Ad Widget .

ಹೈಕೋರ್ಟ್​ನ ಹಾಲ್ ನಲ್ಲಿ ವ್ಯಕ್ತಿ ಆತ್ಮಹತ್ಯೆಗೆ ಯತ್ನ

ಸಮಗ್ರ ನ್ಯೂಸ್: ಹೈಕೋರ್ಟ್​ನ ಹಾಲ್ 1ರಲ್ಲಿ ಮುಖ್ಯ ನ್ಯಾಯಮೂರ್ತಿ ಮುಂದೆ ವ್ಯಕ್ತಿಯೋರ್ವ ಬ್ಲೇಡ್ ನಿಂದ ಕುತ್ತಿಗೆ ಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ.

Ad Widget . Ad Widget .

ಮೈಸೂರಿನ ಶ್ರೀರಾಂಪುರ ಮೂಲದ ಶ್ರೀನಿವಾಸ್ ಚಿನ್ನಮ್ ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿ. ಶ್ರೀನಿವಾಸ್ ಅವರಿ​ಗೆ ಸಂಬಂಧಿಸಿದ ಪ್ರಕರಣದೊಂದು ಹೈಕೋರ್ಟ್​ ಮೆಟ್ಟಿಲೇರಿದೆ. ಪ್ರಕರಣ ವಿಚಾರಣೆ ನಡೆಯುತ್ತಿತ್ತು. ಪ್ರಕರಣದ ವಿಚಾರಣೆ ಅಂತ್ಯಕ್ಕೆ ತಲುಪಿದ್ದಂತೆ ನ್ಯಾಯಮೂರ್ತಿಗಳ ಎದುರು ಬಂದ ಶ್ರೀನಿವಾಸ್​ ಅರ್ಜಿಯೊಂದನ್ನು ನ್ಯಾಯಾಲಯದ ಸಿಬ್ಬಂದಿಗೆ ನೀಡಿ, ಅನ್ಯಾಯವಾಗಿದೆ ನನಗೆ ಎಂದು ಹೇಳಿ ಬ್ಲೆಡ್ ನಿಂದ ಕತ್ತು ಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ.

Ad Widget . Ad Widget .

ಪೊಲೀಸರು ತಕ್ಷಣ ಶ್ರೀನಿವಾಸ್​ ಅವರನ್ನು ರಕ್ಷಿಸಿ ಬೌರಿಂಗ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಇನ್ನು ಹೈಕೊರ್ಟ್​ಗೆ ಕೇಂದ್ರ ವಿಭಾಗದ ಡಿಸಿಪಿ, ಕಬ್ಬನ್ ಪಾರ್ಕ್ ಇನ್ಸ್​ಪೆಕ್ಟರ್ ಸ್ಥಳಕ್ಕೆ ಭೇಟಿ ನೀಡಿದ್ದಾರೆ.

Leave a Comment

Your email address will not be published. Required fields are marked *