ಸಮಗ್ರ ನ್ಯೂಸ್ : ಶಾಲೆಯಲ್ಲಿ ಹ್ಯಾಂಡ್ ಪಂಪ್ ಬಳಿ ಇರಿಸಲಾಗಿದ್ದ ಮೇಲ್ಜಾತಿ ವ್ಯಕ್ತಿಯ ನೀರಿನ ಬಕೆಟ್ ಅನ್ನು ಎಂಟು ವರ್ಷದ ದಲಿತ ಬಾಲಕ ಮುಟ್ಟಿದನು ಎಂಬ ಕಾರಣಕ್ಕೆ ಬಾಲಕನಿಗೆ ಥಳಿಸಿರುವ ಘಟನೆ ರಾಜಸ್ಥಾನದ ಅಲ್ವಾರ್‌ನ ಮಂಗಳೇಶಪುರ ಗ್ರಾಮದಲ್ಲಿ ನಡೆದಿದೆ.
ನಾಲ್ಕನೇ ತರಗತಿ ಬಾಲಕ ಚಿರಾಗ್ ಎಂದು ಗುರುತಿಸಲಾಗಿದೆ. ರತಿರಾಮ್ ಠಾಕೂರ್ ಎಂಬ ಮೇಲ್ಜಾತಿಯ ವ್ಯಕ್ತಿ ಹ್ಯಾಂಡ್ ಪಂಪ್‌ನಿಂದ ಬಕೆಟ್‌ನಲ್ಲಿ ನೀರು ತುಂಬಿಸುತ್ತಿದ್ದನು. ಚಿರಾಗ್ ನೀರು ಕುಡಿಯಲು ಬಕೆಟ್ ಅನ್ನು ಸರಿಸಿದ್ದ. ಆತ ಮುಟ್ಟಿದ್ದಕ್ಕೆ ಕೋಪಗೊಂಡ ಠಾಕೂರ್, ಚಿರಾಗ್ ಮೇಲೆ ಹಲ್ಲೆ ಮಾಡಿದ್ದಾನೆ.
ಚಿರಾಗ್ ಅವರ ತಂದೆ ಪನ್ನಾಲಾಲ್ ಅವರು ಠಾಕೂರ್ ವಿರುದ್ಧ ಪೊಲೀಸ್ ದೂರು ನೀಡಿದ್ದರು. ನೀರು ಕುಡಿಯಲು ಪ್ರಯತ್ನಿಸುತ್ತಿರುವಾಗ ತನ್ನ ಮಗ ‘ಆಕಸ್ಮಿಕವಾಗಿ’ ಬಕೆಟ್ ಅನ್ನು ಮುಟ್ಟಿದ್ದಾನೆ ಎಂದು ಹೇಳಿದು, ಇದಕ್ಕಾಗಿ ನನ್ನ ಮಗನಿಗೆ ಆತರ ಗಂಭೀರ ರೀತಿಯಲ್ಲಿ ಥಳಿಸಿದ್ದಾನೆ. ಅವನ ಕಿರುಚಾಟವನ್ನು ಕೇಳಿ ಶಾಲೆಯ ಬಳಿ ಹೋಗುತ್ತಿದ್ದ ನನ್ನ ಸಂಬಂಧಿ ಸ್ಥಳಕ್ಕಾಗಮಿಸಿ ನೋಡಿದಾಗ ನನ್ನ ಮಗ ಅಳುತ್ತಿದ್ದುದನ್ನು ನೋಡಿ ನನಗೆ ಘಟನೆಯ ಬಗ್ಗೆ ಮಾಹಿತಿ ನೀಡಲಾಗಿದೆ. ನಂತರ ನಾವು ಅಪರಾಧಿಯ ಮನೆಗೆ ಹೋದೆವು ಎಂದು ಪನ್ನಾಲಾಲ್ ಹೇಳಿದ್ದಾರೆ.
ಚಿರಾಗ್‌ನ ತಂದೆ ಠಾಕೂರ್ ಅವರಲ್ಲಿ ಕ್ಷಮೆ ಕೇಳಿದ್ದರೂ ಅದನ್ನು ಸ್ವೀಕರಿಸಿಲ್ಲ. ಬದಲಿಗೆ ಠಾಕೂರ್, ಪನ್ನಾಲಾಲ್ ಮತ್ತು ಅವರ ಕುಟುಂಬದ ವಿರುದ್ಧ ಜಾತಿ ನಿಂದನೆ ಮಾಡಿ ಬೈದಿದ್ದಾನೆ. ಕುಟುಂಬ ಸದಸ್ಯರು ರಾಮಗಢ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. ಆರೋಪಿಯನ್ನು ಬಂಧಿಸಲು ಪೊಲೀಸ್ ತಂಡವನ್ನು ಕಳುಹಿಸಲಾಗಿದೆ ಎಂದು ಎಸ್‌ಎಚ್‌ಒ ಸವಾಯಿ ಸಿಂಗ್ ಹೇಳಿದ್ದಾರೆ.