Ad Widget .

ಮುಂಬೈ ಇಂಡಿಯನ್ಸ್ ತೊರೆಯಲು ಮುಂದಾದ ರೋಹಿತ್ ಶರ್ಮಾ

ಸಮಗ್ರ ನ್ಯೂಸ್‌ : ರೋಹಿತ್ ಶರ್ಮಾ 2011 ರಿಂದ ತಂಡದ ಭಾಗವಾಗಿ, ಐದು ಬಾರಿ ಟ್ರೋಫಿ ಗೆಲ್ಲಿಸಿ, ದೊಡ್ಡ ಸಕ್ಸಸ್ ತಂದುಕೊಟ್ಟಿದ್ದಾರೆ. ಇದೀಗ ಚಾಂಪಿಯನ್ ಕ್ಯಾಪ್ಟನ್ ಮುಂಬೈ ಇಂಡಿಯನ್ಸ್ ತಂಡ ತೊರೆಯಲು ನಿರ್ಧರಿಸಿದ್ದಾರೆ. ಈ ಐಪಿಎಲ್ ಹಿಟ್ಮ್ಯಾನ್ ಪಾಲಿಗೆ ಮುಂಬೈ ಪರ ಕೊನೆ ಐಪಿಎಲ್. 2024ನೇ ಐಪಿಎಲ್ ಮುಗಿಯುತ್ತಿದ್ದಂತೆ ಮುಂಬೈ ಇಂಡಿಯನ್ಸ್ಗೆ ಗುಡ್ ಬೈ ಹೇಳಲಿದ್ದಾರೆ ಎಂದು ವರದಿಯಾಗಿದೆ. ರೋಹಿತ್ರ ಈ ನಡೆಯಿಂದ ಫ್ಯಾನ್ಸ್ ಆಘಾತಕ್ಕೊಳಗಾಗಿದ್ದಾರೆ.

. Ad Widget . . Ad Widget . Ad Widget Ad Widget . Ad Widget . Ad Widget . Ad Widget . Ad Widget . Ad Widget . Ad Widget .

ರೋಹಿತ್ ಶರ್ಮಾ ಹಾಗೂ ಮುಂಬೈ ಇಂಡಿಯನ್ಸ್ಗೆ ಸುದೀರ್ಘ 14 ವರ್ಷಗಳ ಸಂಬಂಧ ಇದ್ದು, ಈ ಸಂಬಂಧಕ್ಕೆ ಪುಲ್ಸ್ಟಾಪ್ ಹಾಕಲು ಹಿಟ್ಮ್ಯಾನ್ ಮುಂದಾಗಿದ್ದಾರೆ.

Ad Widget . Ad Widget . Ad Widget .

ಐಪಿಎಲ್ ಬಳಿಕ ಮುಂಬೈಗೆ ಗುಡ್ಬೈ ಹೇಳಲು ಸಜ್ಜಾಗಿರೋ ರೋಹಿತ್ ಶರ್ಮಾ, 2025ರ ಹರಾಜಿನ ಮೇಲೆ ಕಣ್ಣಿಟ್ಟಿದ್ದಾರೆ. ಈ ವರ್ಷಾಂತ್ಯದಲ್ಲಿ ಆಟಗಾರರ ಹರಾಜು ಪ್ರಕ್ರಿಯೆ ನಡೆಯಲಿದ್ದು, ರೋಹಿತ್ ಹೆಸರನ್ನ ನೋಂದಾಯಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ. ಒಂದು ವೇಳೆ ಚಾಂಪಿಯನ್ ಕ್ಯಾಪ್ಟನ್ ಹರಾಜಿಗೆ ಹೋದ್ರೆ ದೊಡ್ಡ ಜಾಕಾಪಾಟ್ ಹೊಡೆಯಲಿದೆ. ಯಾಕಂದ್ರೆ ಮುಂಬೈಗೆ 5 ಸಲ ಟ್ರೋಫಿ ಗೆಲ್ಲಿಸಿಕೊಟ್ಟಿದ್ದಾರೆ. ಹೀಗಾಗಿ ರೋಹಿತ್ ಕೊಂಡುಕೊಳ್ಳಲು ಫ್ರಾಂಚೈಸಿಗಳು ಮುಗಿಬೀಳಲಿವೆ.

ಬರೀ ರೋಹಿತ್ ಶರ್ಮಾ ಮಾತ್ರವಲ್ಲ. ಸ್ಟಾರ್ ಬೌಲರ್ ಜಸ್ಪ್ರೀತ್ ಬುಮ್ರಾ ಹಾಗೂ ಸೂರ್ಯಕುಮಾರ್ ಯಾದವ್ ಕೂಡ ತಂಡ ತೊರೆಯಲು ಸಜ್ಜಾಗಿದ್ದಾರೆ. ಈ ಬಗ್ಗೆ ಈಗಾಗ್ಲೇ ಫ್ರಾಂಚೈಸಿ ಜೊತೆ ಮಾತುಕತೆ ನಡೆಸಿದ್ದಾರೆ ಎಂದು ಹೇಳಲಾಗ್ತಿದೆ. ಒಟ್ಟಿನಲ್ಲಿ ಬಿಗ್ -3 ಗಳು ಮುಂಬೈ ತಂಡ ಬಿಡಲು ನಿರ್ಧರಿಸಿದ್ದಾರೆ ಎಂಬ ಮಾಹಿತಿ ಮೂಲಗಳಿಂದ ತಿಳಿದು ಬಂದಿದೆ.

Leave a Comment

Your email address will not be published. Required fields are marked *