ಕಾರವಾರ :ಬೈಕ್‌‌ಗೆ ನಗರಸಭೆ ವಾಹನ ಡಿಕ್ಕಿ: ಶಿಕ್ಷಕಿ ಸಾವು

ಸಮಗ್ರ ನ್ಯೂಸ್‌ : ಬೈಕ್‌‌ಗೆ ನಗರಸಭೆ ವಾಹನ ಡಿಕ್ಕಿ ಹೊಡೆದು ಶಿಕ್ಷಕಿ ಮೃತಪಟ್ಟಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಮಿರ್ಜಾನಕರ್ ಪೆಟ್ರೋಲ್ ಬಂಕ್ ಬಳಿ ನಡೆದಿದೆ.

Ad Widget ... ..

ವಿಜಯಾ ಮಾಸ್ತೆಪ್ಪ ಭೋವಿ (40) ಮೃತ ಪಟ್ಟ ದುರ್ದೈವಿ. ವಿಜಯಾ ಅವರು ತಾಲ್ಲೂಕಿನ ಬಂಡಲದ ಬಡಗಿ ಪ್ರಾಥಮಿಕ ಶಾಲೆಯ ಶಿಕ್ಷಕಿಯಾಗಿದ್ದರು. ಪತಿ ಜತೆಗೆ ವಿಜಯಾ ಅವರು ಬೈಕ್‌ನಲ್ಲಿ ತೆರಳುತ್ತಿದ್ದರು. ಈ ವೇಳೆ ಬೈಕ್‌ಗೆ ನಗರಸಭೆಯ ತ್ಯಾಜ್ಯ ತುಂಬುವ ಟ್ರಕ್ ಬಡಿದಿದೆ. ಈ ವೇಳೆ ಕೆಳಗೆ ಬಿದ್ದ ಶಿಕ್ಷಕಿ ವಿಜಯಾ ಅವರ ತಲೆ ಮೇಲೆ ಟ್ರಕ್ ಹತ್ತಿದೆ. ಪರಿಣಾಮ ಶಿಕ್ಷಕಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

Ad Widget

ಘಟನೆಯಲ್ಲಿ ವಿಜಯಾ ಪತಿಗೂ ಗಾಯವಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸ್ಥಳಕ್ಕೆ ನಗರ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಶಿರಸಿ ನಗರ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

Leave a Comment

Your email address will not be published. Required fields are marked *