Ad Widget .

ಉಡುಪಿ: ಸರಳೇಬೆಟ್ಟುವಿನಲ್ಲಿ ಮನೆಯೊಳಗೆ ನುಗ್ಗಿ ಕೋಳಿಗಳನ್ನು ಬಲಿ ಪಡೆದ ಚಿರತೆ

ಸಮಗ್ರ ನ್ಯೂಸ್‌ : ಮಣಿಪಾಲ ಸಮೀಪದ ಸರಳೇಬೆಟ್ಟು ಪರಿಸರದಲ್ಲಿ ಮತ್ತೆ ಚಿರತೆ ಹಾವಳಿ ಕಂಡುಬಂದಿದ್ದು, ಮನೆಯೊಂದರ ಕೋಳಿ ಗೂಡಿಗೆ ಲಗ್ಗೆ ಇಟ್ಟ ಚಿರತೆ, ಕೋಳಿಗಳನ್ನು ಬಲಿ ಪಡೆದುಕೊಂಡಿದೆ.

Ad Widget . Ad Widget .

ಸರಳೇಬೆಟ್ಟುವಿನ ರಾಮಮಂದಿರದ ಸಮೀಪ ಸುನಿತಾ ಡಿಸೋಜ ಎಂಬವರ ಮನೆಗೆ ರಾತ್ರಿ ಹೊತ್ತಿನಲ್ಲಿ ದಾಳಿ ನಡೆಸಿದ ಚಿರತೆ, ಕೋಳಿ ಗೂಡಿನಲ್ಲಿದ್ದ ಎರಡು ಕೋಳಿಗಳನ್ನು ತಿಂದಿದೆ. ಒಂದು ಕೋಳಿಯನ್ನು ಗೂಡಿನಲ್ಲಿಯೇ ಬಿಟ್ಟು ಓಡಿ ಹೋಗಿದೆ. ಈ ದೃಶ್ಯ ಮನೆಯ ಸಿಸಿಟಿವಿಯಲ್ಲಿ ಕಂಡು ಬಂದಿದೆ.

Ad Widget . Ad Widget .

ಮಣಿಪಾಲದ ಸುತ್ತಮುತ್ತ ಪ್ರದೇಶಗಳಾದ ಸರಳೇಬೆಟ್ಟು, ಕೋಡಿ, ಎಂಡ್ ಪಾಯಿಂಟ್, ಕೆಳಪರ್ಕಳ, ಸಣ್ಣಕ್ಕಿಬೆಟ್ಟು, ಪರ್ಕಳ ಗ್ಯಾಟ್ಸನ್ ಪರಿಸರದಲ್ಲಿ ಚಿರತೆಯ ಹಾವಳಿ ಹೆಚ್ಚಾಗಿದ್ದು, ಈ ಪರಿಸರದಲ್ಲಿ ಎರಡು ಮೂರು ಚಿರತೆ ಗಳಿವೆ ಎಂದು ಸ್ಥಳೀಯರು ಹೇಳುತ್ತಿದ್ದಾರೆ. ಮತ್ತೆ ಈ ಭಾಗದಲ್ಲಿ ಚಿರತೆ ಕಾಣಿಸಿ ಕೊಂಡಿರುವುದು ಸ್ಥಳೀಯರಲ್ಲಿ ಆತಂಕ ಮೂಡಿದೆ.

Leave a Comment

Your email address will not be published. Required fields are marked *