Ad Widget .

ರಾಜ್ಯದಲ್ಲಿ ಮತ್ತೊಂದು ಕೊಳವೆ ಬಾವಿ ದುರಂತ| 500 ಅಡಿ ಕೊಳವೆ ಬಾವಿಯೊಳಗೆ ಬಿದ್ದ ಎರಡು ವರ್ಷದ ಕಂದಮ್ಮ

ಸಮಗ್ರ ವಾರ್ತೆ: ರಾಜ್ಯದಲ್ಲಿ ಮತ್ತೊಂದು ಕೊಳವೆ ಬಾವಿ ದುರಂತ ಸಂಭವಿಸಿದ್ದು ಇದೀಗ 500 ಅಡಿಯ ತೆರೆದ ಕೊಳವೆ ಬಾವಿಗೆ ಎರಡು ವರ್ಷದ ಬಾಲಕ ಬಿದ್ದಿರುವ ಘಟನೆ ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಲಚ್ಯಾಣ ಗ್ರಾಮದ ಬಳಿ ಜಮೀನಿನಲ್ಲಿ ಈ ಘಟನೆ ಸಂಭವಿಸಿದೆ.

Ad Widget . Ad Widget .

ಇಂಡಿ ತಾಲೂಕಿನ ಲಚ್ಯಾಣ ಗ್ರಾಮದಲ್ಲಿ ಶಂಕರಪ್ಪ ಮುಜುಗೊಂಡ ಎಂಬುವವರ ಜಮೀನಿನಲ್ಲಿ ಸುಮಾರು 500 ಅಡಿ ಆಳದಷ್ಟು ಕೊಳವೆ ಬಾವಿಯನ್ನು ಕೊಡೆಯಲಾಗಿತ್ತು. ಈ ವೇಳೆ ಕೊಳವೆ ಬಾವಿಯಿಂದ ನೀರು ಬರದೇ ಹಿನ್ನೆಲೆಯಲ್ಲಿ ಅದನ್ನು ಹಾಗೆ ಬಿಟ್ಟಿದ್ದರು. ಈ ವೇಳೆ ಶಂಕರಪ್ಪ ಮುಜಗೊಂಡ್ ಅವರ ಮೊಮ್ಮಗ ಸಾತ್ವಿಕ್ ಮುಜುಗೊಂಡ ಆಟವಾಡುತ್ತಾ ತೆರೆದ ಕೊಳವೆ ಬಾವಿಗೆ ಬಿದ್ದಿದ್ದಾನೆ. ಅಂದಾಜು 20 ರಿಂದ 25 ಅಡಿ ಒಳಗೆ ಬಾಲಕ ಸಿಲುಕಿದ್ದಾನೆ ಎಂದು ಶಂಕಿಸಲಾಗಿದೆ.

Ad Widget . Ad Widget .

ತೆರೆದ ಬಾವಿಯಲ್ಲಿ ಬಾಲಕ ಸಾತ್ವಿಕ್ ಮುಜಗೊಂಡ ಎನ್ನುವ ಬಾಲಕನು ಆಟವಾಡುತ್ತಾ ಆಯತಪ್ಪಿ ತೆರೆದ ಕೊಳವೆಬಾವಿಯಲ್ಲಿ ಬಿದ್ದಿರುವ ಘಟನೆ ನಡೆದಿದೆ. ಸದ್ಯ ಬಾಲಕನನ್ನು ರಕ್ಷಿಸಲು ಇದೀಗ ಸ್ಥಳಕ್ಕೆ ರಕ್ಷಣಾ ಸಿಬ್ಬಂದಿ ಸೇರಿದಂತೆ ಪೊಲೀಸ್ ಅಧಿಕಾರಿಗಳು ಕೂಡ ಆಗಮಿಸಿದ್ದು, ಕಾರ್ಯಾಚರಣೆ ನಡೆಸುತ್ತಿದೆ.

ಸ್ಥಳದಲ್ಲಿ ಕಂದಾಯ ಇಲಾಖೆ ಅಧಿಕಾರಿಗಳು, ಪೊಲೀಸ್ ಅಧಿಕಾರಿಗಳು ಹಾಗೂ ರಕ್ಷಣಾ ಕಾರ್ಯಪಡೆ ಸೇರಿದಂತೆ ಅನೇಕರು ಬೀಡು ಬಿಟ್ಟಿದ್ದಾರೆ. ಇದೀಗ ಎರಡು ಜೆಸಿಬಿ ಗಳ ಮೂಲಕ ಕೊಳವೆ ಬಾವಿ ಸುತ್ತಲೂ ನೆಲವನ್ನು ಅಗಿಲಾಗುತ್ತಿದ್ದು, ಅಲ್ಲದೆ ಸುರಂಗ ಮಾರ್ಗ ಕೂಡ ಕೊರೆಯಲಾಗುತ್ತಿದೆ. ರಕ್ಷಣಾ ಕಾರ್ಯಚರಣೆ ಮುಂದುವರೆದಿದೆ ಎಂದು ಬಲ್ಲಮೂಲಗಳಿಂದ ತಿಳಿದು ಬಂದಿದೆ.

Leave a Comment

Your email address will not be published. Required fields are marked *