ಸಮಗ್ರ ನ್ಯೂಸ್: ದ್ವಿತೀಯ ಪಿಯುಸಿ ಪರೀಕ್ಷಾ ಮೌಲ್ಯಮಾಪನ ಮುಕ್ತಾಯದ ಹಂತದಲ್ಲಿ ಇದ್ದು, ಫಲಿತಾಂಶ ಇದೇ ತಿಂಗಳ 10ನೇ ತಾರೀಖಿನಂದು ಪ್ರಕಟವಾಗುವ ಸಾಧ್ಯತೆಗಳಿವೆ.
ಕಳೆದ ಮಾರ್ಚ್ 1ರಿಂದ 22 ರವರೆಗೆ ರಾಜ್ಯದಲ್ಲಿ 1120 ಕ್ಕೂ ಹೆಚ್ಚು ಕೇಂದ್ರಗಳಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆ ನಡೆದಿದ್ದು, ಒಟ್ಟಾರೆ ಏಳು ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಮಾ.25 ರಿಂದ ಮೌಲ್ಯಮಾಪನ ಆರಂಭವಾಗಿದ್ದು, ಇದೀಗ ಮುಕ್ತಾಯದ ಹಂತದಲ್ಲಿದೆ.
ಇನ್ನೊಂದು ವಾರದಲ್ಲಿ ಕಂಪ್ಯೂಟರೀಕರಣ ಕೂಡ ಆಗಲಿದ್ದು, ಎಲ್ಲವೂ ಅಂದುಕೊಂಡ ಸಮಯಕ್ಕೇ ಮುಕ್ತಾಯವಾದರೆ ಏ.10 ಅಥವಾ ಆಸುಪಾಸಿನ ದಿನದಲ್ಲಿ ಫಲಿತಾಂಶ ಪ್ರಕಟವಾಗುವ ಸಾಧ್ಯತೆ ಇದೆ.