Ad Widget .

ಸಾಯುವ ವಯಸ್ಸಲ್ಲಿ ಹೊಂದಾಣಿಕೆ ರಾಜಕೀಯ ಬೇಕಿತ್ತಾ..? ದೇವೆಗೌಡರ ವಿರುದ್ಧ ನಾಲಿಗೆ ಹರಿ ಬಿಟ್ಟ ಕೆ.ಎನ್ ರಾಜಣ್ಣ

ಸಮಗ್ರ ನ್ಯೂಸ್: ಮತ್ತೆ ದೇವೆಗೌಡರ ವಿರುದ್ದ ಕೆ.ಎನ್ ರಾಜಣ್ಣ ನಾಲಿಗೆ ಹರಿ ಬಿಟ್ಟಿದ್ದಾರೆ. ಕಳೆದ ವರ್ಷ “ದೇವೇಗೌಡರಿಗೆ ನಾಲ್ಕು ಜನ ಹೊತ್ತೊಯ್ಯುವ ಕಾಲ ಹತ್ತಿರ ಬಂದಿದೆ” ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದ ಸಚಿವ ಕೆ.ಎನ್‌.ರಾಜಣ್ಣ ಅವರು ಇದೀಗ ಮತ್ತೊಮ್ಮೆ ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡರ ಸಾವಿನ ವಿಚಾರ ಎತ್ತಿದ್ದಾರೆ.

Ad Widget . Ad Widget .

ಇಂದು ಕಾಂಗ್ರೆಸ್ ಅಭ್ಯರ್ಥಿ ಎಸ್.ಪಿ ಮುದ್ದೆಹನುಮೇಗೌಡ ನಾಮಪತ್ರ ಸಲ್ಲಿಸಿದ ಸಂದರ್ಭದಲ್ಲಿ ನಡೆದ ರೋಡ್ ಶೋದಲ್ಲಿ ದೇವೇಗೌಡರಿಗೆ‌ ಸಾಯುವ ವಯಸ್ಸಲ್ಲಿ ಹೊಂದಾಣಿಕೆ ರಾಜಕೀಯ ಬೇಕಿತ್ತಾ ಎಂದು ಕೆ‌.ಎನ್‌. ರಾಜಣ್ಣ ಹೇಳಿದ್ದು, ಇದಕ್ಕೆ ಜೆಡಿಎಸ್‌ ಮುಖಂಡರು, ಕಾರ್ಯಕರ್ತರು ಆಕ್ರೋಶ ಹೊರಹಾಕಿದ್ದಾರೆ.

Ad Widget . Ad Widget .

ವಿಧಾನ ಸೌಧದಲ್ಲಿ ಯಡಿಯೂರಪ್ಪನವರು ಮಾತನಾಡುತ್ತಾ, ಸಿದ್ದರಾಮಯ್ಯನವರೇ…ಡಿಕೆಶಿ ಅವರೇ…ನಮಗೆ ನಿಮ್ಮ ಮೇಲೆ ಕೋಪ ಇಲ್ಲ. ನನಗೆ ಕೋಪ ಇರುವುದು ಈ ಅಪ್ಪ-ಮಗನ ಮೇಲೆ, ಈ ಅಪ್ಪ ಮಗನನ್ನು ಮುಗಿಸುವುದೇ ನನ್ನ ಕೆಲಸ ಎಂದಿದ್ದರು. ಅಂತಹವರ ಜೊತೆಯೇ ಈಗ ದೇವೇಗೌಡರು ಅಪವಿತ್ರ ಮೈತ್ರಿ‌ ಮಾಡಿಕೊಂಡಿದ್ದಾರೆ ಎಂದು ಹೇಳಿದ್ದಾರೆ.

ದೇವೇಗೌಡರು ಅಧಿಕಾರಗೋಸ್ಕರ ಸಮಾಜದ ಹೆಸರನ್ನು ಹೇಳಿಕೊಂಡು, ಮಗ, ಮೊಮ್ಮಗ, ಅಳಿಯ ಮೂರು‌ ಜನ ಬಿಟ್ಟರೆ ಇನ್ನಾರಿಗೂ ಅಧಿಕಾರ ನೀಡಿಲ್ಲ. ದೇವೇಗೌಡರ ಸಾವಿನ ಕಾಲದಲ್ಲಿ…ಅಂದರೆ ಅವರ ಅಂತ್ಯದ ಕಾಲದಲ್ಲಿ ಈ ರೀತಿಯ ರಾಜಕೀಯ ಬೇಕಿರಲಿಲ್ಲ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

Leave a Comment

Your email address will not be published. Required fields are marked *