Ad Widget .

ಶಿವರಾಜ್ ಕೆಆರ್ ಪೇಟೆಯಿಂದ ಅನುಚಿತ ವರ್ತನೆ| ಕಾರ್ ಟಚ್ ಮಾಡಿ ಮಹಿಳೆಗೆ ಅವಾಚ್ಯ ಶಬ್ದಗಳಿಂದ ನಿಂದನೆ

ಸಮಗ್ರ ನ್ಯೂಸ್: ʻಕಾಮಿಡಿ ಕಿಲಾಡಿʼ ಖ್ಯಾತಿಯ ಶಿವರಾಜ್ ಕೆಆರ್ ಪೇಟೆಯಿಂದ ಅನುಚಿತ ವರ್ತನೆ ಹಿನ್ನೆಲೆ ಆರೋಪವೊಂದು ಕೇಳಿ ಬಂದಿದೆ. ಮಹಿಳೆಯೊಬ್ಬರನ್ನು ನಿಂದಿಸಿ, ಅವಾಚ್ಯ ಪದವನ್ನು ಬಳಸಿದ್ದಾರೆ ಎಂದು ಈ ಬಗ್ಗೆ ಶಾರದಾ ಬಾಯಿ ಎಂಬುವರು ಸುಬ್ರಮಣ್ಯನಗರ ಠಾಣೆಗೆ ದೂರು ನೀಡಿದ್ದಾರೆ.

Ad Widget . Ad Widget .

ಮಹಿಳೆಯ ದೂರಿನಲ್ಲಿ ʻʻನಾನು ಕೆಲಸ ಮುಗಿಸಿಕೊಂಡು ದ್ವಿಚಕ್ರ ವಾಹನದಲ್ಲಿ ಮನೆಗೆ ವಾಪಸ್ ಬರುತ್ತಿದ್ದೆ. ಆಗ ರಾಜ್‌ಕುಮಾರ್‌ ರಸ್ತೆ 10ನೇ ಕ್ರಾಸ್‌ನ ಹಿಂಭಾಗದ ಪೆಟ್ರೋಲ್‌ ಬಂಕ್‌ ಹತ್ತಿರ ಶಿವರಾಜ್ ಕೆಆರ್ ಪೇಟೆ ಅವರು ಕಾರನ್ನು ತಂದು ನನ್ನ ವಾಹನಕ್ಕೆ ಟಚ್‌ ಮಾಡಿದರು. ಕಾರಿನಲ್ಲಿ ಶಿವರಾಜ್ ಕೆಆರ್ ಪೇಟೆ ಹಾಗೂ ಅವರ ಸ್ನೇಹಿತರು ಇದ್ದರು. ನನ್ನ ವಾಹನಕ್ಕೆ ಕಾರ್ ಟಚ್ ಮಾಡಿ ʻಯಾವಳೆ ನೀನು? ಅಲ್ಲಾಡಿಸಿಕೊಂಡು ಹೋಗ್ತಿಯಾ! ಎಂದು ಅವಾಚ್ಯ ಪದ ಬಳಸಿ ನಿಂದನೆ ಮಾಡಿದ್ದಾರೆʼʼ ಎಂದು ದೂರು ನೀಡಿದ್ದಾರೆ. ಹಾಗೇ ಶಿವರಾಜ್‌ ಕೆ ಆರ್‌ ಪೇಟೆ, ಕಾರಿನ ಮಾಲೀಕ ಮತ್ತು ಸ್ನೇಹಿತರನ್ನು ಕರೆಸಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸುಬ್ರಮಣ್ಯನಗರ ಠಾಣೆಗೆ ಮಹಿಳೆ ದೂರು ನೀಡಿದ್ದಾರೆ. ಇದೀಗ ಶಿವರಾಜ್ ಕೆಆರ್ ಪೇಟೆ ಅವರನ್ನು ಪೊಲೀಸರು ಠಾಣೆಗೆ ಕರೆಸಿದ್ದಾರೆ.

Ad Widget . Ad Widget .

Leave a Comment

Your email address will not be published. Required fields are marked *