Ad Widget .

ಕೇಜ್ರಿವಾಲ್‍ಗೆ ಎಪ್ರಿಲ್ 15 ರವರೆಗೆ ನ್ಯಾಯಾಂಗ ಬಂಧನ/ ತಿಹಾರ್ ಜೈಲಿಗೆ ಶಿಫ್ಟ್

ಸಮಗ್ರ ನ್ಯೂಸ್: ದೆಹಲಿಯ ರೋಸ್ ಅವೆನ್ಯೂ ನ್ಯಾಯಾಲಯ, ಅರವಿಂದ್ ಕೇಜ್ರಿವಾಲ್‍ಗೆ ಎಪ್ರಿಲ್ 15 ರವರೆಗೆ ನ್ಯಾಯಾಂಗ ಬಂಧನಕ್ಕೆ ನೀಡಿ ಆದೇಶ ಹೊರಡಿಸಿದ್ದು, ಇದರ ಜೊತೆಗೆ ಬಿಗಿ ಭದ್ರತೆಯ ಮಧ್ಯೆ ತಿಹಾರ್ ಜೈಲಿಗೆ ಕರೆತರಲಾಗಿದೆ.

Ad Widget . Ad Widget .

ಬಂಧನದ ಸಮಯದಲ್ಲಿ ಓದುವ ಸಾಮಗ್ರಿಗಳಿಗಾಗಿ ವಿಶೇಷ ವಿನಂತಿ ಮಾಡಿದ್ದಾರೆ. ಭಗವದ್ಗೀತೆ, ರಾಮಾಯಣ ಮತ್ತು ನೀರಜಾ ಚೌಧರಿ ಅವರ “ಹೌ ಪ್ರೈಮ್ ಮಿನಿಸ್ಟರ್ ಡಿಸೈಡ್ಸ್” ಎಂಬ ಮೂರು ಪುಸ್ತಕಗಳನ್ನು ತಮ್ಮೊಂದಿಗೆ ಇಟ್ಟುಕೊಳ್ಳಲು ಅವರ ವಕೀಲರು ನ್ಯಾಯಾಲಯದಿಂದ ಅನುಮತಿ ಕೋರಿದ್ದಾರೆ. ಅವರು ಜೈಲಿನಲ್ಲಿದ್ದಾಗ ಅಗತ್ಯ ಔಷಧಿಗಳನ್ನು ಸಹ ಕೇಳಿದ್ದಾರೆ.

Ad Widget . Ad Widget .

Leave a Comment

Your email address will not be published. Required fields are marked *