ತೆರೆದ ಕೊಳವೆ ಬಾವಿಗೆ ಬಿದ್ದ 2 ವರ್ಷದ ಮಗು|ಮಗುವನ್ನು ರಕ್ಷಿಸಲು ಹರಸಾಹಸ

ಸಮಗ್ರ ನ್ಯೂಸ್: ಆಟವಾಡುವಾಗ ಎರಡು ವರ್ಷದ ಮಗು ಕೊಳವೆ ಬಾವಿಗೆ ಬಿದ್ದ ಘಟನೆ ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಲಚ್ಯಾಣ ಗ್ರಾಮದಲ್ಲಿ ನಡೆದಿದೆ.

Ad Widget ... ..

ಸಾತ್ವಿಕ್ ಮುಜಗೊಂಡ ಕೊಳವೆ ಬಾವಿಗೆ ಬಿದ್ದ ಮಗುವಾಗಿದ್ದು. ಆಟವಾಡಲು ಹೋಗಿದ್ದ ವೇಳೆ ಮಗು ಕೊಳವೆ ಬಾವಿಗೆ ಬಿದ್ದಿದೆ ಎಂದು ತಿಳಿದು ಬಂದಿದೆ. ಸತೀಶ್ ಮತ್ತು ಪೂಜಾ ದಂಪತಿಯ ಮಗನಾಗಿರುವ ಸಾತ್ವಿಕ್ ಇಂದು ಸಂಜೆ ಕೊಳವೆ ಬಾವಿಗೆ ಬಿದ್ದಿದ್ದಾನೆ. ಸ್ಥಳಕ್ಕೆ ಇಂಡಿ ಪೊಲೀಸರು ಧಾವಿಸಿದ್ದು, ರಕ್ಷಣಾ ಕಾರ್ಯಕ್ಕೆ ಮುಂದಾಗಿದ್ದಾರೆ. ಸತೀಶ್ ಅವರು ಬೆಳೆಗೆ ನೀರಿಲ್ಲದೆ ಕೊಳವೆ ಬಾವಿ ಕೊರೆಸಿದ್ದರು ಎಂಬ ಮಾಹಿತಿ ಬಂದಿದ್ದು, ಆ ಕೊಳವೆ ಬಾವಿಗೆ ದುರಾದೃಷ್ಟವಶಾತ್ ಮಗು ಆಟವಾಡುತ್ತಾ ಬಿದ್ದಿದೆ.

Ad Widget

Leave a Comment

Your email address will not be published. Required fields are marked *