Ad Widget .

ಮಧ್ಯಪ್ರದೇಶದಲ್ಲಿ ರೈಲ್ವೆ ಸೇತುವೆ ಕುಸಿತ

ಸಮಗ್ರ ನ್ಯೂಸ್‌ : ಕುವಾರಿ ನದಿ ಮೇಲಿನ ರೈಲ್ವೆ ಸೇತುವೆ ಕುಸಿದ ಘಟನೆ ಇಂದು ಮಧ್ಯಪ್ರದೇಶದ ಮೊರೈನಾದಲ್ಲಿ ನಡೆದಿದೆ. ಘಟನೆಯಲ್ಲಿ ಐದು ಕಾರ್ಮಿಕರು ಗಾಯಗೊಂಡಿದ್ದಾರೆ.

Ad Widget . Ad Widget .

ಶತಮಾನದಷ್ಟು ಹಳೆಯದಾದ ರೈಲ್ವೆ ಸೇತುವೆಯನ್ನು ಕಳಚುವ ಪ್ರಕ್ರಿಯೆಯಲ್ಲಿ ಕಾರ್ಮಿಕರು ನಿರತರಾಗಿದ್ದಾಗ ಈ ಅವಘಡ ಸಂಭವಿಸಿದೆ. ರೈಲ್ವೆ ಹಳಿಯನ್ನು ನ್ಯಾರೋ ಗೇಜ್‌ನಿಂದ ಬ್ರಾಡ್‌ ಗೇಜ್‌ಗೆ ಪರಿವರ್ತಿಸಲಾಗುತ್ತಿದ್ದು, ಸೇತುವೆಯನ್ನು ಆ ಸಲುವಾಗಿ ಕಳಚುವ ಕಾಮಗಾರಿ ನಡೆಸಲಾಗುತ್ತಿತ್ತು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Ad Widget . Ad Widget .

ಗ್ಯಾಸ್‌ ಕಟರ್‌ ಬಳಸಿ ಸೇತುವೆಯ ಉಕ್ಕಿನ ಭಾಗವನ್ನು ತುಂಡರಿಸುವ ಕಾರ್ಯದಲ್ಲಿ ಕಾರ್ಮಿಕರು ನಿರತರಾಗಿದ್ದಾಗ ಅವಘಡ ಸಂಭವಿಸಿದ್ದು, ಗಾಯಗೊಂಡ ಕಾರ್ಮಿಕರನ್ನು ಆಸ್ಪತ್ರೆಗೆ ಸೇರಿಸಲಾಗಿದೆ ಎಂದೂ ಹೇಳಿದ್ದಾರೆ.

Leave a Comment

Your email address will not be published. Required fields are marked *