Ad Widget .

ಚಿಕ್ಕಮಗಳೂರು: ಮುಸ್ಲಿಂ ಸಮುದಾಯವನ್ನು ಶೈಕ್ಷಣಿಕ, ರಾಜಕೀಯವಾಗಿ ಬಲಗೊಳಿಸಿ;ರಜ್ವಿ

ಸಮಗ್ರ ನ್ಯೂಸ್ : ರಾಜ್ಯದಲ್ಲಿ ಮುಸ್ಲಿಂ ರಾಜಕೀಯ ನಾಯಕರ ಕೊರತೆಯಿರುವ ಹಿನ್ನೆಲೆಯಲ್ಲಿ ಶೈಕ್ಷಣಿಕ ಹಾಗೂ ರಾಜಕೀಯವಾಗಿ ಬಹಳಷ್ಟು ಹಿಂದುಳಿದಿದ್ದಾರೆ ಎಂದು ಸಾಮಾಜಿಕ ಚಿಂತಕ ಫೈರೋಜ್ ಅಹ್ಮದ್ ರಜ್ವಿ ಹೇಳಿದರು.

. Ad Widget . . Ad Widget . Ad Widget Ad Widget . Ad Widget . Ad Widget . Ad Widget . Ad Widget . Ad Widget . Ad Widget .

ಈ ಕುರಿತು ಹೇಳಿಕೆ ನೀಡಿರುವ ಅವರು ಮುಸ್ಲೀಂ ಪ್ರಾಮಾಣಿಕ ನಾಯಕರನ್ನು ಗುರುತಿಸಿ ಸಮುದಾಯದವರ ಹಿತದೃಷ್ಟಿಯನ್ನು ಕಾಪಾಡಲು ಹಾಗೂ ರಾಜಕೀಯ ಪ್ರವೃತ್ತಿಯನ್ನು ಬಲಗೊಳಿಸಲು ಪ್ರತಿಯೊಂದು ಸಂಘ-ಸಂಸ್ಥೆಗಳು ಮುಂದಾಗಬೇಕೆಂದು ತಿಳಿಸಿದ್ದಾರೆ.

Ad Widget . Ad Widget . Ad Widget .

ಕಳೆದ ಬಾರಿಯ ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಅನೇಕ ಮುಸ್ಲಿಂ ನಾಯಕರು ಸೇವೆ ಸಲ್ಲಿಸಿದ್ದು ರಾಜಕೀಯದಲ್ಲಿ ಮುತವರ್ಜಿಯನ್ನು ವಹಿಸಿದ್ದರ ಕಾರಣ ಅಂದು ವಿಧಾನಸಭೆಯಿಂದ ಸಂಸತ್ ಭವನದಲ್ಲೂ ಸಹ ಮುಸ್ಲಿಮರ ಪರ ಧ್ವನಿ ಗೋಚರಿಸುತ್ತಿತ್ತು ಎಂದಿದ್ದಾರೆ.

ಇದೀಗ ಬೆರಳೆಣಿಕೆಯ ಮುಸ್ಲಿಂ ನಾಯಕರಿದ್ದು ಸಮುದಾಯದಲ್ಲಿ ರಾಜಕೀಯ ನಾಯಕರ ಕೊರತೆ ಉಂಟಾಗಿರುತ್ತದೆ. ಇದಕ್ಕೆ ನಮ್ಮಲ್ಲಿನ ವೈಯುಕ್ತಿಕ ದ್ವೇಷಗಳೇ ಕಾರಣವಾಗಿದೆ. ಇಂದಿನ ರಾಜಕೀಯ ಬೆಳವಣಿಗೆಯಲ್ಲಿ ಗ್ರಾ.ಪಂ.ನಿಂದ ಲೋಕಸಭೆ, ಮತ್ತು ರಾಜ್ಯಸಭೆವರೆಗೂ ಮುಸ್ಲಿಮರ ರಾಜಕೀಯ ಪ್ರವೇಶ ಅತ್ಯವಶ್ಯಕ ಎಂದು ಹೇಳಿದ್ದಾರೆ.

ರಾಜ್ಯದಲ್ಲಿ ಹಿಂದಿನ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯಾದ್ಯಂತ ಮುಸ್ಲಿಮರು ಜಾತ್ಯತೀತ ಸರ್ಕಾರ ರಚಿಸಲು ಹಗಲಿರುಳು ಶ್ರಮಿಸಿದ ಪ್ರತಿಫಲ ಇಂದು ರಾಜ್ಯದಲ್ಲಿ ಕಾಂಗ್ರೆಸ್ ಆಡಳಿತ ನಡೆಸಲು ಕಾರಣವಾಗಿದೆ. ಪಕ್ಷದ ನಿಷ್ಟಾವಂತ ಮುಸ್ಲಿಂ ಕಾರ್ಯಕರ್ತರಿಗೆ ನಿಗಮ ಮಂಡಳಿಗಳಲ್ಲಿ ಸ್ಥಾನಮಾನ ಕಲ್ಪಿಸದೆ ಕಡೆಗಣಿಸಿ ಸಮುದಾಯದಲ್ಲಿ ಗೊಂದಲ ವಾತಾವರಣ ಸೃಷ್ಟಿಯಾಗಿದೆ ಎಂದಿದ್ದಾರೆ.

ಜಿಲ್ಲೆಯಲ್ಲಿ ಹಿರಿಯ ಕಾರ್ಯಕರ್ತರನ್ನು ಸರ್ಕಾರದ ನಿಗಮ ಮಂಡಳಿಗಳಲ್ಲಿ ಪ್ರಮುಖ ಸ್ಥಾನಮಾನ ಕಲ್ಪಿಸಿ ಪ್ರೋತ್ಸಾಹಿಸಲು ಪಕ್ಷದ ಉನ್ನತ ನಾಯಕರು ಮುಂದಾಗುವ ಅವಶ್ಯಕತೆ. ಪಕ್ಷದಲ್ಲಿನ ಆಂತರಿಕ ಕಲಹಗಳನ್ನು ಬದಿಗಿಟ್ಟು ಪಕ್ಷಕ್ಕೆ ದುಡಿಯುತ್ತಿರುವ ಮುಸ್ಲಿಂ ಕಾರ್ಯಕರ್ತರಿಗೆ ಮನವೊಲಿಸುವ ಕೆಲಸವನ್ನು ಕೈಗೊಂಡಲ್ಲಿ ಲೋಕಸಭೆ ಚುನಾವಣೆ ಎದುರಿಸಲು ಅನುಕೂಲವಾಗುತ್ತದೆ ಎಂದು ತಿಳಿಸಿದ್ದಾರೆ

Leave a Comment

Your email address will not be published. Required fields are marked *