Ad Widget .

ದ.ಕ ಬಿಜೆಪಿ ಅಭ್ಯರ್ಥಿ ಬ್ರಿಜೇಶ್ ಚೌಟ ಅವರಿಗೆ ಕಾರ್ಮಿಕ ವರ್ಗದ ಮಹಿಳೆಯರಿಂದ ದೇಣಿಗೆ

ಸಮಗ್ರ ನ್ಯೂಸ್‌ : ನಾಳೆ ನಾಮಪತ್ರ ಸಲ್ಲಿಸಲಿರುವ ದಕ್ಷಿಣ ಕನ್ನಡದ ಬಿಜೆಪಿ ಅಭ್ಯರ್ಥಿ ಕ್ಯಾ. ಬ್ರಿಜೇಶ್ ಚೌಟ ಅವರಿಗೆ ಚುನಾವಣಾ ಠೇವಣಿಗಾಗಿ ಕಾರ್ಮಿಕ ಮಹಿಳೆಯರು ದೇಣಿಗೆ ನೀಡಿದ್ದಾರೆ. ತಾವು ದುಡಿದ ಸ್ವಂತ ಹಣವನ್ನು ದೇಣಿಗೆ ರೂಪಾದಲ್ಲಿ ಬ್ರಿಜೇಶ್ ಚೌಟಾ ಅವರಿಗೆ ಮಹಿಳೆಯರು ಸಹಾಯಹಸ್ತದ ರೂಪದಲ್ಲಿ ನೀಡಿದ್ದಾರೆ.

Ad Widget . Ad Widget .

ಮೀನಿನ ವ್ಯಾಪಾರ, ಹೂವಿನ ವ್ಯಾಪಾರ ಹಾಗು ಇತರೆ ಸಣ್ಣ ಪುಟ್ಟ ವ್ಯವಹಾರ ಮಾಡುವ ಮಹಿಳೆಯರು ಆರತಿ ಬೆಳಗಿ ಹಣೆಗೆ ತಿಲಕ ಹಚ್ಚಿ ದೃಷ್ಟಿ ತೆಗೆದು ಆಶೀರ್ವಾದಿಸಿ ಬಳಿಕ ಚುನಾವಣಾ ಠೇವಣಿಗೆ ದೇಣಿಗೆ ಸಮರ್ಪಣೆ ಮಾಡಿದರು.

Ad Widget . Ad Widget .

ಯೋಧನಾಗಿ ಕ್ಯಾಪ್ಟನ್ ಬ್ರಿಜೇಶ್ ಚೌಟರನ್ನ ಭಾರತ ಮಾತೆ ತಮ್ಮ ಸೇವೆಗೆ ಆಯ್ಕೆ ಮಾಡಿದ್ದಾರೆ. ಈಗ ನಾವು ಅವರನ್ನ ಸಂಸದನಾಗಿ ಆಯ್ಕೆ ಮಾಡಬೇಕು. ಈ ಕಾರಣಕ್ಕೆ ನಾವು ದುಡಿದ ಹಣವನ್ನ ದೇಣಿಗೆಯಾಗಿ ನೀಡಿದ್ದೇವೆ ಎಂದು ದೇಣಿಗೆ ನೀಡಿದ ರಜನಿ ಶೆಟ್ಟಿ ಹೇಳಿಕೆ ನೀಡಿದ್ದಾರೆ.

Leave a Comment

Your email address will not be published. Required fields are marked *