ಒ. ಪನ್ನೀರ್‍ಸೆಲ್ವಂ ಅವರಿಗೆ ಹಲಸಿನ ಹಣ್ಣಿನ ಚಿಹ್ನೆ ನೀಡಿದ ಚುನಾವಣಾ ಆಯೋಗ/ ಹೆಚ್ಚಾದ ಹಲಸಿನ ಹಣ್ಣಿನ ಬೇಡಿಕೆ

ಸಮಗ್ರ ನ್ಯೂಸ್: ತಮಿಳುನಾಡಿನ ರಾಮನಾಥಪುರಂ ಕ್ಷೇತ್ರದಿಂದ ಲೋಕಸಭೆ ಚುನಾವಣೆಗೆ ಕಣಕ್ಕಿಳಿದಿರುವ ಮಾಜಿ ಮುಖ್ಯಮಂತ್ರಿ ಒ. ಪನ್ನೀರ್‍ಸೆಲ್ವಂ ಅವರಿಗೆ ಚುನಾವಣಾ ಆಯೋಗ ಹಲಸಿನ ಹಣ್ಣನ್ನು ಚಿಹ್ನೆಯಾಗಿದೆ ನೀಡಿದೆ.

Ad Widget ... ..

ಅದರ ಬಳಿಕ ಅವರ ಅಭಿಮಾನಿಗಳು ಎಲ್ಲೆಡೆ ಹಲಸಿನ ಹಣ್ಣು ಖರೀದಿಗೆ ಸಭೆಗಳಿಗೆ ಆಗಮಿಸುತ್ತಿದ್ದಾರೆ ಮತ್ತು ಮನೆಗೂ ಕೊಂಡೊಯ್ಯುತ್ತಿದ್ದಾರೆ. ಹೀಗಾಗಿ ಜಿಲ್ಲೆಯಲ್ಲಿ ಹಲಸಿನ ಮಾರಾಟ ದಿಢೀರ್ ಹೆಚ್ಚಳವಾಗಿದೆ. ಪ್ರತಿದಿನ 30 ರಿಂದ 40 ಟನ್‍ಗಳಷ್ಟು ಹಲಸು ಮಾರಾಟವಾಗುತ್ತಿದೆ, ಈ ಎರಡು ದಿನಗಳಿಂದ ಹಲಸು ಬೇಡಿಕೆ ಹೆಚ್ಚಾಗುತ್ತಿದೆ ಎಂದು ಇಲ್ಲಿನ ಹಣ್ಣಿನ ವ್ಯಾಪಾರಸ್ಥರು ತಿಳಿಸಿದ್ದಾರೆ.

Ad Widget

ಎಐಎಡಿಎಂಕೆ ನಾಯಕರಾಗಿದ್ದ ಪಳನಿಸ್ವಾಮಿ ಮತ್ತು ಪನ್ನೀರ್‍ಸೆಲ್ವಂ ಬಣದಲ್ಲಿ ಬಿಕ್ಕಟ್ಟು ಸೃಷ್ಟಿಯಾದ ಬಳಿಕ ಪನ್ನೀರ್‍ಸೆಲ್ವಂ ಅವರನ್ನು ಪಕ್ಷದಿಂದ ಹೊರಹಾಕಲಾಗಿದೆ. ಹೀಗಾಗಿ ಅವರು ಪಕ್ಷೇತರರಾಗಿ ಚುನಾವಣೆಗೆ ನಿಂತಿದ್ದಾರೆ.

Leave a Comment

Your email address will not be published. Required fields are marked *