ಸಮಗ್ರ ನ್ಯೂಸ್ : ದೇಶ ದ್ರೋಹಿಗಳ ಹಾಗೂ ರಾಷ್ಟ್ರ ಪ್ರೇಮಿಗಳ ನಡುವಿನ ಸ್ಪರ್ಧೆ ಎಂಬ ಹೇಳಿಕೆಯಲ್ಲಿ ದೇಶ ದ್ರೋಹಿಗಳು ಯಾರೆಂಬುದನ್ನು ಬಿಜೆಪಿ ಸ್ಪಷ್ಟ ಪಡಿಸಬೇಕಾಗಿದೆ. ಹಿಂದುಳಿದ ವರ್ಗಕ್ಕೆ ಅವಹೇಳನ ಮಾಡುವ ಕಾರ್ಯವನ್ನು ಮಾಡುವ ಜತೆಗೆ ದೇಶ ಪ್ರೇಮದ ಬಗ್ಗೆ ಅನುಮಾನ ಇದ್ದಾಗ ತಮಗೆ ತಾವೇ ಪ್ರಮಾಣ ಪತ್ರ ನೀಡುವ ಕಾರ್ಯ ಬಿಜೆಪಿಯಿಂದ ನಡೆದಿದೆ. ಅಭಿವೃದ್ಧಿಗೆ ಹಾಗೂ ಅಭಿವೃದ್ಧಿ ಹೀನತೆಯ ನಡುವಿನ ಚುನಾವಣೆಯಾಗಿದೆ ಎಂದು ಕೆ.ಪಿ.ಸಿ.ಸಿ. ವಕ್ತಾರ ಅಮಳ ರಾಮಚಂದ್ರ ಹೇಳಿದರು.
ಪಠ್ಯ ಪುಸ್ತಕ ಪರಿಷ್ಕರಣೆಯಲ್ಲಿ ನಾರಾಯಣ ಗುರುಗಳ ವಿಚಾರವನ್ನು ಕಿತ್ತು ಹಾಕಿ, ಈಗ ಪದ್ಮರಾಜ ಆರ್. ಪೂಜಾರಿಯವರನ್ನು ದ್ರೇಹ ದ್ರೋಹಿ ಎಂದಿರುವುದು ಅಕ್ಷಮ್ಯವಾದ ವಿಚಾರವಾಗಿದೆ. ಒಂದು ಲಕ್ಷ ಕೋಟಿಗೆ ಸೊನ್ನೆ ಎಷ್ಟು ಎಂಬುದೇ ಗೊತ್ತಿಲ್ಲದವರು, ಅನುದಾನವನ್ನು ಯಾವ ಕಾಮಗಾರಿಗೆ ನೀಡಲಾಗಿದೆ ಎಂದು ತೋರಿಸಬೇಕಾಗಿದೆ. ಕಾಂಗ್ರೆಸ್ಸಿನ ಅಭ್ಯರ್ಥಿ ಜಿಲ್ಲೆಗೆ ಹಚ್ಚಿದ ಕೋಮು ಸೂಕ್ಷ್ಮ ಪ್ರದೇಶವೆಂಬ ಕಳಂಕವನ್ನು ದೂರಮಾಡಿ ಜಿಲ್ಲೆಯಲ್ಲಿ ಸೌಹಾರ್ಧತೆ, ಶಾಂತಿ, ನೆಮ್ಮದಿಯನ್ನು ಸ್ಥಾಪಿಸುವುದು, ಹೊಸ ಯೋಜನೆಗಳನ್ನು ಜಾರಿಗೆ ತಂದು ಯವಕರಿಗೆ ಉದ್ಯೋಗಾವಕಾಶ ಹೆಚ್ಚಿಸುವುದು, ಪುತ್ತೂರಿಗೆ ಮೆಡಿಕಲ್ ಕಾಲೇಜು ತರುವ ಹೋರಾಟಕ್ಕೆ ಕೈಜೋಡಿಸುವುದು ಮೊದಲಾದ ಜನಪರ ಕನಸನ್ನು ಅವರು ಪ್ರಕಟಿಸಿದ್ದಾರೆ. ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಅಲ್ಪ ಸಂಖ್ಯಾತ ಘಟಕದ ಶಖೂರ್ ಹಾಜಿ, ಕಾಂಗ್ರೆಸ್ ಮುಖಂಡ ವಲೇರಿಯನ್ ಡಯಾಸ್, ಮಹೇಶ್ ರೈ, ವೇದನಾತ ಸುವರ್ಣ ಉಪಸ್ಥಿತರಿದ್ದರು.