Ad Widget .

ಕಲಬುರಗಿ: ಬಿಸಿಲಿನ ತಾಪಕ್ಕೆ ಪೊಲೀಸ್ ಶ್ವಾನಗಳಿಗೂ ಬಂತು ಶೂ ಭಾಗ್ಯ

ಸಮಗ್ರ ನ್ಯೂಸ್‌ : ಬಿಸಿಲಿನ ಬೇಗೆಗೆ ನಾವುಗಳೇ ಹೈರಾಣಾಗುತ್ತಿದ್ದೇವೆ. ಇನ್ನೂ ಮೂಕ ಪ್ರಾಣಿಗಳ ಗತಿ ಏನು? ಅದೇ ಕಾರಣಕ್ಕೆ ಕಲಬುರಗಿ ಪೊಲೀಸ್‌ ಇಲಾಖೆ ಬೆಸ್ಟ್‌ ಐಡಿಯಾ ಮಾಡಿದೆ. ತಮ್ಮ ಇಲಾಖೆಯ ಶ್ವಾನಗಳಿಗೆ ಶೂ ಭಾಗ್ಯ ಕರುಣಿಸಿದೆ. ರಾಜ್ಯದಲ್ಲಿಯೇ ಇದು ಮೊದಲು. ಲೋಕಸಭೆ ಚುನಾವಣೆ ಹಿನ್ನೆಲೆ ವಿಐಪಿ, ರಾಜಕೀಯ ಕಾರ್ಯಕ್ರಮಗಳು ನಡೆಯುತ್ತಿವೆ.

Ad Widget . Ad Widget .

ದಿನಪೂರ್ತಿ ಶ್ವಾನದಳ ಕಾರ್ಯಾಚರಣೆ ಇರುತ್ತದೆ. ಆದ್ದರಿಂದ ಶ್ವಾನಗಳ ಪಾದಗಳು ಬಿಸಿಲಿಗೆ ಹಾಳಾಗಿ ಕಾರ್ಯಕ್ಷಮತೆಗೆ ತೊಡಕಾಗುತ್ತದೆ ಎಂಬ ಕಾರಣಕ್ಕೆ ಶೂ ಹಾಕಿ ಕಾರ್ಯಾಚರಣೆ ಕೈಗೊಳ್ಳಲಾಗುತ್ತಿದೆ. ಕಲಬುರಗಿ ಶ್ವಾನದಳದಲ್ಲಿರುವ ರೀಟಾ, ಜಿಮ್ಮಿ, ರಾಣಿ, ರಿಂಕಿ ಎಂಬ ನಾಯಿಗಳಿಗೆ ಬಿಸಿಲಿನ ತಾಪದಿಂದ ಪಾದಗಳನ್ನು ರಕ್ಷಿಸಲು ‘ಶೂ’ ಹಾಕಲಾಗಿದೆ.

Ad Widget . Ad Widget .

ಕೇವಲ ಶೂ ಮಾತ್ರವಲ್ಲದೆ ಜಿಲ್ಲಾಸಶಸ್ತ್ರ ಮೀಸಲು ಪಡೆಯ ಆವರಣದಲ್ಲಿನ ಶ್ವಾನದಳದ ನಾಯಿಗಳನ್ನು ಪ್ರಖರ ಬಿಸಿಲಿನಿಂದ ಕಾಪಾಡಲು ಕೂಲರ್‌, ಎಳನೀರು, ಸಾಬುದಾಣಿ, ರಾಗಿಗಂಜಿ ಸೇರಿ ವಿವಿಧ ರೀತಿಯ ಸೌಲಭ್ಯಗಳನ್ನು ನೀಡಲಾಗುತ್ತಿದೆ. ನಗರದ ಜಿಲ್ಲಾ ಸಶಸ್ತ್ರ ಮೀಸಲು ಪೊಲೀಸ್‌ ಪಡೆ ಆವರಣದಲ್ಲಿ ಶ್ವಾನ ದಳದ ಪ್ರತ್ಯೇಕ ವಿಭಾಗವಿದೆ.

Leave a Comment

Your email address will not be published. Required fields are marked *