ಸಮಗ್ರ ನ್ಯೂಸ್: ಲೋಕಸಭಾ ಚುನಾವಣೆ 2024 ರ ಮತದಾನ ಏಪ್ರಿಲ್ 19 ರಂದು ಆರಂಭವಾಗಲಿದ್ದು, ದೇಶಾದ್ಯಂತ ತೀವ್ರ ರಾಜಕೀಯ ಚಟುವಟಿಕೆ
ನಡೆದಿದೆ. ಈ ಹಿನ್ನಲೆಯಲ್ಲಿ ಪ್ರಮುಖ ಪ್ರವೇಶ ಪರೀಕ್ಷೆಗಳು ಮತ್ತು ವೃತ್ತಿಪರ ಸಾಮಥ್ರ್ಯ ಪರೀಕ್ಷೆಗಳ ದಿನಾಂಕಗಳನ್ನು ಬದಲಾಯಿಸಲಾಗಿದೆ.
ಮೇ 26ಕ್ಕೆ ನಿಗದಿಯಾಗಿದ್ದ ಯುಪಿಎಸ್‍ಸಿ ನಡೆಸುವ ನಾಗರಿಕ ಸೇವೆಗಳ ಪರೀಕ್ಷೆ 2024ರ ವೇಳಾಪಟ್ಟಿಯನ್ನು ಆರಂಭದಲ್ಲಿ ಪರೀಕ್ಷೆ ಜೂನ್ 16ಕ್ಕೆ ಮುಂದೂಡಲಾಗಿದೆ.
ಜುಲೈ 7ರಂದು ನಡೆಯಬೇಕಿದ್ದ ನೀಟ್ ಪಿಜಿ ಪರೀಕ್ಷೆ ಜೂನ್ 23ಕ್ಕೆ ನಡೆಯಲಿದೆ. ಫಲಿತಾಂಶಗಳು ಈ ಹಿಂದೆ ಘೋಷಿಸಿದಂತೆ ಜುಲೈ 15ರೊಳಗೆ ಪ್ರಕಟವಾಗಲಿದೆ
ಎಇಇ ಮೇನ್ 2024ರ ಪರೀಕ್ಷೆಯ ದಿನಾಂಕಗಳನ್ನು ಹೊಸ ವೇಳಾಪಟ್ಟಿಯ ಪ್ರಕಾರ ಜೆಇಇ ಮೇನ್ 2024 ಸೆಷನ್ 2 ಅನ್ನು ಏಪ್ರಿಲ್ 4 ಮತ್ತು 12ರ ನಡುವೆ ನಡೆಸಲಾಗುತ್ತದೆ. ಪೇಪರ್ 1 (ಬಿಇ / ಬಿಟೆಕ್) ಏಪ್ರಿಲ್ 4, 5, 6, 8 ಮತ್ತು 9ರಂದು ನಡೆಯಲಿದ್ದು, ಪೇಪರ್ 2 ಏಪ್ರಿಲ್ 12ರಂದು ನಡೆಯಲಿದೆ.
ಮೇ 8ರಂದು ನಡೆಸಲಿದ್ದ ಕರ್ನಾಟಕ ಪಿಎಸ್‍ಐ ಪರೀಕ್ಷೆಯ ದಿನಾಂಕವನ್ನೂ ಕರ್ನಾಟಕದಲ್ಲಿ ಚುನಾವಣೆ ಮುಗಿದ ಬಳಿಕ ಪ್ರಕಟಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ತೆಲಂಗಾಣ ರಾಜ್ಯ ಎಂಜಿನಿಯರಿಂಗ್, ಕೃಷಿ ಮತ್ತು ಫಾರ್ಮಸಿ ಸಾಮಾನ್ಯ ಪ್ರವೇಶ ಪರೀಕ್ಷೆ ಮೇ 9, 10, 11 ಮತ್ತು 12ರಂದು ನಡೆಯಲಿದೆ.