ಸಮಗ್ರ ನ್ಯೂಸ್: ಆಂಧ್ರ ಪ್ರದೇಶದಿಂದ ಬೆಂಗಳೂರಿಗೆ ಬಂದ ವ್ಯಕ್ತಿಯೊಬ್ಬ ಉಬರ್ ನಲ್ಲಿ ಆಟೋ ಬುಕ್ ಮಾಡಿದ್ರು, ಆದ್ರೆ ಆಟೋ ಬುಕ್ ಮಾಡಿ ಇಳಿದ ಮೇಲೆ ಆ ಪ್ರಯಾಣಿಕನಿಗೆ ಶಾಕ್ ಎದುರಾಗಿದೆ.
ಹೌದು ಆ ವ್ಯಕ್ತಿ ತುರ್ತು ಕೆಲಸಕ್ಕೆಂದು ಉಬರ್ ಆಟೋ ಬುಕ್ ಮಾಡಿದ್ದರು. ಟಿನ್ ಫ್ಯಾಕ್ಟರಿಯಿಂದ ಆಟೋ ಹತ್ತಿ ಕೋರಮಂಗಲಕ್ಕೆ ಬಂದು ಇಳಿದ ಪ್ರಯಾಣಿಕನಿಗೆ ಜಸ್ಟ್ 15 ಕಿ.ಮೀ ದೂರದ ಪ್ರಯಾಣಕ್ಕೆ ಆಟೋ ಚಾರ್ಜ್ 500-1000 ರೂ. ಅಲ್ಲ ಬದಲಿಗೆ 1 ಕೋಟಿ ರೂ. ತೋರಿಸಿದೆ. ಉಬರ್ ಆ್ಯಪ್‌ನಲ್ಲಿ ತೋರಿಸಿದ ಆಟೋ ಚಾರ್ಜ್ ನೋಡಿ, ಒಮ್ಮೆಲೆ ಶಾಕ್ ಆಗಿದೆ. ಯಾಕೆಂದರೆ ಟಿನ್ ಫ್ಯಾಕ್ಟರಿಯಿಂದ ಕೋರಮಂಗಲಗೆ 1,03,11,055 ರೂ. ಆಟೋ ಚಾರ್ಜ್ ತೋರಿತ್ತು. 207 ರೂ. ಆಗಿದ್ದ ಜಾಗದಲ್ಲಿ ಕೋಟಿ ರೂ. ತೋರಿಸಿದೆ.
ಈ ವಿಡಿಯೋವನ್ನು ಆ ಪ್ರಯಾಣಿಕ ಸೋಷಿಯಲ್ ಮೀಡಿಯಾದಲ್ಲಿ ಹಾಕಿದ್ದಾನೆ. ಉಬರ್ ನಿಂದ ಇಂತಹ ಮೋಸ ನಡೆಯುತ್ತಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.