Ad Widget .

ನವದೆಹಲಿ: ಮೋದಿಯನ್ನು ಅಧಿಕಾರದಿಂದ ತೆಗೆದು ಹಾಕುವುದೇ ನಮ್ಮ ಮುಂದಿರುವ ಗುರಿ; ಖರ್ಗೆ

ಸಮಗ್ರ ನ್ಯೂಸ್‌ : ಲೋಕಸಭಾ ಚುನಾವಣೆಯ ಪ್ರಚಾರ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಕಾಂಗ್ರೆಸ್‌ ಇಂದು ತನ್ನ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿ, ಮೋದಿಯನ್ನು ಅಧಿಕಾರದಿಂದ ತೆಗೆದು ಹಾಕುವುದೇ ನಮ್ಮ ಮುಂದಿರುವ ಗುರಿಯಾಗಿದೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.

Ad Widget . Ad Widget .

ಇವರು ಪ್ರಣಾಳಿಕೆ ಬಿಡುಗಡೆ ಮಾಡಿ ಬಳಿಕ ಮಾತನಾಡಿದರು, ವಿಪಕ್ಷ ನಾಯಕರನ್ನ ಜೈಲಿನಲ್ಲಿಟ್ಟು ಚುನಾವಣೆ ಮಾಡಲಾಗುತ್ತಿದೆ. ನಮ್ಮ ಪಕ್ಷದ ಖಾತೆಯನ್ನೇ ಸಂಪೂರ್ಣ ಮುಟ್ಟುಗೋಲು ಹಾಕಲಾಗಿದೆ. ಯಾರಾದ್ರು ಭಯಪಡುತ್ತಿದ್ದಾರೆ ಎಂದರೆ ಅವರು ತಪ್ಪು ಮಾಡಿದ್ದಾರೆ ಎಂದು, ಆದರೆ ನಮಗೆ ಯಾವುದೇ ಭಯವಿಲ್ಲ. ಮೋದಿ ಜನರ ನಡುವೆ ಹೋಗಲು ಆಗಲ್ಲ. ನಮ್ಮ ರಾಹುಲ್ ಗಾಂಧಿ ಜನರ ಮಧ್ಯೆ ಹೋಗಿದ್ದಾರೆ. ಆದರೆ ಜನರ ಮಧ್ಯೆ ಹೋಗುವುದಕ್ಕೆ ಮೋದಿಗೆ ಭಯವಿದೆ ಎಂದು ವಾಗ್ದಾಳಿ ನಡೆಸಿದರು.

Ad Widget . Ad Widget .

ಬಡವರಿಗಾಗಿ ನಮ್ಮ ಪ್ರಣಾಳಿಕೆಯನ್ನ ಅರ್ಪಣೆ ಮಾಡುತ್ತಿದ್ದೇವೆ. 16 ಸದಸ್ಯರ ಪ್ರಣಾಳಿಕೆ‌ ಸಮಿತಿ ರಚನೆ ಮಾಡಿ ಪ್ರಣಾಳಿಕೆ ತಯಾರಿಸಲಾಗಿದೆ. ಭಾರತ ಜೋಡೊ ಯಾತ್ರೆಯಲ್ಲಿ 6 ನ್ಯಾಯಗಳ ಬಗ್ಗೆ ನಾವು ಪ್ರಸ್ತಾಪ ಮಾಡಿದ್ದೇವೆ. ಅದರಂತೆ ನಮ್ಮ ಪ್ರಣಾಳಿಕೆಯಲ್ಲಿ ಉಲ್ಲೇಖಿಸಲಾಗಿದೆ ಎಂದು ತಿಳಿಸಿದರು.

Leave a Comment

Your email address will not be published. Required fields are marked *