ಸಮಗ್ರ ನ್ಯೂಸ್ : ಟಾಟಾ ಕಂಪನಿ ಒಡೆತನದ ವಿಸ್ತಾರಾ ಏರ್‌ಲೈನ್ಸ್‌ಗೆ ಪೈಲಟ್‌ಗಳ ಕೊರತೆಯಿಂದಾಗಿ ಇಂದು ಕಂಪನಿಯ ಸುಮಾರು 70 ವಿಮಾನಗಳ ಸೇವೆ ರದ್ದಾಗಿದೆ ಎಂಬ ಮಾಹಿತಿ ತಿಳಿದು ಬಂದಿದೆ.
ಕಳೆದ ಒಂದು ವಾರದಿಂದ ಇದೇ ಕಾರಣದಿಂದ ವಿಸ್ತಾರಾದ 100ಕ್ಕೂ ಹೆಚ್ಚು ವಿಮಾನಗಳ ಸೇವೆಯಲ್ಲಿ ವ್ಯತ್ಯಯವಾಗಿದೆ.ಈ ಬಗ್ಗೆ ನಾಗರಿಕ ವಿಮಾನಯಾನ ಸಚಿವಾಲಯವು ಡಿಜಿಸಿಎದಿಂದ ವರದಿ ಕೇಳಿದೆ.
ವಿಸ್ತಾರ ಟಾಟಾ ಗ್ರೂಪ್ ಸೇರಿದ ನಂತರ ಅದರ ಪೈಲಟ್‌ಗಳು ಸಂಬಳ ಸೇರಿದಂತೆ ಇತರೆ ಅನುಕೂಲಗಳಿಗೆ ಆಗ್ರಹಿಸಿ ಅಘೋಷಿತ ಪ್ರತಿಭಟನೆ ನಡೆಸುತ್ತಿದ್ದಾರೆ. ಅನೇಕರು ಅನಾರೋಗ್ಯದ ನೆಪ ಒಡ್ಡಿ ಕೆಲಸಕ್ಕೆ ರಜೆ ಹಾಕಿದ್ದಾರೆ. ಇದರಿಂದ ವಿಸ್ತಾರ ಏರ್‌ಲೈನ್ಸ್ ಸೇವೆಯಲ್ಲಿ ಸಾಕಷ್ಟು ವ್ಯತ್ಯಯವಾಗಿದೆ. ಸೇವೆಯ ವ್ಯತ್ಯಯದ ಬಗ್ಗೆ ವಿಸ್ತಾರಾ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿಲ್ಲ. ಈ ಸಂಸ್ಥೆಯು 300 ವಿಮಾನಗಳನ್ನು ನಿರ್ವಹಿಸುತ್ತಿದೆ ಎಂಬ ಮಾಹಿತಿ ಮೂಲಗಳಿಂದ ತಿಳಿದು ಬಂದಿದೆ.