Ad Widget .

ಒಂದು ವಾಹನ, ಒಂದು ಫಾಸ್ಟ್ಯಾಗ್’ ನಿಯಮ ಜಾರಿಗೆ/ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಘೋಷಣೆ

ಸಮಗ್ರ ನ್ಯೂಸ್: ಸರ್ಕಾರಿ ಸ್ವಾಮ್ಯದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಘೋಷಿಸಿದ್ದ ‘ಒಂದು ವಾಹನ, ಒಂದು ಫಾಸ್ಟ್ಯಾಗ್’ ನಿಯಮವು ಸೋಮವಾರದಿಂದಲೇ ದೇಶಾದ್ಯಂತ ಜಾರಿಗೆ ಬಂದಿದೆ.

. Ad Widget . . Ad Widget . Ad Widget Ad Widget . Ad Widget . Ad Widget . Ad Widget . Ad Widget . Ad Widget . Ad Widget .

ಇದು ಹಲವು ವಾಹನಗಳಿಗೆ ಒಂದೇ ಫಾಸ್ಟ್ಯಾಗ್ ಬಳಕೆಯನ್ನು ನಿರ್ಬಂಧಿಸುತ್ತದೆ ಅಥವಾ ನಿರ್ದಿಷ್ಟ ವಾಹನಕ್ಕೆ ಹಲವು ಫಾಸ್ಟ್ಯಾಗ್‌ಗಳನ್ನು ಲಿಂಕ್ ಮಾಡುವುದನ್ನೂ ತಡೆಗಟ್ಟುತ್ತದೆ.ಮಾ.1ರಿಂದಲೇ ಇದು ಜಾರಿಗೆ ಬರಬೇಕಿತ್ತು. ಆದರೆ ನಿರ್ಬಂಧಿತ ಪೇಟಿಎಂ ಪೇಮೆಂಟ್‌ ಬ್ಯಾಂಕ್‌ನ ಫಾಸ್ಟ್ಯಾಗ್ ಬಳಕೆದಾರರು ಸಮಸ್ಯೆಗೀಡಾದ ಕಾರಣ ಗಡುವನ್ನು 1 ತಿಂಗಳು ವಿಸ್ತರಿಸಲಾಗಿತ್ತು. ಹೀಗಾಗಿ ಏ.1ರಿಂದ ಇದು ಜಾರಿಗೆ ಬಂದಿದೆ.

Ad Widget . Ad Widget . Ad Widget .

ಈ ಕುರಿತು ಮಾತನಾಡಿದ ಹಿರಿಯ ಅಧಿಕಾರಿಯೊಬ್ಬರ, ‘ಇನ್ನು ಬಹು ಫಾಸ್ಟ್ಯಾಗ್‌ಗಳು ಕಾರ್ಯನಿರ್ವಹಿಸುವುದಿಲ್ಲ. ಒಂದು ವಾಹನಕ್ಕೆ ಬಹು ಫಾಸ್ಟ್ಯಾಗ್‌ಗಳನ್ನು ಹೊಂದಿರುವ ಜನರಿಗೆ ಇಂದಿನಿಂದ (ಏಪ್ರಿಲ್ 1) ಆ ಎಲ್ಲ ಫಾಸ್ಟ್ಯಾಗ್‌ಗಳನ್ನೂ ಬಳಸಲು ಸಾಧ್ಯವಾಗುವುದಿಲ್ಲ’ ಎಂದರು.

ಈ ವರೆಗೆ ಜನರು ಒಂದೇ ವಾಹನಕ್ಕೆ ಹಲವು ಫಾಸ್ಟ್ಯಾಗ್ ಲಿಂಕ್‌ ಮಾಡುತ್ತಿದ್ದರು ಅಥವಾ ಅನೇಕ ವಾಹನಗಳಿಗೆ ಒಂದೇ ಫಾಸ್ಟ್ಯಾಗ್‌ ಬಳಸುವುದನ್ನು ರೂಢಿಸಿಕೊಂಡಿದ್ದರು. ಇದನ್ನು ತಡೆಗಟ್ಟಿ ಟೋಲ್‌ಗಳಲ್ಲಿ ತಡೆರಹಿತ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲು ಕೇಂದ್ರ ಸರ್ಕಾರ ‘ಒಂದು ವಾಹನ-ಒಂದು ಫಾಸ್ಟ್ಯಾಗ್‌’ ನಿಯಮ ಜಾರಿಗೆ ತಂದಿತ್ತು. ಇದಕ್ಕಾಗಿ ಕೆವೈಸಿ ಅಪೂರ್ಣ ಇರುವ ಫಾಸ್ಟ್ಯಾಗ್‌ ಗ್ರಾಹಕರು ತಾವು ಅದನ್ನು ಪಡೆದ ಬ್ಯಾಂಕ್‌ಗಳಿಗೆ ಹೋಗಿ ಕೆವೈಸಿ ನವೀಕರಣ ಮಾಡಿಸಿಕೊಳ್ಳಬೇಕು ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಸೂಚಿಸಿತ್ತು

Leave a Comment

Your email address will not be published. Required fields are marked *