Ad Widget .

ಧಾರ್ಮಿಕ, ಕೌಟುಂಬಿಕ ಕಾರ್ಯಕ್ರಮಗಳಿಗೆ ಅನುಮತಿ ಅವಶ್ಯಕತೆ ಇಲ್ಲ

ಸಮಗ್ರ ನ್ಯೂಸ್: ಲೋಕಸಭಾ ಸಾರ್ವತ್ರಿಕ ಚುನಾವಣೆ 2024 ರ ಸಂಬಂಧ ಚುನಾವಣಾ ನೀತಿ ಸಂಹಿತೆಯು ಜಾರಿಯಲ್ಲಿರುತ್ತದೆ.

Ad Widget . Ad Widget .

ಚುನಾವಣೆ/ ರಾಜಕೀಯ ಕಾರ್ಯಕ್ರಮಗಲನ್ನು ನಡೆಸಲು ಜಿಲ್ಲಾಧಿಕಾರಿ ಹಾಗೂ ಚುನಾವಣಾಧಿಕಾರಿಗಳು, 21-ಮೈಸೂರು ಲೋಕಸಭಾ ಕ್ಷೇತ್ರರವರೆಗೆ ಸಂಬಂಧಪಟ್ಟ ರಾಜಕೀಯ ಪಕ್ಷ/ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಿ ಕಡ್ಡಾಯವಾಗಿ ಅನುಮತಿಯನ್ನು ಪಡೆದ ನಂತರ ಕಾರ್ಯಕ್ರಮವನ್ನು ನಡೆಸಬೇಕು.
ಅದಲ್ಲದೇ ಈ ಕಚೇರಿಗೆ ಧಾರ್ಮಿಕ ಕಾರ್ಯಕ್ರಮಗಳು/ ಕೌಟುಂಬಿಕ ಕಾರ್ಯಕ್ರಮ (ಮದುವೆ, ಗೃಹ ಪ್ರವೇಶ, ದೇವರ ಪೂಜೆ ಇತ್ಯಾದಿ) (ರಾಜಕೀಯ ಕಾರ್ಯಕ್ರಮಗಳನ್ನು ಹೊರತುಪಡಿಸಿ) ಗಳಿಗೆ ಈ ಕಚೇರಿಗೆ ಅರ್ಜಿಗಳು ಸ್ವೀಕೃತವಾಗುತ್ತಿರುತ್ತದೆ. ನಿಯಮಗಳಂತೆ ಧಾರ್ಮಿಕ ಕಾರ್ಯಕ್ರಮಗಳು/ಕೌಟುಂಬಿಕ ಕಾರ್ಯಕ್ರಮಗಳಿಗೆ ಯಾವುದೇ ಅನುಮತಿಯ ಅವಶ್ಯಕತೆ ಇರುವುದಿಲ್ಲ. ಆ ರೀತಿ ಕಾರ್ಯಕ್ರಮವನ್ನು ನಡೆಸುವವರು ಮಾಹಿತಿಯನ್ನು ಸಂಬಂಧಪಟ್ಟ ಸಹಾಯಕ ಚುನಾವಣಾಧಿಕಾರಿಗಳಿಗೆ ಹಾಗೂ ಸ್ಥಳೀಯ ಪ್ರಾಧಿಕಾರಗಳಿಗೆ ನೀಡುವಂತೆ ಕೋರಿದೆ.

Ad Widget . Ad Widget .

ಚುನಾವಣೆ ಸಂದರ್ಭದಲ್ಲಿ ನಡೆಯುವ ಎಲ್ಲಾ ಕಾರ್ಯಕ್ರಮಗಳ ಮೇಲೆ ನಿಗಾ ವಹಿಸುವಂತೆ ಚುನಾವಣಾ ತಂಡಗಳಿಗೆ ಈಗಾಗಲೇ ನಿರ್ದೇಶನವನ್ನು ನೀಡಿರುವುದರಿಂದ, ಮಾದರಿ ನೀತಿ ಸಂಹಿತೆ ಜಾರಿ ಸಂಬಂಧ ನಿಯೋಜಿಸಿರುವ ಫ್ಲೈಯಿಂಗ್ ಸ್ಕ್ವಾಡ್, ವಿಡಿಯೋ ಸರ್ವಲೆನ್ಸ್ ತಂಡದವರು ಕಾರ್ಯಕ್ರಮದ ಪರಿಶೀಲನೆಗೆ ಬಂದಾಗ ಕಡ್ಡಾಯವಾಗಿ ಸಹಕರಿಸುವಂತೆ ಎಲ್ಲಾ ಸಾರ್ವಜನಿಕರಲ್ಲಿ ಮೈಸೂರು ಜಿಲ್ಲಾಧಿಕಾರಿ ಹಾಗೂ 21-ಮೈಸೂರು ಲೋಕಸಭಾ ಕ್ಷೇತ್ರ ಚುನಾವಣಾಧಿಕಾರಿ ಅವರು ತಿಳಿಸಿದ್ದಾರೆ.

Leave a Comment

Your email address will not be published. Required fields are marked *