ಸಮಗ್ರ ನ್ಯೂಸ್: ರಾಷ್ಟ್ರಪತಿ ದ್ರೌಪದಿ ಮುರ್ಮು ದೇಶದ ಮೊದಲ ಸ್ವದೇಶಿ CAR-T Cell ಕ್ಯಾನ್ಸರ್ ಚಿಕಿತ್ಸಾ ಪದ್ಧತಿಗೆ ಚಾಲನೆ ನೀಡಿದರು.
ಈ ಚಿಕಿತ್ಸಾ ವಿಧಾನವನ್ನು ಐಐಟಿ ಬಾಂಬೆ ಹಾಗೂ ಟಾಟಾ ಮೆಮೋರಿಯಲ್ ಸೆಂಟರ್ ಜಂಟಿಯಾಗಿ ಅಭಿವೃದ್ಧಿಗೊಳಿಸಿದ್ದು,
ಮಹಾರಾಷ್ಟ್ರದ ಪೋವೈನಲ್ಲಿರುವ ಭಾರತೀಯ ತಂತ್ರಜ್ಞಾನ ಸಂಸ್ಥೆಯಲ್ಲಿ ಇದನ್ನು ಗುರುವಾರ ಲೋಕಾರ್ಪಣೆ ಮಾಡಲಾಗಿದೆ.
ಇದರಿಂದಾಗಿ ಸುಮಾರು 4 ಕೋಟಿ ರು. ತಗುಲುತ್ತಿದ್ದ ಚಿಕಿತ್ಸಾ ವಿಧಾನ ಗಣನೀಯವಾಗಿ ಕಡಿಮೆಯಾಗಲಿದೆ. ಈ ಚಿಕಿತ್ಸಾ ವಿಧಾನದಿಂದಗಿ ಹಲವು ವಿಧದ ರಕ್ತ ಕ್ಯಾನ್ಸರ್‌ಗಳನ್ನು ಗುಣಪಡಿಸಬಹುದಾಗಿದೆ. NexCAR19 CAR T-Cell ಚಿಕಿತ್ಸಾ ವಿಧಾನವು ಮೊದಲ ಸ್ವದೇಶಿ ಅಭಿವೃದ್ಧಿ ಪಡಿಸಿದ CAR T-Cell ಚಿಕಿತ್ಸಾ ವಿಧಾನವಾಗಿದೆ.