ಮೈಸೂರು : ದೇವೇಗೌಡರು ನಾಯಕರನ್ನು ಬೆಳೆಸುತ್ತಾರೆ ಹೊರತು ತುಳಿಯುವುದಿಲ್ಲ: ಪ್ರತಾಪ್‌ ಸಿಂಹ

ಸಮಗ್ರ ನ್ಯೂಸ್‌ : ದೇವೇಗೌಡರು ನಾಯಕರನ್ನು ಬೆಳೆಸುತ್ತಾರೆ ಹೊರತು ತುಳಿದು ಗೊತ್ತಿಲ್ಲ ಎಂದು ಸಂಸದ ಪ್ರತಾಪ್‌ ಸಿಂಹ ಸಚಿವ ವೆಂಕಟೇಶ್‌ಗೆ ತಿರುಗೇಟು ನೀಡಿದ್ದಾರೆ.

Ad Widget ... ..

ದೇವೇಗೌಡರೇ ಪ್ರತಾಪ್ ಸಿಂಹಗೆ ಬಿಜೆಪಿ ಟಿಕೆಟ್ ತಪ್ಪಿಸಿದ್ದಾರೆ ಎಂಬ ಸಚಿವ ಕೆ ವೆಂಕಟೇಶ್ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು ಅನ್ನ ತಿನ್ನುವ ಬಾಯಲ್ಲಿ ಏನೇನೋ ಮಾತನಾಡಬೇಡಿ. ನನಗೆ ಟಿಕೆಟ್ ಕೊಡಿಸಬೇಕು ಎಂದು ಅಮಿತ್ ಶಾ ಅವರ ಜೊತೆ ಫೋನಿನಲ್ಲಿ ದೇವೇಗೌಡರು ಮಾತನಾಡಿದ್ದರು ಎಂದು ಹೇಳಿದರು.

Ad Widget

ಅಮಿತ್ ಶಾ ಅವರಲ್ಲಿ ನನಗೆ ಟಿಕೆಟ್ ಕೊಡಿ ಎಂದು ಕೇಳಿದವರಲ್ಲಿ ದೇವೇಗೌಡರು ಒಬ್ಬರು. ಇಂತಹ ವ್ಯಕ್ತಿ ನನಗೆ ಟಿಕೆಟ್ ತಪ್ಪಿಸುತ್ತಾರೆ ಅಂತ ಹೇಳಿದರೆ ಹೇಗೆ ಎಂದು ಪ್ರತಾಪ್‌ ಸಿಂಹ ಪ್ರಶ್ನಿಸಿದರು. ವೆಂಕಟೇಶ್ ಅವರು ಇಂತಹ ಹೇಳಿಕೆ ಕೊಡುವುದನ್ನು ನಿಲ್ಲಿಸಬೇಕು. ಈ ಹೇಳಿಕೆಯಿಂದ ಅವರ ಮೇಲಿದ್ದ ಎಲ್ಲಾ ಗೌರವವು ಮರೆಯಾಗಿದೆ. ನಿಮ್ಮನ್ನು ರಾಜಕೀಯವಾಗಿ ಬೆಳೆಸಿ ಶಕ್ತಿ ತುಂಬಿದ್ದು ದೇವೇಗೌಡರು ಎಂಬುದನ್ನು ಮರೆಯಬೇಡಿ ಎಂದರು.

Leave a Comment

Your email address will not be published. Required fields are marked *