Ad Widget .

ಚೀನಾಗೆ ಸೆಡ್ಡು ಹೊಡೆದ ಫಿಲಿಪ್ಪಿನ್ಸ್/ ಸಮುದ್ರ ಮಾರ್ಗದ ಭದ್ರತೆ ಇನ್ನಷ್ಟು ಬಿಗಿ

ಸಮಗ್ರ ನ್ಯೂಸ್: ಬಲಿಷ್ಠ ಚೀನಾಗೆ ಪುಟ್ಟ ರಾಷ್ಟ್ರ ಫಿಲಿಪ್ಪಿನ್ಸ್ ಸೆಡ್ಡುಹೊಡೆದಿದ್ದು,
ಸಮುದ್ರ ಮಾರ್ಗದ ಭದ್ರತೆಯನ್ನು ಇನ್ನಷ್ಟು ಬಿಗಿಗೊಳಿಸಲು ಫಿಲಿಪ್ಪಿನ್ಸ್ ಅಧ್ಯಕ್ಷ ಫರ್ಡಿನ್ಯಾಂಡ್ ಮಾರ್ಕಸ್ ಜೂನಿಯರ್ ಆದೇಶ ನೀಡಿದ್ದಾರೆ.

Ad Widget . Ad Widget .

ದಕ್ಷಿಣ ಚೀನಾ ಸಮುದ್ರ ವಲಯದಲ್ಲಿ ನೌಕಾಪಡೆ ಸಂಘರ್ಷ, ಅತಿಕ್ರಮಣ ಪ್ರಯತ್ನಗಳು – ಹೆಚ್ಚುತ್ತಿರುವ ಬೆನ್ನಿಗೇ ಅಲರ್ಟ್ ಆಗಿರುವ ಫಿಲಿಪ್ಪಿನ್ಸ್‌ ಸರ್ಕಾರ, ಚೀನಾ ಹೆಸರನ್ನು ಉಲ್ಲೇಖಿಸದೆಯೇ ಈ ಆದೇಶ ಹೊರಡಿಸಿದೆ. ದಕ್ಷಿಣ ಚೀನಾ ಸಮುದ್ರ ವ್ಯಾಪ್ತಿ ಬಹುತೇಕ ತನ್ನ ಗಡಿಗೆ ಸೇರಿದೆ ಎಂದು ಚೀನಾ ಪ್ರತಿಪಾದಿಸುತ್ತಲೆ ಇದೆ. ಆದರೆ ಫಿಲಿಪ್ಪಿನ್ಸ್, ವಿಯೆಟ್ನಾಂ, ಇಂಡೊನೇಷ್ಯಾ, ಮಲೇಷ್ಯಾ ಈ ವಾದವನ್ನು ತಳ್ಳಿಹಾಕಿವೆ. ಈ ನಡುವೆ ದೇಶದ ಗಡಿ ಭಾಗದಲ್ಲಿನ ಚೀನಾದ ಚಟುವಟಿಕೆಗಳು, ದೇಶದ ಶಾಂತಿಗೆ ಧಕ್ಕೆ ತರುವ ಪ್ರಯತ್ನಗಳು ಹೆಚ್ಚುತ್ತಲೇ ಇರುವುದನ್ನು ಗಂಭೀರವಾಗಿ ಪರಿಗಣಿಸಿರುವ ಫಿಲಿಪ್ಪಿನ್ಸ್ ಸರ್ಕಾರ ಭದ್ರತೆ ಇನ್ನಷ್ಟು ಬಿಗಿಗೊಳಿಸಲು ಸಜ್ಜಾಗಿದೆ.

Ad Widget . Ad Widget .

Leave a Comment

Your email address will not be published. Required fields are marked *