Ad Widget .

ಹುಬ್ಬಳ್ಳಿ: ಇನ್ನೂ 10 ವರ್ಷ ಕಾಲ ಮೋದಿ ಆಡಳಿತ ಎಂದು IMF ಹೇಳಿದೆ;ಪ್ರಲ್ಹಾದ್‌ ಜೋಶಿ

ಸಮಗ್ರ ನ್ಯೂಸ್‌ : ಈ ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಸರ್ಕಾರವೇ ಮುಂದುವರಿಯುತ್ತದೆ. ಕನಿಷ್ಠ ಇನ್ನೂ 10 ವರ್ಷ ಕಾಲ ಮೋದಿ ಆಡಳಿತ ನಡೆಸುತ್ತಾರೆ ಎಂದು ಇಂಟರ್‌ನ್ಯಾಶನಲ್‌ ಮಾನಿಟರಿ ಫಂಡ್ ಹೇಳಿದೆ ಎಂದು ಕೇಂದ್ರ ಸಂಸದೀಯ ಸಚಿವ ಪ್ರಲ್ಹಾದ್‌ ಜೋಶಿ ನುಡಿದರು.

Ad Widget . Ad Widget .

ಪ್ರಲ್ಹಾದ್‌ ಜೋಶಿಯವರು ಶಿಗ್ಗಾಂವಿ ವಿಧಾನಸಭಾ ಕ್ಷೇತ್ರದ ದುಂಡಶಿ ಗ್ರಾಮದಲ್ಲಿ ಬಿಜೆಪಿ ಹಮ್ಮಿಕೊಂಡಿದ್ದ ಬಹಿರಂಗ ಪ್ರಚಾರ ಸಭೆಯಲ್ಲಿ ಮಾತನಾಡಿ, ಅಂತಾರಾಷ್ಟ್ರೀಯ ಮಟ್ಟದಲ್ಲೇ ಮೋದಿ ಆಡಳಿತದ ಮೆಚ್ಚುಗೆ ವ್ಯಕ್ತವಾಗಿದ್ದು, ಇಂಟರ್‌ನ್ಯಾಶನಲ್‌ ಮಾನಿಟರಿ ಫಂಡ್ ಅಂತಾರಾಷ್ಟ್ರೀಯ ಮಟ್ಟದ ಸಂಸ್ಥೆಯಾಗಿದೆ. ಮೋದಿ ಆಡಳಿತದಲ್ಲಿ ದೇಶದ 25 ಕೋಟಿ ಜನರು ಬಡತದಿಂದ ವಿಮುಕ್ತಿ ಹೊಂದಿದ್ದಾರೆಂದು ಆ ಸಂಸ್ಥೆಯ ವರದಿ ತಿಳಿಸಿದೆ ಎಂದು ಪ್ರಲ್ಹಾದ್‌ ಜೋಶಿ ಹೇಳಿದರು.

Ad Widget . Ad Widget .

ಬರುವ ಹತ್ತು ವರ್ಷದಲ್ಲಿ ದೇಶದಲ್ಲಿ ಬಡತನವನ್ನು ಸಂಪೂರ್ಣ ನಿರ್ಮೂಲನೆ ಮಾಡುವ ಜತೆಗೆ ಜಗತ್ತಿನಲ್ಲೇ ಭಾರತವನ್ನು ಅಭಿವೃದ್ಧಿಯಲ್ಲಿ ನಂಬರ್ 1 ರಾಷ್ಟ್ರವಾಗಿ ಪರಿವರ್ತಿಸಲು ಪ್ರಧಾನಿ ನರೇಂದ್ರ ಮೋದಿ ಸಂಕಲ್ಪ ಹೊಂದಿದ್ದಾರೆ.

ಬರುವ 5 ವರ್ಷದೊಳಗೆ ದೇಶದ ಎಲ್ಲರಿಗೂ ಮನೆ ಸಿಗಬೇಕು ಎಂಬ ದಿಶೆಯಲ್ಲಿ ಕೇಂದ್ರ ಸಂಪುಟದಲ್ಲಿ ಚರ್ಚೆಯಾಗಿದೆ. 2 ಕೋಟಿ ಹೆಚ್ಚುವರಿ ಮನೆಗಳನ್ನು ಮಂಜೂರು ಮಾಡಲು ಆಗಲೇ ಅನುಮೋದಿಸಿದೆ. ಹತ್ತೇ ವರ್ಷದಲ್ಲಿ 6 ಕೋಟಿ ಮನೆ ನೀಡಿದೆ ಕೇಂದ್ರ ಕಾಂಗ್ರೆಸ್ 65 ವರ್ಷದ ಆಡಳಿತದಲ್ಲಿ ಕೇವಲ 3.5 ಕೋಟಿ ಮನೆಗಳನ್ನು ನೀಡಲಾಗಿದೆ. ಆದರೆ, ನರೇಂದ್ರ ಮೋದಿ ಅವರು ಪ್ರಧಾನಿ ಆದ ಮೇಲೆ ಹತ್ತೇ ವರ್ಷದಲ್ಲಿ ಕಾಂಗ್ರೆಸ್‌ಗಿಂತ ಅಧಿಕ, ಅಂದರೆ 4 ಕೋಟಿಗೂ ಅಧಿಕ ಮನೆಗಳನ್ನು ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ ನೀಡಿದ್ದಾರೆ. ಒಟ್ಟು 6 ಕೋಟಿ ಮನೆಗಳನ್ನು ಮೋದಿ ಸರ್ಕಾರವು ಇದುವರೆಗೆ ಹಂಚಿಕೆ ಮಾಡಿದೆ ಎಂದು ಪ್ರಲ್ಹಾದ್‌ ಜೋಶಿ ಹೇಳಿದರು.

ಈ ವೇಳೆ ಬಿಜೆಪಿ ಮಂಡಲ ಅಧ್ಯಕ್ಷ ಶಿವಾನಂದ ಮ್ಯಾಗೇರಿ, ಪಕ್ಷದ ಪ್ರಮುಖರಾದ ಶ್ರೀಕಾಂತ ದುಂಡಿಗೌಡ್ರ, ತಿಪ್ಪಣ್ಣ ಸಾತಣ್ಣನವರ, ಶೋಭಾ ನಿಸ್ಸೀಮಗೌಡ್ರ ಹಾಗೂ ಕಾರ್ಯಕರ್ತರು ಇದ್ದರು.

Leave a Comment

Your email address will not be published. Required fields are marked *