಿಮಾನಿಗಳು ಇದನ್ನು ಕಂಟಿನ್ಯೂ ಮಾಡಿದು ನಿಜಕ್ಕೂ ವಿಪರ್ಯಾಸ. ಇದೀಗ ದೊಡ್ಮನೆ ಸೊಸೆ ಅಶ್ವಿನಿ ಪುನೀತ್ ರಾಜ್ ಕುಮಾರ್ ಗೆ ಕೀಳು ಮಟ್ಟದಲ್ಲಿ ಕಮೆಂಟ್ ಹಾಕೋ ವರೆಗೆ ಮುಂದುವರೆದಿದೆ.

ಅಶ್ವಿನಿ ಪುನೀತ್ ರಾಜ್ಕುಮಾರ್ ಅವರನ್ನು ಬೆಂಗಳೂರಿನಲ್ಲಿ ನಡೆದ ಆರ್‌ಸಿಬಿ ತಂಡದ ಜೆರ್ಸಿ ಉದ್ಘಾಟನೆ ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದರು. ಆ ಬಳಿಕ ನಡೆದ ಪಂದ್ಯಗಳಲ್ಲಿ ಆರ್‌ಸಿಬಿ ಸೋಲು ಕಾಣುತ್ತಿದೆ. ಇದಕ್ಕೆ ಕೆಲವರು ಅಶ್ವಿನಿ ಪುನೀತ್ ರಾಜ್ಕುಮಾರ್ ಅವರನ್ನು ಹೊಣೆ ಮಾಡಿದ್ದರು. ಅವರ ಬಗ್ಗೆ ಅವಹೇಳನಕಾರಿಯಾಗಿ ಟ್ವೀಟ್ ಮಾಡಲಾಗಿತ್ತು. ಗಂಡ ಇಲ್ಲದ ಮಹಿಳೆಯನ್ನು ಶುಭ ಕಾರ್ಯಕ್ಕೆ ಕರೆಸಿದ್ದರಿಂದಲೇ ಆರ್‌ಸಿಬಿ ಪದೇ ಪದೇ ಸೋಲುತ್ತಿದೆ ಎಂದು ಪೋಸ್ಟ್ ಮಾಡಲಾಗಿದೆ. ಈ ಅವಹೇಳನಕಾರಿ ಪೋಸ್ಟ್ ಗೆ ಅಪ್ಪು ಫ್ಯಾನ್ಸ್ ಖಂಡಿಸಿದ್ದಾರೆ. ಸದ್ಯ ದೂರು ಸ್ವೀಕರಿಸಿರೋ ಪೊಲೀಸರು ಆದಷ್ಟು ಬೇಗ ಫೇಕ್ ಶೂರರನ್ನ ಪತ್ತೆ ಹಚ್ಚುವಂತೆ ಮನವಿ ಮಾಡಿದ್ದಾರೆ.
ಇದಾದ ನಂತರ ಸಾರ್ವಜನಿಕರು ಸಾಮಾಜಿಕ ಜಾಲತಾಣದಲ್ಲಿ ತೀವ್ರವಾಗಿ ವಿರೋಧ ವ್ಯಕ್ತಪಡಿಸಿದಾಗ ಆ ನಕಲಿ ಖಾತೆಯ ಹೆಸರನ್ನು ‘ಸುದೀಪ್ ಅಭಿಮಾನಿ’ ಎಂದು ಬದಲಾಯಿಸಿ ಕರ್ನಾಟಕ ರತ್ನ ಪುನೀತ್ ರಾಜ್ ಕುಮಾರ್ ಅವರ ಅಭಿಮಾನಿಗಳು ಹಾಗೂ ಸುದೀಪ್ ಅವರ ಅಭಿಮಾನಿಗಳ ನಡುವೆ ಭಿನ್ನಾಭಿಪ್ರಾಯ ಉಂಟಾಗುವಂತೆ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಶಾಂತಿ ಸೃಷ್ಟಿಸಿರುತ್ತಾನೆ. ಅಶ್ವಿನಿ ಪುನೀತ್ ರಾಜ್ ಕುಮಾರ್ ಮತ್ತು ಸುದೀಪ್ ಅವರಿಗೆ ಅವಮಾನ ಮಾಡಿರುತ್ತಾನೆ. ’ ಈ ವಿಚಾರ ದರ್ಶನ್ ಅವರಿಗೆ ತಿಳಿದಾಗ ಬೇಸರ ವ್ಯಕ್ತಪಡಿಸಿದ್ದಾರೆ. ತಪ್ಪು ಯಾರೇ ಮಾಡಿದರು ಅದು ತಪ್ಪೆ ಶಿಕ್ಷೆಯಾಗಬೇಕು ಎಂದಿದ್ದಾರೆ.
ಯಾವ್ದೋ ವಿಚಾರವನ್ನು ಯಾವ್ದಕ್ಕೋ ಬಳಸಿಕೊಂಡು ಈ ರೀತಿಯ ಕಮೆಂಟ್ ಮಾಡಿ ನಟರ ಹೆಸರು, ಚಿತ್ರಕ್ಕೂ ದಕ್ಕೆ ತರುವಂತೆ ಇನ್ನಾದರು ಮಾಡದಿರಲಿ ಎಂಬುದು ಅಭಿಮಾನಿಗಳ ಆಶಯ.