ಚಿಕ್ಕಮಗಳೂರು: ರಾಜಕೀಯವನ್ನು ವೃತ್ತಿ ಮಾಡಿಕೊಳ್ಳುವುದಕ್ಕಿಂತ ವ್ರತವನ್ನಾಗಿ ಮಾಡಿಕೊಳ್ಳಬೇಕಾಗಿದೆ ;ಕೋಟಾ ಶ್ರೀನಿವಾಸ ಪೂಜಾರಿ

ಸಮಗ್ರ ನ್ಯೂಸ್ : ರಾಜಕೀಯವನ್ನು ವೃತ್ತಿ ಮಾಡಿಕೊಳ್ಳುವುದಕ್ಕಿಂತ ವ್ರತವನ್ನಾಗಿ ಮಾಡಿಕೊಳ್ಳಬೇಕಾಗಿದೆ ಎಂದು ಉಡುಪಿ-ಚಿಕ್ಕಮಗಳೂರು ಲೋಕಸಭಾಕ್ಷೇತ್ರದ ಜೆಡಿಎಸ್, ಬಿಜೆಪಿ ಮೈತ್ರಿಕೂಟದ ಅಭ್ಯರ್ಥಿ ಕೋಟಾ ಶ್ರೀನಿವಾಸ ಪೂಜಾರಿ ಹೇಳಿದರು.

Ad Widget ... ..

ಅವರು ಕಲ್ಯಾಣ ನಗರದ ದೀಪಕ್‌ ದೊಡ್ಡಯ್ಯ ನಿವಾಸದಲ್ಲಿ ಚುನಾವಣಾ ಪ್ರಚಾರ ಸಂಬಂಧ ಏರ್ಪಡಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿ ಯಾರೆಲ್ಲಾ ರಾಜಕೀಯವನ್ನು ವ್ರತವನ್ನಾಗಿ ಮಾಡಿಕೊಳ್ಳುತ್ತಾರೋ ಅವರು ರಾಜಕೀಯ ಮತ್ಸದ್ದಿಯಾಗುತ್ತಾರೆ ರಾಜಕೀಯ ವೃತ್ತಿ ಮಾಡಿಕೊಳ್ಳುವವರು ರಾಜಕಾರಣಿಗಳಾಗಿ ಮಾತ್ರ ಉಳಿಯುತ್ತಾರೆ ಎಂದರು.

Ad Widget

ಸಮಾಜದ ಉನ್ನತೀಕರಣ, ರಾಜಕೀಯ ಶುದ್ಧೀಕರಣ ದೇಶದ ಅಭಿವೃದ್ಧಿ ಸರಿಯಾದ ದಿಕ್ಕಿನಲ್ಲಿ ನಡೆಯಬೇಕಾದರೆ ಈ ಸಮಾಜದ ಸಜ್ಜನರು ಪ್ರಮುಖ ಪಾತ್ರ ವಹಿಸಬೇಕು ದುರ್ಜನರುದು? ಕಾರ್ಯಗಳನ್ನು ಮಾಡುತ್ತಿರುವಾಗ ಸಜ್ಜನರು ಮೌನ ವಹಿಸಿದರೆ ದುರ್ಜನರ ಕೈ ಮೇಲಾಗುತ್ತದೆಎಂದು ಎಚ್ಚರಿಸಿದರು.

ಶೈಕ್ಷಣಿಕ, ಸಾಂಸ್ಕೃತಿಕ, ಆರ್ಥಿಕವಾಗಿ ಈ ದೇಶ ಬಹಳ ಎತ್ತರಕ್ಕೆ ಬೆಳೆದಿದ್ದು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕಾರಣ ಎಂದರು. ಪ್ರಪಂಚದಲ್ಲಿ ಭಾರತ ಹೊಸ ದಿಕ್ಕಿನೊಂದಿಗೆ ತಲೆಯೆತ್ತಿ ನಿಂತಿದೆ. ಕಾರ್ಯಗಳಾಗಬೇಕಿದೆ ಉಡುಪಿ-ಚಿಕ್ಕಮಗಳೂರು ಲೋಕಸಭಾಕ್ಷೇತ್ರ ಒಂದು ಮಾದರಿ ಕ್ಷೇತ್ರವಾಗಬೇಕು ಇಲ್ಲಿರುವ ರೈತರ ಸಮಸ್ಯೆಗಳಿಗೆ ಧ್ವನಿಯಾಗಬೇಕು, ರಸ್ತೆಅಭಿವೃದ್ಧಿ ಹೆಚ್ಚಾಗಿ ನಡೆಯಬೇಕಾದರೆ ಬಿಜೆಪಿಗೆ ಮತ ನೀಡಿಎಂದು ಮನವಿ ಮಾಡಿದರು. ಶೈಕ್ಷಣಿಕವಾಗಿ ಈ ಕ್ಷೇತ್ರಉನ್ನತ ಸ್ಥಾನವನ್ನು ಗಳಿಸಬೇಕು, ವಿಶೇಷವಾಗಿ ಕೇಂದ್ರ ಸರ್ಕಾರದಿಂದ ಪ್ರವಾಸೋದ್ಯಮದಿಂದ ಹೆಚ್ಚು ಒತ್ತನ್ನುಕೊಡುವ ಆಲೋಚನೆ ಇದ್ದು ಈ ಕ್ಷೇತ್ರದಎಲ್ಲಾ ಗಣ್ಯರ, ವಿದ್ಯಾವಂತರ, ತಜ್ಞರ ಸಲಹೆ ಪಡೆದು ನನ್ನ ಕಾರ್ಯಗಳನ್ನು ಮುಂದುವರಿಸುತ್ತೇನೆ ಎಂದು ಭರವಸೆ ನೀಡಿದರು.

ಈ ಸಂವಾದ ಕಾರ್ಯಕ್ರಮದಲ್ಲಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಎಂ.ಆರ್‌ ದೇವರಾಜ ಶೆಟ್ಟಿ, ನಗರಾಧ್ಯಕ್ಷ ಪುಷ್ಟರಾಜ್, ನಿಕಟ ಪೂರ್ವ ಅಧ್ಯಕ್ಷ ಎಚ್.ಸಿ ಕಲ್ಮರುಡಪ್ಪ, ಡಾ|| ಜೆ.ಪಿ ಕೃಷ್ಣಗೌಡ, ದಿನೇಶ್ ಪಟೇಲ್, ಎಂ.ಎನ್ ಷಡಾಕ್ಷರಿ, ಡಾ|| ಸಿ.ಕೆ ಸುಬ್ರ್ರಾಯ, ದೀಪಕ್‌ ದೊಡ್ಡಯ್ಯ ಮತ್ತಿತರರು ಭಾಗವಹಿಸಿದ್ದರು.

Leave a Comment

Your email address will not be published. Required fields are marked *