Ad Widget .

ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹತ್ಯೆ ಪ್ರಕರಣ/ ಶ್ರೀಲಂಕಾಗೆ ವಾಪಸಾದ ಅಪರಾಧಿಗಳು

ಸಮಗ್ರ ನ್ಯೂಸ್: ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹತ್ಯೆ ಪ್ರಕರಣದ ಮೂವರು ಅಪರಾಧಿಗಳು ಭಾರತ ತೊರೆದಿದ್ದು, ಶ್ರೀಲಂಕಾಗೆ ವಾಪಸಾಗಿದ್ದಾರೆ. 30 ವರ್ಷಗಳಿಗೂ ಹೆಚ್ಚು ಕಾಲ ಜೈಲುವಾಸ ಅನುಭವಿಸಿದ್ದ ಮುರುಗನ್ ಯಾನೆ ಶ್ರೀಹರನ್, ಜಯಕುಮಾರ್ ಹಾಗೂ ರಾಬರ್ಟ್ ಪಯಸ್ ಸಹಿತ ಈ ಪ್ರಕರಣದ ಒಟ್ಟು ಏಳು ಮಂದಿಯನ್ನು ಸದ್ಯ ತಿರುಚಿರಾಪಳ್ಳಿಯ ವಿಶೇಷ ಶಿಬಿರದಲ್ಲಿ ಇರಿಸಲಾಗಿತ್ತು.

. Ad Widget . . Ad Widget . Ad Widget Ad Widget . Ad Widget . Ad Widget . Ad Widget . Ad Widget . Ad Widget . Ad Widget .

ವಿದೇಶಿಯರ ಪ್ರಾದೇಶಿಕ ನೋಂದಣಿ ಕಚೇರಿ ಗಡೀಪಾರು ಆದೇಶ ಹೊರಡಿಸಿದ ಬಳಿಕ ಅವರು ಸ್ವದೇಶಕ್ಕೆ ಮರಳಬಹುದು ಎಂದು ತಮಿಳುನಾಡು ಸರ್ಕಾರ ಮದ್ರಾಸ್ ಹೈಕೋರ್ಟ್‍ಗೆ ಈ ಹಿಂದೆ ತಿಳಿಸಿತ್ತು. ಅಲ್ಲದೆ ಶ್ರೀಲಂಕಾ ಹೈಕಮಿಷನ್ ಈ ಹಿಂದೆಯೇ ಅವರಿಗೆ ಸ್ವದೇಶಕ್ಕೆ ಮರಳಲು ಪ್ರಯಾಣ ದಾಖಲೆಗಳನ್ನು ನೀಡಿತ್ತು. ಇದೀಗ ಈ ಮೂವರು ಕೊಲಂಬೊಗೆ ತೆರಳಿದ್ದಾರೆ.

Ad Widget . Ad Widget . Ad Widget .

1991ರ ಮೇ 21ರ ರಾತ್ರಿ ತಮಿಳುನಾಡಿನ ಶ್ರೀಪೆರಂಬದೂರಿನಲ್ಲಿ ಆತ್ಮಾಹುತಿ ಬಾಂಬ್ ದಾಳಿ ನಡೆಸಿ ರಾಜೀವ್ ಗಾಂಧಿಯವರನ್ನು ಹತ್ಯೆ ಮಾಡಲಾಗಿತ್ತು. ಈ ಘಟನೆಯಲ್ಲಿ ಹಲವರು ಸಾವನ್ನಪ್ಪಿದ್ದರು.

Leave a Comment

Your email address will not be published. Required fields are marked *