ಸಮಗ್ರ ನ್ಯೂಸ್: ಬೆಂಗಳೂರಿನಲ್ಲಿ ಪ್ರಯಾಣಿಕರಿದ್ದ ಬಿಎಂಟಿಸಿ ಬಸ್ ಹತ್ತಲು ಚಿರತೆ ಮರಿಯೊಂದು ಯತ್ನಿಸಿರುವಂತಹ ಘಟನೆ ನಡೆದಿದೆ.
ತುರಹಳ್ಳಿ ಫಾರೆಸ್ಟ್ನಿಂದ ಚಿರತೆ ಮತ್ತು ಮರಿ ರಸ್ತೆಗೆ ನುಗ್ಗಿದೆ. ಚಿರತೆ ತಪ್ಪಿಸಿಕೊಂಡಿದ್ದು, ಮರಿ ಮಾತ್ರ ಬಸ್ ಕೆಳಗೆ ಅವಿತುಕೊಂಡಿತ್ತು. ಚಿರತೆ ಮರಿಗೆ ಬಿಎಂಟಿಸಿ ಚಾಲಕ ನೀರು ಕುಡಿಸಲು ಮುಂದಾಗಿದ್ದು, ಈ ವೇಳೆ ಚಾಲಕನ ಮೇಲೆ ದಾಳಿ ಮಾಡಲು ಮರಿ ಚಿರತೆ ಮುಂದಾಗಿದೆ.
ಕೆಂಗೇರಿ ಟೂ ಚಿಕ್ಕೇಗೌಡನ ಪಾಳ್ಯ ಮಾರ್ಗದಲ್ಲಿ ಸಂಚಾರ ಮಾಡುತ್ತಿದ್ದ ಬಸ್ ಕೆಳಗೆ ಮರಿ ಚಿರತೆ ಅವಿತುಕೊಂಡಿತ್ತು. ಹೀಗಾಗಿ ಬಸ್ನಲ್ಲಿದ್ದ ಪ್ರಯಾಣಿಕರನ್ನು ಕೆಳಗೆ ಇಳಿಯದಂತೆ ಚಾಲಕ ಮತ್ತು ಕಂಡಕ್ಟರ್ ಸೂಚನೆ ನೀಡಿದ್ದಾರೆ. ವಿಚಾರ ತಿಳಿದ ಅರಣ್ಯ ಇಲಾಖೆ ಸಿಬ್ಬಂದಿಗಳು ಚಿರತೆ ಮರಿಯನ್ನು ರಕ್ಷಣೆ ಮಾಡಿದ್ದಾರೆ.